»   » ಚಂದ್ರುಗ್ಯಾಕೆ ಇಷ್ಟೊಂದು ಅನುಮಾನ .? 'ಬಿಗ್ ಬಾಸ್' ಯಾರಿಗೆ ಯಾಕೆ ಮೋಸ ಮಾಡ್ತಾರೆ.?

ಚಂದ್ರುಗ್ಯಾಕೆ ಇಷ್ಟೊಂದು ಅನುಮಾನ .? 'ಬಿಗ್ ಬಾಸ್' ಯಾರಿಗೆ ಯಾಕೆ ಮೋಸ ಮಾಡ್ತಾರೆ.?

Posted By:
Subscribe to Filmibeat Kannada
Bigg Boss Season 05 : ಬಿಗ್ ಬಾಸ್ ಮೋಸ ಮಾಡ್ತಿದ್ದಾರ ?? ಹಾಗಿದ್ರೆ ರಿಯಾಜ್ ಹೇಳಿದ್ದೇನು ? | Filmibeat Kannada

'ದೊಡ್ಮನೆ'ಯೊಳಗೆ ಸೆಲೆಬ್ರಿಟಿಗಳೆಲ್ಲ ಕಾಲಿಟ್ಟ ಮೇಲೆ ಎಲ್ಲರನ್ನೂ ತಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಸುವವರು 'ಬಿಗ್ ಬಾಸ್'.

'ಬಿಗ್ ಬಾಸ್' ಪಾಲಿಗೆ ಎಲ್ಲಾ ಸ್ಪರ್ಧಿಗಳೂ ಒಂದೇ.! ಮನೆಯ ಎಲ್ಲ ಸದಸ್ಯರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವ 'ಬಿಗ್ ಬಾಸ್' ತಾರತಮ್ಯ ಮಾಡಲ್ಲ.

ಹೀಗಿದ್ದರೂ, 'ಬಿಗ್ ಬಾಸ್' ಮೇಲೆ ಸ್ಪರ್ಧಿಗಳಿಗೆ ಅನುಮಾನ ಇದ್ದ ಹಾಗಿದೆ. ತಮ್ಮ ಇಚ್ಛೆಗೆ ತಕ್ಕಂತೆ ತಮಗೆ ಬೇಕಾದವರನ್ನ ರಿಯಾಝ್ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿರಬಹುದು ಎಂಬ ಹುಳ ಸೆಲೆಬ್ರಿಟಿ ಸ್ಪರ್ಧಿಗಳ ತಲೆಯಲ್ಲಿ ಹರಿದಾಡುತ್ತಿದೆ. ಮುಂದೆ ಓದಿರಿ....

ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಐದನೇ ವಾರ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಇದರ ಅನುಸಾರ, ಗಾರ್ಡನ್ ಏರಿಯಾದಲ್ಲಿ ಹಾಕಲಾಗಿದ್ದ ವೃತ್ತಾಕಾರದ ಗುರುತಿನ ಮೇಲೆ ಕುಳಿತುಕೊಂಡು, ಪ್ರತಿ ಬಾರಿ ಹಾಡು ಆರಂಭವಾದ ಕೂಡಲೆ ನೀಡಲಾಗಿರುವ ಪುಟ್ಟ ಪೆಟ್ಟಿಗೆಯನ್ನು ಸದಸ್ಯರು ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಬೇಕಿತ್ತು. ಹಾಡು ನಿಂತ ತಕ್ಷಣ ಹಸ್ತಾಂತರ ಮಾಡುವುದನ್ನು ನಿಲ್ಲಿಸಬೇಕಿತ್ತು. ಹಾಡು ನಿಂತ ತಕ್ಷಣ, ಪೆಟ್ಟಿಗೆ ಯಾವ ಸದಸ್ಯರ ಕೈಯಲ್ಲಿ ಇರುತ್ತದೆಯೋ, ಆ ಸದಸ್ಯರು ಈ ಚಟುವಟಿಕೆಯಿಂದ ಹೊರಬರಬೇಕಿತ್ತು. ಕೊನೆಯವರೆಗೂ ಆಟದಲ್ಲಿ ಉಳಿದುಕೊಳ್ಳುವವರು ವಿಜೇತರಾಗುತ್ತಿದ್ದರು.

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

ಹಾಡನ್ನ ಪ್ಲೇ ಮಾಡಿ, ಪಾಸ್ (Pause) ಮಾಡುವವರು ಯಾರು.?

ವಿಶೇಷ ಚಟುವಟಿಕೆ ಏನೋ ಚೆನ್ನಾಗಿದೆ. ಆದ್ರೆ, ಹಾಡನ್ನ ಪ್ಲೇ ಮಾಡಿ, ಪಾಸ್ (Pause) ಮಾಡುವವರು ಯಾರು.? ಹಾಡನ್ನ 'ಬಿಗ್ ಬಾಸ್' ಹಾಕುತ್ತಾರೆ ನಿಜ. ಆದ್ರೆ, ಪ್ಲೇ ಮತ್ತು ಪಾಸ್ ನ 'ಬಿಗ್ ಬಾಸ್' ಮಾಡಿದರೆ, ಅದು ಪಕ್ಷಪಾತ ಆದಂತೆ. ಯಾಕಂದ್ರೆ, ಕ್ಯಾಮರಾ ಕಣ್ಣುಗಳಿಂದ ಯಾರ ಕೈಯಲ್ಲಿ ಪೆಟ್ಟಿಗೆ ಇದೆ ಎಂದು 'ಬಿಗ್ ಬಾಸ್'ಗೆ ಕಾಣ್ತಿರುತ್ತೆ. ಹೀಗಾಗಿ, ಪ್ಲೇ ಮತ್ತು ಪಾಸ್ ನ 'ಬಿಗ್ ಬಾಸ್' ಮಾಡಲಿಲ್ಲ. ಬದಲಾಗಿ ಆ ಜವಾಬ್ದಾರಿಯನ್ನ ರಿಯಾಝ್ ಗೆ ವಹಿಸಿದರು.

ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ.!

ಕನ್ಫೆಶನ್ ರೂಮ್ ನಲ್ಲಿ ರಿಯಾಝ್

ಕನ್ಫೆಶನ್ ರೂಮ್ ನಲ್ಲಿ ಇದ್ದ ರಿಯಾಝ್ ಕೈಗೆ ಪಾಸ್ (Pause) ಬೋರ್ಡ್ ಕೊಡಲಾಗಿತ್ತು. ಹಾಡನ್ನ ಕೇಳುತ್ತಾ ತಮಗೆ ಬೇಕಾದಾಗೆಲ್ಲ ಪಾಸ್ (Pause) ಬೋರ್ಡ್ ನ ರಿಯಾಝ್ ತೋರಿಸಬಹುದಿತ್ತು. ಹಾಗೆ, ರಿಯಾಝ್ ಪಾಸ್ (Pause) ಬೋರ್ಡ್ ತೋರಿಸಿದ ತಕ್ಷಣ ಹಾಡು ನಿಲ್ಲುತ್ತಿತ್ತು.

'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

ಹೊರಗೆ ಏನಾಗುತ್ತಿದೆ ಎಂದು ರಿಯಾಝ್ ಗೆ ಗೊತ್ತಿರಲಿಲ್ಲ.!

ಕನ್ಫೆಶನ್ ರೂಮ್ ನಲ್ಲಿ ಇದ್ದ ರಿಯಾಝ್ ಗೆ, ಹೊರಗೆ ಗಾರ್ಡನ್ ಏರಿಯಾದಲ್ಲಿ ಏನಾಗುತ್ತಿದೆ... ಯಾರ ಕೈಯಲ್ಲಿ ಪೆಟ್ಟಿಗೆ ಇದೆ ಎಂಬ ಅರಿವು ಇರಲಿಲ್ಲ. ಹೊರಗಿನ ವಿಡಿಯೋನ ಒಳಗೆ 'ಬಿಗ್ ಬಾಸ್' ಕೂಡ ಪ್ಲೇ ಮಾಡಲಿಲ್ಲ. ಹೊರಗಿನ ಗುಟ್ಟು ಬಿಟ್ಟು ಕೊಡದೆ ಯಾರಿಗೂ ಭೇದಭಾವ ಮಾಡದೆ ಟಾಸ್ಕ್ ನ 'ಬಿಗ್ ಬಾಸ್' ನಡೆಸಿದರು. ಹೀಗಿದ್ದರೂ, ಕೆಲವರಿಗೆ ಅನುಮಾನ ಕಾಡುತ್ತಿದೆ.

ರಿಯಾಝ್ ಅಂದುಕೊಂಡಿದ್ದು ಇಷ್ಟು...

ಪಾಸ್ (Pause) ಬೋರ್ಡ್ ಇಟ್ಟುಕೊಂಡು ಹಾಡನ್ನು ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ, ''ನಾನು ಇಲ್ಲಿ ಹೀಗೆ ಮಾಡುವುದರಿಂದ ಯಾರ್ಯಾರಿಗೆ ಹೇಗೆ ಚಾನ್ಸ್ ಮಿಸ್ ಆಗುತ್ತಿದ್ಯೋ..'' ಅಂತ ಸ್ವತಃ ರಿಯಾಝ್ ಕನ್ಫೆಶನ್ ರೂಮ್ ನಲ್ಲಿ ಪೇಚಾಡಿದ್ದರು. ಆದ್ರೆ, ಹೊರಗಿದ್ದವರಿಗೆ ಅನಿಸಿರುವುದೇ ಬೇರೆ.!

ಒಳಗಡೆ ಏನಾಯ್ತು ನಿಮಗೆ ಗೊತ್ತಾ.?

''ಹಾಡನ್ನ ಪಾಸ್ (Pause) ಮಾಡಿಸುವುದು, ಪ್ಲೇ ಮಾಡಿಸುವುದು ಕನ್ಫೆಶನ್ ರೂಮ್ ನಲ್ಲಿ ಇತ್ತು. ಒಳಗಡೆ ಏನು ಮಾಡಿಸಿದರು ನಿಮಗೆ ಗೊತ್ತಾ.?'' ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮಲ್ಲಿದ್ದ ಅನುಮಾನವನ್ನ ಸಿಹಿ ಕಹಿ ಚಂದ್ರು, ಶ್ರುತಿ, ಕೃಷಿ ಹಾಗೂ ಜಗನ್ ಮುಂದೆ ಹೊರ ಹಾಕಿದರು.

ಶ್ರುತಿ ಪ್ರಕಾಶ್ ಹೇಳಿದ್ದೇನು.?

''ಪಾಸ್ ಬೋರ್ಡ್ ಕೊಟ್ಟಿದ್ದರು. ನನಗೆ ಏನೂ ನೋಡಲು ಆಗುತ್ತಿರಲಿಲ್ಲ. ಯಾವಾಗ ಪಾಸ್ ಮಾಡುವ ಹಾಗೆ ಅನಿಸುತ್ತಿತ್ತೋ, ಆಗ ಬೋರ್ಡ್ ತೋರಿಸುತ್ತಿದ್ದೆ'' ಎಂದು ರಿಯಾಝ್ ತಮ್ಮ ಬಳಿ ಹೇಳಿದ್ದನ್ನ ಶ್ರುತಿ ಪ್ರಕಾಶ್ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ನೋಡಿದವರು ಯಾರು.?

ಶ್ರುತಿ ಪ್ರಕಾಶ್ ಹೇಳಿದ ಮಾತುಗಳಿಗೆ, ''ನೀನು ನೋಡಿದ್ಯಾ.?'' ಎಂದು ಸಿಹಿ ಕಹಿ ಚಂದ್ರು ಮರು ಪ್ರಶ್ನೆ ಮಾಡಿದರು. ಅದಕ್ಕೆ, ''ನೋಡಿಲ್ಲ, ಆದರೆ ಅವರು (ರಿಯಾಝ್) ಹಾಗೆ ಹೇಳಿದರು'' ಎಂದಷ್ಟೇ ಶ್ರುತಿ ಪ್ರಕಾಶ್ ಹೇಳಿದರು

ಜಗನ್ ಮನಸ್ಸಿನಲ್ಲೂ ಅನುಮಾನ

''ಮೊದಲು ಆಶಿತಾ ಹೋದರು, ಆಮೇಲೆ ನಾನು ಹೋದೆ. ಆಮೇಲೆ ನೀವು...'' ಎಂದು ಜಗನ್ ಹೇಳುತ್ತಿದ್ದಂತೆಯೇ, ''ಅದು ಕಾಕತಾಳೀಯ ಕೂಡ ಆಗಿರಬಹುದು. ಆದರೂ ಗೊತ್ತಿಲ್ಲ'' ಎಂದು ಕೃಷಿ ಹೇಳಿದರು.

ಕಣ್ಣಲ್ಲೇ ಮಾತನಾಡಿದ ಸಿಹಿ ಕಹಿ ಚಂದ್ರು

''ನಾನು ಔಟ್ ಆದ ತಕ್ಷಣ, ಒಂದು ಲೈನ್ ಹೇಳಿದೆ. 5 ಮ್ಯಾನ್ ಆರ್ಮಿಯಲ್ಲಿ ಒಬ್ಬರು ಅಂತ. ಆಗ ನಾಲ್ಕು ಜನ ಅಲ್ಲಿದ್ದರು....'' ಎಂದು ಕಣ್ಣಲ್ಲೇ ಸಿಹಿ ಕಹಿ ಚಂದ್ರು ಮಾತನಾಡಿದರು. ಬಳಿಕ ''ದಿಸ್ ಈಸ್ ಫನ್'' ಎಂದುಬಿಟ್ಟರು.

ಇದರ ಅರ್ಥ ಏನು.?

ಸಿಹಿ ಕಹಿ ಚಂದ್ರು, ಜಗನ್ ಸೇರಿದಂತೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ರಿಯಾಝ್ ಮೇಲೆ ಅನುಮಾನ ಇರಬಹುದು. ಆದ್ರೆ, ಹೊರಗಿನ ಕ್ಲಿಪ್ಪಿಂಗ್ ತೋರಿಸಿ 'ಬಿಗ್ ಬಾಸ್' ಆಟ ಆಡಿಸಲು ಸಾಧ್ಯವೇ.? ರಿಯಾಝ್ ಮೇಲೆ ಡೌಟ್ ಪಡುವ ಭರದಲ್ಲಿ 'ಬಿಗ್ ಬಾಸ್' ಶಿಸ್ತನ್ನು, ಇಡೀ ವ್ಯವಸ್ಥೆಯನ್ನ ದೂಷಿಸಿದ್ರಾ ಸೆಲೆಬ್ರಿಟಿಗಳು.? 'ಬಿಗ್ ಬಾಸ್' ಸಂಚಿಕೆ ನೋಡಿದ್ಮೇಲೆ, ಈ ಪ್ರಶ್ನೆಗಳು ವೀಕ್ಷಕರಿಗೆ ಮೂಡದೆ ಇರಲು ಸಾಧ್ಯವೇ ಇಲ್ಲ.!

English summary
Bigg Boss Kannada 5: Week 5: Did Riyaz Basha cheat during Captaincy Task.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X