»   » ಹೆಮ್ಮೆಯ ಕನ್ನಡ ಭಾಷೆಗೆ ಅವಮಾನ ಮಾಡಿದ್ರಾ 'ಗಾಂಧಾರಿ' ಜಗನ್ನಾಥ್.?

ಹೆಮ್ಮೆಯ ಕನ್ನಡ ಭಾಷೆಗೆ ಅವಮಾನ ಮಾಡಿದ್ರಾ 'ಗಾಂಧಾರಿ' ಜಗನ್ನಾಥ್.?

Posted By:
Subscribe to Filmibeat Kannada

ಅದು ಸಿಟ್ಟಿನಲ್ಲಿ ಬಂದ ಮಾತೋ ಅಥವಾ ಬಾಯಿ ತಪ್ಪಿ ಹಾಗಂತ ಹೇಳಿದ್ರೋ ಇಲ್ಲ ಸರಿಯಾಗಿ ಕೇಳಿಸಿಕೊಳ್ಳದೆ ದುಡುಕಿ ಮಾತನಾಡಿದ್ರೋ ಗೊತ್ತಿಲ್ಲ. ಒಟ್ನಲ್ಲಿ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ 'ಬಿಗ್ ಬಾಸ್' ಮನೆಯಲ್ಲಿ ಆಡಿದ ಒಂದು ಮಾತು ಇದೀಗ ಕನ್ನಡಿಗರನ್ನು ಕೆರಳಿಸಿದೆ.

''ಇಂಗ್ಲೀಷ್ ನಲ್ಲಿ ಇಬ್ಬರೂ ಮಾತನಾಡಬೇಡಿ'' ಅಂತ ಕ್ಯಾಪ್ಟನ್ ರಿಯಾಝ್ ಹೇಳಿದಾಗ ಕೋಪಗೊಂಡು ಜಗನ್ನಾಥ್ ಮಾಡಿದ ರಂಪ ಇದೀಗ ವಿವಾದದ ಕೇಂದ್ರಬಿಂದು ಆಗಿದೆ.

ಕನ್ನಡ ಭಾಷೆಗೆ ಜಗನ್ನಾಥ್ ಅವಮಾನ ಮಾಡಿದ್ದಾರೆ ಎಂಬ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಮುಂದೆ ಓದಿರಿ....

ಕನ್ನಡಿಗರ ರೋಷಾಗ್ನಿ ಉರಿದುರಿದು.!

''ಇಂಗ್ಲೀಷ್ ನಲ್ಲಿ ಮಾತನಾಡಬೇಡಿ'' ಅಂತ ರಿಯಾಝ್ ಹೇಳಿದಾಗ ''ನನ್ನಿಷ್ಟ'' ಅಂತ ಜಗನ್ ಹೇಳಿದಕ್ಕೆ ಕನ್ನಡಿಗರು ಕೋಪಗೊಂಡಿದ್ದಾರೆ. ಅದಕ್ಕೆ ಈ ಟ್ರೋಲ್ ಸಾಕ್ಷಿ.!
(ಚಿತ್ರಕೃಪೆ: ಕಾಗಕ್ಕ ಗುಬ್ಬಕ್ಕ)

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ಅಷ್ಟಕ್ಕೂ ಆಗಿದ್ದೇನು.?

'ತಾಂಬೂಲ ಬೇಕು' ಟಾಸ್ಕ್ ನಲ್ಲಿ ಸಮೀರಾಚಾರ್ಯ ಆಕ್ರಮಣಕಾರಿಯಾದರು. ತೆಂಗಿನಕಾಯಿಯನ್ನ ಹಿಡಿಯಲು ಸಮೀರಾಚಾರ್ಯ ನೆಟ್ ಮೇಲೆ ಬೀಳುತ್ತಿದ್ದರು. ಅದಕ್ಕೆ ತಿರುಗೇಟು ನೀಡಲು ಜಾರು ಬಂಡೆಯನ್ನ ಅಲುಗಾಡಿಸಲು ಜಗನ್ ಶುರು ಮಾಡಿದರು. ಈ ಎಲ್ಲದಕ್ಕೂ ಸಮೀರಾಚಾರ್ಯ ಕಾರಣ ಅಂತ ಕ್ಯಾಪ್ಟನ್ ರಿಯಾಝ್ ಬೆಟ್ಟು ಮಾಡಿ ತೋರಿಸಿದಾಗ ಜಗನ್ ವಿರುದ್ಧ ಸಮೀರಾಚಾರ್ಯ ದನಿ ಎತ್ತಿದರು.

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಹುಚ್ಚು ಹಿಡಿದಿದ್ಯಾ.?

ಜಗನ್ ವಿರುದ್ಧ ಸಮೀರಾಚಾರ್ಯ ದನಿ ಎತ್ತಿದಾಗ... ಅದನ್ನ ರಿಯಾಝ್ ಪ್ರಶ್ನಿಸಿದಾಗ... ''ಗಾನ್ ಮ್ಯಾಡ್. (ಹುಚ್ಚು ಹಿಡಿದಿದ್ಯಾ) ಸುಳ್ಳು ಹೇಳಬೇಡಿ ನನಗೆ'' ಎಂದರು ಜಗನ್ನಾಥ್.

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

ತಿರುಗೇಟು ನೀಡಿದ ಸಮೀರಾಚಾರ್ಯ

''ಹೀ ಹ್ಯಾಸ್ ನಾಟ್ ಗಾನ್ ಮ್ಯಾಡ್ (ಅವರಿಗೆ ಹುಚ್ಚು ಹಿಡಿದಿಲ್ಲ) ಹೀ ಈಸ್ ಸೇಯಿಂಗ್ ದಿ ಟ್ರೂತ್ (ಅವರು ಸತ್ಯ ಹೇಳುತ್ತಿದ್ದಾರೆ) ಅಂತ ಸಮೀರಾಚಾರ್ಯ ತಿರುಗೇಟು ನೀಡಿದರು.

ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ಆಗ ರಿಯಾಝ್ ಹೇಳಿದಿಷ್ಟು.!

''ಮೊದಲನೇಯದಾಗಿ, ಯಾರೂ ಇಂಗ್ಲೀಷ್ ನಲ್ಲಿ ಮಾತನಾಡಬೇಡಿ. ಎಲ್ಲರೂ ಕನ್ನಡದಲ್ಲಿ ಮಾತನಾಡಿ. ಇಬ್ಬರಿಗೂ ಹೇಳುತ್ತಿದ್ದೇನೆ'' ಅಂತ ರಿಯಾಝ್ ಹೇಳುವಷ್ಟರಲ್ಲಿ ಜಗನ್ ಕುಪಿತಗೊಂಡರು.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ರಿಯಝ್ - ಜಗನ್ ನಡುವಿನ ಸಂಭಾಷಣೆ

ಜಗನ್ನಾಥ್ - ''ನೀನು ಮಾತನಾಡಬೇಡ ಅಂತ ನನಗೆ ಹೇಳಬೇಡಿ''

ರಿಯಾಝ್ - ''ನೀನು ಅಂತ ಮಾತನಾಡಿಲ್ಲ ನಾನು. ಮಾತನಾಡಬೇಡಿ ಅಂತ ಮರ್ಯಾದೆ ಕೊಟ್ಟು ಹೇಳಿದೆ''

ಜಗನ್ನಾಥ್ - ''ಮರ್ಯಾದೆ ಕೊಡದೆ ಹೋದರೆ ನಾನು ಕೂಡ ವಾಪಸ್ ಕೊಡಬಹುದು ಅಲ್ವಾ.?''

ರಿಯಾಝ್ - ''ನಾನು ಮಾತನಾಡಬಾರದು ಅಂತ ನೀವು ಹೇಳೋಕೆ ಹೇಗೆ ಸಾಧ್ಯ.?''

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.?

ರಿಯಾಝ್ - ''ಸಮಾಧಾನ ಮಾಡಿಕೊಳ್ಳಿ ಅಂತ ಇಬ್ಬರಿಗೂ ಹೇಳುತ್ತಿದ್ದೇನೆ. ಅದರಲ್ಲಿ ಏನು ತಪ್ಪು.?''

ಜಗನ್ನಾಥ್ - ''ಬಾಸ್, ಮಾತನಾಡಬಾರದು ಅಂತ ನನಗೆ ನೀವು ಅದ್ಹೇಗೆ ಹೇಳ್ತೀರಾ.? ನೀವ್ಯಾರು ಹೇಳೋಕೆ ಅದನ್ನ.? ಮಾತನಾಡಬೇಡಿ ಅಂತ ಹೇಳುವ ಹಕ್ಕು ನಿಮಗಿಲ್ಲ''

ಕನ್ನಡಿಗರ ಮನಸ್ಸಿಗೆ ನೋವಾಗಿದೆ

''ಇಂಗ್ಲೀಷ್ ನಲ್ಲಿ ಮಾತನಾಡಬೇಡಿ'' ಅಂತ ರಿಯಾಝ್ ಹೇಳಿದಾಗ, ಪಿತ್ತ ನೆತ್ತಿಗೇರಿಸಿಕೊಂಡು ಜಗನ್ ಆಡಿದ ಮಾತುಗಳು ಇದೀಗ ಕನ್ನಡಿಗರ ಮನಸ್ಸನ್ನು ನೋಯಿಸಿದೆ.

ಸುದೀಪ್ ಏನು ಹೇಳ್ತಾರೆ.?

'ಬಿಗ್ ಬಾಸ್' ಮನೆಯಲ್ಲಿ ಇಂಗ್ಲೀಷ್ ನಲ್ಲಿ ಮಾತನಾಡುವ ಹಾಗಿಲ್ಲ ಎಂಬ ನಿಯಮ ಜಗನ್ ಗೆ ಗೊತ್ತಿಲ್ವಾ.? ಅನ್ನೋದು ಕೆಲ ವೀಕ್ಷಕರ ವಾದ. ಇದಕ್ಕೆ ಸುದೀಪ್ ಏನು ಹೇಳ್ತಾರೆ.? 'ಬಿಗ್ ಬಾಸ್' ಯಾವ ನಿರ್ಣಯ ಕೈಗೊಳ್ತಾರೆ ಅಂತ ಕಾದು ನೋಡಬೇಕು.

English summary
Bigg Boss Kannada 5: Week 4: Did Jaganath insult Kannada Language in #BBK5 house.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X