Just In
Don't Miss!
- News
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮನೆಯಲ್ಲಿ ಒಡಕು: ಸ್ಪರ್ಧಿಗಳು ಏನಂತಾರೆ.?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಎರಡು ವಾರಗಳು ಕಳೆದಿವೆ ಅಷ್ಟೇ. ಅಷ್ಟು ಬೇಗ 'ಬಿಗ್ ಬಾಸ್' ಮನೆಯಲ್ಲಿ ಒಡಕು ಮೂಡಿದೆ. 'ದೊಡ್ಮನೆ' ಇಬ್ಭಾಗ ಆಗಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳು ಎಂಬ ಎರಡು ಗುಂಪುಗಳಾಗಿವೆ.
''ನಮ್ಮನ್ನ ತಿರಸ್ಕಾರ ಮನೋಭಾವದಿಂದ ಸೆಲೆಬ್ರಿಟಿ ಸ್ಪರ್ಧಿಗಳು ಕಾಣುತ್ತಿದ್ದಾರೆ. ನಮ್ಮನ್ನೆಲ್ಲ ಮೂಲೆಗುಂಪು ಮಾಡುತ್ತಿದ್ದಾರೆ'' ಎಂದು ಜನಸಾಮಾನ್ಯ ಸ್ಪರ್ಧಿಗಳೇ ಹೇಳಿಕೊಂಡಿದ್ದರು. ಇದಕ್ಕೆ ಸೆಲೆಬ್ರಿಟಿ ಸ್ಪರ್ಧಿಗಳು ಏನಂತಾರೆ.?
ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?
ಜನಸಾಮಾನ್ಯ ಸ್ಪರ್ಧಿಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳು ಕೀಳಾಗಿ ನೋಡುತ್ತಿರುವುದು ಯಾಕೆ.? ಕಾಮನ್ ಮ್ಯಾನ್ ನ ಸೆಲೆಬ್ರಿಟಿಗಳು ತುಳಿಯುತ್ತಿದ್ದಾರಾ.? ಎಂಬ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಮುಂದೆ ಸ್ಪರ್ಧಿಗಳು ಉತ್ತರಿಸಿದ್ದಾರೆ. ಯಾರ್ಯಾರು, ಏನೇನು ಹೇಳಿದರು ಎಂಬುದನ್ನು ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ನಮ್ಮನ್ನ ಕೇರ್ ಲೆಸ್ ಆಗಿ ತೆಗೆದುಕೊಂಡಿದ್ದಾರೆ ಎಂದ ದಿವಾಕರ್
''ನಾವು ಕಾಮನ್ ಮ್ಯಾನ್ ಆಗಿರುವುದರಿಂದ ಸೆಲೆಬ್ರಿಟಿಗಳೆಲ್ಲ ನಮ್ಮನ್ನ ಒಂಥರಾ ನೋಡುತ್ತಾರೆ. ಕೆಲಸ ಮಾಡಲು ಬಿಡುವುದಿಲ್ಲ. ನಮ್ಮನ್ನ ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ. ನಮ್ಮನ್ನ ಕೇರ್ ಲೆಸ್ ಆಗಿ ತೆಗೆದುಕೊಳ್ಳುತ್ತಾರೆ. ನಾವು ಕಾಮಿಡಿ ಮಾಡಿದರೂ ನಗುವುದಿಲ್ಲ'' ಎಂದು ದಿವಾಕರ್, ಸುದೀಪ್ ಮುಂದೆ ಹೇಳಿದರು.
'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

ಎಲ್ಲರೂ ಒಂದೇ.!
''ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಇದ್ದೇವೆ. ಸೆಲೆಬ್ರಿಟಿ-ಕಾಮನ್ ಮ್ಯಾನ್ ಎಂಬ ಭೇದಭಾವ ಇಲ್ಲ. ಅವರಿಗೆ ಅವರೇ inferiority complex ಹುಟ್ಟಿಸಿಕೊಂಡುಬಿಟ್ಟಿದ್ದಾರೆ'' - ಜಗನ್ನಾಥ್, ನಟ
ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

ಎರಡು ಗುಂಪಾಗಿರುವುದು ನಿಜ
''ನಾವ್ಯಾರೂ ಸೆಲೆಬ್ರಿಟಿಗಳು ಅಂತಿಲ್ಲ. ನಾವೆಲ್ಲರೂ ಮನುಷ್ಯರು. ನಾವೂ ತಿನ್ನುವುದು ಅನ್ನ. ಅದನ್ನ ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ. ನನಗೆ ಕಾಣುತ್ತಿರುವ ಹಾಗೆ ಎರಡು ಗುಂಪಾಗಿದೆ. ಅವರೆಲ್ಲ ಹೊರಗಡೆ ಇರುತ್ತಾರೆ. ನಮ್ಮ ಜೊತೆ ಬಂದು ಮಾತನಾಡುವುದಿಲ್ಲ'' - ಅನುಪಮಾ ಗೌಡ, ನಟಿ
ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

ಮನೆ ಇಬ್ಭಾಗ ಆಗಿದೆ
''ಮನೆ ಇಬ್ಭಾಗ ಆಗಿದೆ. ನಮ್ಮ ಮಾತುಗಳಿಗೆ ಇಲ್ಲಿ ಜಾಗ ಇಲ್ಲ. ಟೀಮ್ ಆದಾಗ ನಮ್ಮ ಅಭಿಪ್ರಾಯಗಳಿಗೆ ಬೆಲೆ ಇಲ್ಲ. ಎಲ್ಲವನ್ನೂ ಅವರವರೇ ನಿರ್ಧಾರ ಮಾಡಿಕೊಳ್ಳುತ್ತಾರೆ'' - ಸಮೀರಾಚಾರ್ಯ
ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಜಯಶ್ರೀನಿವಾಸನ್ ಹೇಳಿದಿಷ್ಟು
''ಕಾಮನ್ ಮ್ಯಾನ್ ಎಂಬ ಫೀಲಿಂಗ್ ದಿವಾಕರ್ ಹಾಗೂ ಮೇಘ ರವರಲ್ಲಿ ಇದೆ. ದಿವಾಕರ್ ಗೆ ತಮ್ಮನ್ನ ತಾವು ಪ್ರೆಸೆಂಟ್ ಮಾಡಿಕೊಳ್ಳಬೇಕು ಎಂಬ ಆಸೆ ಜಾಸ್ತಿ ಇದೆ'' - ಜಯಶ್ರೀನಿವಾಸನ್, ಸಂಖ್ಯಾಶಾಸ್ತ್ರಜ್ಞ
'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಎರಡು ಗುಂಪಾಗಿರುವುದು ಸತ್ಯ
''ಗುಂಪು ಆಗಿದೆ. ಅದನ್ನ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇನೆ'' - ಸಿಹಿ ಕಹಿ ಚಂದ್ರು

ರಿಯಾಝ್ ಅನಿಸಿಕೆ ಇದು
''ಊಟ ಬಡಿಸುವಾಗ ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿಗಳ ನಡುವೆ ಭೇದಭಾವ ಮಾಡುತ್ತಾರೆ. ಇಷ್ಟ ಬಂದವರಿಗೆ ಹೆಚ್ಚು ಊಟ ಕೊಡುತ್ತಾರೆ. ನಡವಳಿಕೆ ಮೂಲಕ ಭೇದಭಾವ ಮಾಡುತ್ತಿರುವುದು ಗೊತ್ತಾಗುತ್ತೆ. ನನ್ನನ್ನ ದಯಾಳ್ ಬಾಯಿಗೆ ಬಂದ ಹಾಗೆ ಬೈಯುತ್ತಿರುವಾಗ, ಯಾರೂ ಕೂಡ ಅವರು ಮಾತನಾಡುತ್ತಿರುವುದು ತಪ್ಪು ಅಂತ ಹೇಳಲಿಲ್ಲ. ಅದೇ ಚಂದ್ರು ಸರ್ ಗೆ ಯಾರಾದರೂ ಏನಾದರೂ ಅಂದ್ರೆ ಗೌರವ ಕೊಡಬೇಕು ಅಂತ ಎಲ್ಲರೂ ಹೇಳುತ್ತಾರೆ. ದಯಾಳ್ ಎಲ್ಲಿ ಇರುತ್ತಾರೋ, ಅಲ್ಲಿ ನಾನಿರಲು ನನಗೆ ಇಷ್ಟ ಆಗುತ್ತಿಲ್ಲ. ಅವರಿಗೆ ಮನುಷ್ಯತ್ವ ಇಲ್ಲ'' - ರಿಯಾಝ್
ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!

ಕಾಮನ್ ಮ್ಯಾನ್ ಫೀಲಿಂಗ್ ನಲ್ಲೇ ಬಂದಿದ್ದಾರೆ
''ಒಳಗಡೆ ಬರುವಾಗಲೇ, ಎಲ್ಲರೂ ಕಾಮನ್ ಮ್ಯಾನ್ ಫೀಲಿಂಗ್ ನಲ್ಲೇ ಬಂದಿದ್ದಾರೆ. ಅದೇ ಅವರ ಪ್ರಾಬ್ಲಂ. ಒಳಗಡೆ ಅದನ್ನೇ ಮುಂದುವರೆಸುತ್ತಿದ್ದಾರೆ. ನಾನು ರಿಯಾಝ್ ಅವರನ್ನ ಬೈದಿಲ್ಲ. ಈ ಬಗ್ಗೆ ನಾನು ಕ್ಲಿಯರ್ ಆಗಿದ್ದೇನೆ. ನಾನು ಇರುವ ಕಡೆ ರಿಯಾಝ್ ಬರಲ್ಲ ಅಂತ ಹೇಳಿದಕ್ಕೆ ನನಗೆ ಬೇಜಾರು ಆಗಿಲ್ಲ. ಅವರು ನನ್ನನ್ನ ಅರ್ಥ ಮಾಡಿಕೊಂಡಿಲ್ಲ. ಅರ್ಥ ಮಾಡಿಕೊಂಡರೆ ಖಂಡಿತವಾಗಿಯೂ ನನ್ನನ್ನ ಮಿಸ್ ಮಾಡಿಕೊಳ್ಳುತ್ತಾರೆ. ಒಳಗಡೆ ಇದ್ದರೆ.... ನನ್ನ ಪ್ರಕಾರ, ಅವರ ಬುದ್ಧಿವಂತಿಕೆ ಸ್ವಲ್ಪ ಕಮ್ಮಿ. ನೋಡೋಕೆ, ಮಾತನಾಡುವಾಗ ಸ್ಮಾರ್ಟ್ ಆಗಿ ಕಂಡರೂ, ಜನರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರಿಗನ್ನೂ ಪಳಗಬೇಕು'' - ದಯಾಳ್ ಪದ್ಮನಾಭನ್, ನಿರ್ದೇಶಕ

ಸುದೀಪ್ ಹೇಳಿದ್ದೇನು.?
''ವೀಕ್ಷಕರ ಪ್ರಕಾರ, ಮನೆ ಇಬ್ಭಾಗ ಆಗಿದೆ. ಮನೆ ಒಳಗೆ ಇರುವವರು ಅಡುಗೆ ಮಾಡುತ್ತಾ, ಅಡುಗೆ ಮನೆಯನ್ನು ಕಂಟ್ರೋಲ್ ಮಾಡುತ್ತಾ, ಇಡೀ ಮನೆಯ ವ್ಯವಹಾರವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಹೊರಗಡೆ ಕೂತಿರುವವರು ಒಳಗಿರುವವರ ಬಗ್ಗೆ ಬೇಜಾರು ಪಟ್ಟುಕೊಂಡು ನಿವೇದಿತಾ ಗೌಡ ಹೇಳಿದ ಹಾಗೆ insects ಮಧ್ಯೆ ಇದ್ದೀರಾ. ಇದು ಹೊರಗಡೆ ಕಾಣುತ್ತಿರುವುದು. ಇದು ನನ್ನ ಅಭಿಪ್ರಾಯ ಅಲ್ಲ'' ಎಂದು ಸುದೀಪ್ ಹೇಳಿದರು.