»   » ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!

ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!

Posted By:
Subscribe to Filmibeat Kannada
ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.! | Filmibeat Kannada

ತಂಡಕ್ಕೆ ನೀಡಿದ್ದ ಮೊಟ್ಟೆಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ ನಲ್ಲಿ ತಮ್ಮ ಮಾತನ್ನು ಮೀರಿ ರಿಯಾಝ್ ಆಟವಾಡಿದಕ್ಕೆ ಟೀಮ್ ಕ್ಯಾಪ್ಟನ್ ದಯಾಳ್ ಮುನಿಸಿಕೊಂಡರು. ರಿಯಾಝ್ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು, ಎಲ್ಲರೆದುರು ದಯಾಳ್ ಕೂಗಾಡಿದರು. ನೈತಿಕತೆ ಬಗ್ಗೆ ಮಾತನಾಡಿದರು.

ಕೋಪದಲ್ಲಿ ಅದೆಲ್ಲ ನಡೆದಿದ್ದರೂ, ಸಮಾಧಾನ ಆದ್ಮೇಲೆ ರಿಯಾಝ್ ರವರ ಬಳಿ ದಯಾಳ್ ಕ್ಷಮೆ ಕೇಳಬಹುದಿತ್ತು. ರಿಯಾಝ್ ಕೂಡ ಇದನ್ನೇ ನಿರೀಕ್ಷೆ ಮಾಡುತ್ತಿದ್ದರು. ಆದ್ರೆ, ನೈತಿಕತೆಯ ವಿಚಾರ ಎತ್ತಿದ ದಯಾಳ್ ಕ್ಷಮೆ ಕೇಳಲಿಲ್ಲ.

'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡು ಆಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

ಇಡೀ ವಾರದ ಗದ್ದಲ-ಗಲಾಟೆ, ವಾದ-ವಿವಾದ-ವಾಕ್ಸಮರ ಬಗ್ಗೆ ಪಂಚಾಯತಿ ನಡೆಸಲು ಸುದೀಪ್ ಬಂದಾಗ ''ನೀವು ಯಾರಿಗಾದರೂ ಕ್ಷಮೆ ಕೇಳಲು, ಯಾರಿಂದ ಕ್ಷಮೆ ಕೇಳಿಸಿಕೊಳ್ಳಲು ಇಚ್ಛಿಸುತ್ತೀರಾ.?'' ಎಂದು 'ಬಿಗ್ ಬಾಸ್' ಮನೆ ಸದಸ್ಯರಲ್ಲಿ ಕೇಳಿದರು. ಆಗಲೂ ರಿಯಾಝ್ ರವರ ಬಳಿ ದಯಾಳ್ ಕ್ಷಮೆ ಕೇಳಲೇ ಇಲ್ಲ.! ಮುಂದೆ ಓದಿರಿ....

ದಯಾಳ್ ಕ್ಷಮೆ ಕೇಳಬೇಕು ಎಂದ ರಿಯಾಝ್

''ನನ್ನ ಬಳಿ ದಯಾಳ್ ಕ್ಷಮೆ ಕೇಳಬೇಕು. ಯಾಕಂದ್ರೆ, ಅವರು ಮನುಷ್ಯತ್ವ ಇಲ್ಲದೆ ನಡೆದುಕೊಂಡಿದ್ದಾರೆ. ಮನುಷ್ಯತ್ವ ಎಂಬ ಭಾವನೆಯೇ ಅವರಲ್ಲಿ ಇಲ್ಲ. ಅವರು ಕ್ಲಾಸ್ ಲೆಸ್ ಮ್ಯಾನ್ ಅಂತ ನಿರ್ಧಾರ ಮಾಡಿಕೊಂಡಿದ್ದೇನೆ. ಅಷ್ಟು ಕೆಟ್ಟ ಪದಗಳನ್ನು ಉಪಯೋಗಿಸಿ ಬೈಯ್ಯುತ್ತಾರೆ. ಇಲ್ಲಿಯವರೆಗೂ ಅವರು ನನ್ನನ್ನ ಕ್ಷಮೆ ಕೇಳಿಲ್ಲ. ಕ್ಷಮೆ ಕೇಳಬಾರದು ಎಂಬ ಅಹಂ ಅವರಲ್ಲಿ ಇರಬಹುದು. ಆದ್ರೆ, ಅವರು ಕ್ಷಮೆ ಕೇಳಬೇಕು ಎಂದು ನಾನು ಎಕ್ಸ್ ಪೆಕ್ಟ್ ಮಾಡುತ್ತೇನೆ'' ಎಂದು ಸುದೀಪ್ ಮುಂದೆ ರಿಯಾಝ್ ಹೇಳಿದರು.

ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

ಕ್ಷಮೆ ಕೇಳುವುದಿಲ್ಲ ಎಂದ ದಯಾಳ್

''ನಾನು ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕೆಟ್ಟ ಪದಗಳನ್ನು ನಾನು ಯಾರ ಮೇಲೆಯೂ ಬಳಸಿಲ್ಲ. ಹೀಗಾಗಿ ಕ್ಷಮೆ ಕೇಳುವ ಅವಶ್ಯಕತೆ ನನಗೆ ಇಲ್ಲ'' ಎಂದು ದಯಾಳ್ ವಿವರಣೆ ನೀಡಿದರು.

'ಥೂ' ಎಂದು ಕರೆದ ದಯಾಳ್ ವಿರುದ್ಧ ವೀಕ್ಷಕರು ಕೆಂಡಾಮಂಡಲ.!

ರಿಯಾಝ್ ಕ್ಷಮೆ ಕೇಳಬೇಕು.!

''ರಿಯಾಝ್ ನನ್ನನ್ನ ಕ್ಷಮೆ ಕೇಳಬೇಕು. ಯಾಕಂದ್ರೆ, ಕ್ಯಾಪ್ಟನ್ ಆಗಿ ನಾನು ನೈತಿಕತೆಯಿಂದ ಒಂದು ಆಟ ಆಡುತ್ತಿದ್ದೆ. ನನ್ನ ತಂಡದಲ್ಲಿ ನನ್ನ ಪರ್ಮಿಷನ್ ಇಲ್ಲದೆ, ಅವರವರೇ ಗೇಮ್ ಆಡುತ್ತಿದ್ದರು. ಹೀಗಾಗಿ, ಇಡೀ ತಂಡಕ್ಕೆ ಅವರು ಕ್ಷಮೆ ಕೇಳಬೇಕು'' ಎಂದರು ನಿರ್ದೇಶಕ ದಯಾಳ್.

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ದಯಾಳ್ ಇರುವ ಕಡೆ ನಾನಿರುವುದಿಲ್ಲ.!

''ನನ್ನನ್ನ ದಯಾಳ್ ಬಾಯಿಗೆ ಬಂದ ಹಾಗೆ ಬೈಯುತ್ತಿರುವಾಗ, ಯಾರೂ ಕೂಡ ಅವರು ಮಾತನಾಡುತ್ತಿರುವುದು ತಪ್ಪು ಅಂತ ಹೇಳಲಿಲ್ಲ. ದಯಾಳ್ ಎಲ್ಲಿ ಇರುತ್ತಾರೋ, ಅಲ್ಲಿ ನಾನಿರಲು ನನಗೆ ಇಷ್ಟ ಆಗುತ್ತಿಲ್ಲ. ಅವರಿಗೆ ಮನುಷ್ಯತ್ವ ಇಲ್ಲ'' ಎಂದರು ರಿಯಾಝ್.

ರಿಯಾಝ್ ಗೆ ಬುದ್ಧಿವಂತಿಕೆ ಕಮ್ಮಿ

''ನಾನು ರಿಯಾಝ್ ಅವರನ್ನ ಬೈದಿಲ್ಲ. ಈ ಬಗ್ಗೆ ನಾನು ಕ್ಲಿಯರ್ ಆಗಿದ್ದೇನೆ. ನಾನು ಇರುವ ಕಡೆ ರಿಯಾಝ್ ಬರಲ್ಲ ಅಂತ ಹೇಳಿದಕ್ಕೆ ನನಗೆ ಬೇಜಾರು ಆಗಿಲ್ಲ. ಅವರು ನನ್ನನ್ನ ಅರ್ಥ ಮಾಡಿಕೊಂಡಿಲ್ಲ. ಅರ್ಥ ಮಾಡಿಕೊಂಡರೆ ಖಂಡಿತವಾಗಿಯೂ ನನ್ನನ್ನ ಮಿಸ್ ಮಾಡಿಕೊಳ್ಳುತ್ತಾರೆ. ಒಳಗಡೆ ಇದ್ದರೆ....! ನನ್ನ ಪ್ರಕಾರ, ಅವರ ಬುದ್ಧಿವಂತಿಕೆ ಸ್ವಲ್ಪ ಕಮ್ಮಿ. ನೋಡೋಕೆ, ಮಾತನಾಡುವಾಗ ಸ್ಮಾರ್ಟ್ ಆಗಿ ಕಂಡರೂ, ಜನರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಅವರಿಗನ್ನೂ ಪಳಗಬೇಕು'' - ದಯಾಳ್ ಪದ್ಮನಾಭನ್

ನೈತಿಕತೆಯ ಪ್ರಶ್ನೆ

''ತಾವು ಹೇಳಿದ ಮಾತಿನಂತೆ ರಿಯಾಝ್ ನಡೆದುಕೊಳ್ಳಲಿಲ್ಲ ಅಂತ ನಿಮಗೆ ಕೆಟ್ಟ ಕೋಪ ಬರುತ್ತೆ. ನೈತಿಕತೆ ಬಗ್ಗೆ ಮಾತನಾಡುತ್ತೀರಿ. ಆದ್ರೆ, 'ಬಿಗ್ ಬಾಸ್' ಕೊಟ್ಟ ನಿಯಮಗಳನ್ನೇ ಪಾಲನೆ ಮಾಡದೆ, ಸ್ಟಾರ್ಟ್ ಅಂದಾಗ ಶುರು ಮಾಡುವುದು, ಸ್ಟಾಪ್ ಅಂದಾಗ ನಿಲ್ಲಿಸಿ ಬಿಡುವುದು ನೈತಿಕತೆಯೇ.?'' ಎಂದು ದಯಾಳ್ ಪದ್ಮನಾಭನ್ ಗೆ ಸುದೀಪ್ ಪ್ರಶ್ನೆ ಮಾಡಿದಾಗ ''ನಿಯಮಗಳನ್ನು ನಾನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇದನ್ನ ನಾನು ಒಪ್ಪಿಕೊಳ್ಳುತ್ತೇನೆ'' ಎಂದಷ್ಟೇ ದಯಾಳ್ ಹೇಳಿದರು.

English summary
Bigg Boss Kannada 5: Dayal Padmanabhan refused to apologize Riyaz

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X