'ಬಿಗ್ ಬಾಸ್' ಮನೆ ಒಳಗೆ ಹೋಗ್ತಾರಾ ದಿಗಂತ್.?
ಕಲರ್ಸ್ ಕನ್ನಡ ವಾಹಿನಿ ತಯಾರು ಮಾಡಿರುವ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಆಯ್ಕೆ ಪಟ್ಟಿಯಲ್ಲಿ ದೂದ್ ಪೇಡ ದಿಗಂತ್ ಹೆಸರು ಇದ್ಯಂತೆ. ಹಾಗಾದ್ರೆ, ದಿಗಂತ್ ಈ ಬಾರಿ 'ಬಿಗ್ ಬಾಸ್' ಮನೆ ಒಳಗೆ ಹೋಗ್ತಾರಾ.? ಈ ಪ್ರಶ್ನೆಗೆ ಅವರೇ ಉತ್ತರ ಕೊಡ್ಬೇಕು.
ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್
'ನಂಬರ್ ಅಂದ್ರೆ ನಾನು... ನಾನು ಅಂದ್ರೆ ನಂಬರ್' ಎನ್ನುತ್ತ ನ್ಯೂಸ್ ಚಾನೆಲ್ ಗಳಲ್ಲಿ ಸಂಖ್ಯಾ ಶಾಸ್ತ್ರ ಹೇಳುವ ಆರ್ಯವರ್ಧನ್ ಮೇಲೆ ಕಲರ್ಸ್ ಕನ್ನಡ ವಾಹಿನಿ ಕಣ್ಣಿಟ್ಟಿದ್ಯಂತೆ. 'ಬಿಗ್ ಬಾಸ್' ಮೊದಲ ಆವೃತ್ತಿಯಲ್ಲಿ ಬ್ರಹ್ಮಾಂಡ ಗುರೂಜಿ ಬಂದಂತೆ, ಈ ಆವೃತ್ತಿಯಲ್ಲಿ ಆರ್ಯವರ್ಧನ್ ಬರ್ತಾರಾ ನೋಡೋಣ.
ಹಿತಾ ಚಂದ್ರಶೇಖರ್
ಸಿಹಿ ಕಹಿ ಚಂದ್ರು ಪುತ್ತಿ ಹಿತಾ ಚಂದ್ರಶೇಖರ್ ಕೂಡ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಊಹಾಪೋಹ ಕೇಳಿಬರುತ್ತಿದೆ.
ರಾಜು ತಾಳಿಕೋಟೆ
'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಆಯ್ಕೆ ಪಟ್ಟಿಯಲ್ಲಿ ನಟ ರಾಜು ತಾಳಿಕೋಟೆ ಹೆಸರೂ ಇದ್ಯಂತೆ.
ಕಿರುತೆರೆ ನಟಿ ಕಾವ್ಯ ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಗಾಂಧಾರಿ' ಧಾರಾವಾಹಿಯ ನಟಿ ಕಾವ್ಯ ಗೌಡ ಈ ಬಾರಿ 'ಬಿಗ್ ಬಾಸ್' ಹೋಗ್ತಾರೆ ಎಂಬ ಗುಲ್ಲೆದ್ದಿದೆ. ಅದು ನಿಜವಾಗುತ್ತಾ.?
ನಟ ಸುನಿಲ್ ರಾವ್
'ಎಕ್ಸ್ ಕ್ಯೂಸ್ ಮಿ' ಖ್ಯಾತಿಯ ನಟ ಸುನಿಲ್ ರಾವ್ ಕೂಡ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ್ದಾರಂತೆ.
ನಾರಾಯಣ್ ಪುತ್ರ ಪಂಕಜ್
ಕಲಾಸಾಮ್ರಾಟ್ ಎಸ್.ನಾರಾಯಣ್ ಪುತ್ರ ಪಂಕಜ್ ಕೂಡ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
50-50 ಚಾನ್ಸ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 50-50 ನಿಯಮ ಜಾರಿಗೆ ಬಂದಿದ್ದು, ಒಟ್ಟಾರೆ ಸ್ಪರ್ಧಿಗಳ ಪೈಕಿ ಅರ್ಧದಷ್ಟು ಸೆಲೆಬ್ರಿಟಿಗಳಿದ್ದರೆ, ಅರ್ಧದಷ್ಟು ಸಾಮಾನ್ಯ ಜನರು ಭಾಗವಹಿಸಲಿದ್ದಾರೆ.
ನಿಮ್ಮ ಪ್ರಕಾರ ಯಾರು ಇರಬೇಕು.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಯಾರೆಲ್ಲ ಇರಬೇಕು ಅಂತ ನೀವು ಬಯಸುತ್ತೀರಾ.? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ನಿಮ್ಮ ಚಾಯ್ಸ್ ಏನು ಅಂತ ನಮಗೆ ತಿಳಿಸಿ... ಯಾರಿಗೊತ್ತು ನೀವು ಬಯಸಿದವರೇ, ನಾಳೆ ಸೆಲೆಕ್ಟ್ ಆಗ್ಹೋದ್ರೆ....