»   » 'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಶ್ರುತಿ ಪ್ರಕಾಶ್ ಮತ್ತು ದಿವಾಕರ್ ನಡುವೆ ಫೈಟ್ | Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಕಾಮನ್ ಮ್ಯಾನ್ ದಿವಾಕರ್ ಜೊತೆ ದಿನಕ್ಕೊಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಸಿಹಿ ಕಹಿ ಚಂದ್ರು ಮತ್ತು ದಯಾಳ್ ನಂತರ ಈಗ ಶ್ರುತಿ ಪ್ರಕಾಶ್ ವಿರುದ್ದ ದಿವಾಕರ್ ತಿರುಗಿ ಬಿದ್ದಿದ್ದಾರೆ.

ಈ ವಾರ ಕ್ಯಾಪ್ಟನ್ ಆಗಿರುವ ಶ್ರುತಿ ಪ್ರಕಾಶ್, ಇಡೀ ವಾರದ ಟಾಸ್ಕ್ ನಲ್ಲಿ 'ಕಳಪೆ' ಪ್ರದರ್ಶನ ನೀಡಿದ ಒಬ್ಬ ಸ್ಪರ್ಧಿಯ ಹೆಸರನ್ನು 'ಬಿಗ್ ಬಾಸ್'ಗೆ ಸೂಚಿಸಬೇಕಿತ್ತು. ಅದರಂತೆ, 'ಕಳಪೆ' ಆಟಗಾರನಾಗಿ ದಿವಾಕರ್ ಅವರ ಹೆಸರನ್ನು ಶ್ರುತಿ ತೆಗೆದುಕೊಂಡಿದ್ದಾರೆ. ಇದೇ ವಿಚಾರ ಇದೀಗ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಮುಂದೆ ಓದಿ..

ದಿವಾಕರ್ ಅಸಮಾಧಾನ

ಕಳಪೆ ಆಟಗಾರನಾಗಿ ತನ್ನ ಹೆಸರು ತೆಗೆದುಕೊಂಡಿದ್ದಕ್ಕೆ ಶ್ರುತಿ ಪ್ರಕಾಶ್ ವಿರುದ್ಧ ದಿವಾಕರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಳಪೆ ಬೋರ್ಡ್ ಹಾಕಿಕೊಳ್ಳುವುದಿಲ್ಲ

''ನಾನು ವಾರದ ಕಳಪೆ ಆಟಗಾರನಾಗಿ ದಿವಾಕರ್ ಹೆಸರು ತೆಗೆದುಕೊಳ್ಳುತ್ತೇನೆ'' ಎಂದು ಹೇಳಿದ ತಕ್ಷಣ ದಿವಾಕರ್ ಎದ್ದು ''ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ.. ಆಟದಲ್ಲಿ ನಾನು ಹೊಲಸಾಗಿ ಆಡಿಲ್ಲ.. ಕಳಪೆ ಬೋರ್ಡ್ ಹಾಕಿಕೊಳ್ಳುವುದಿಲ್ಲ..'' ಎಂದು ಆಕ್ರೋಶಗೊಂಡಿದ್ದಾರೆ.

ಶ್ರುತಿಗೆ ಪ್ರಶ್ನೆ

''ನಾನು ಅವಿದ್ಯಾವಂತ, ನಾನು ಓದಿಲ್ಲ.. ಆದರೆ ನೀವು ವಿದ್ಯಾವಂತರು ತಾನೇ.. ನೀವು ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು ತಾನೇ.'' ಎಂದು ಶ್ರುತಿಗೆ ದಿವಾಕರ್ ಪ್ರಶ್ನೆ ಮಾಡಿದ್ದಾರೆ.

'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

ಭೇದ ಮಾಡುವುದು ಸರಿ ಅಲ್ಲ

''ಕಾಮನ್ ಮ್ಯಾನ್ ಎಂದು ಕಳಪೆ ಬೋರ್ಡ್ ಹಾಕುವುದು, ಸೆಲಿಬ್ರಿಟಿ ಅಂತ ಕಳಪೆ ಬೋರ್ಡ್ ಹಾಕದಿರುವುದು ನನಗೆ ಇಷ್ಟ ಆಗುವುದಿಲ್ಲ. ನಾನು ಕಳಪೆ ಬೋರ್ಡ್ ಹಾಕುವುದಿಲ್ಲ'' ಎಂದು ದಿನಾಕರ್ 'ಬಿಗ್ ಬಾಸ್' ಗೆ ಸಹ ತಿಳಿಸಿದರು.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಇಂದು ಪ್ರಸಾರ

ಶ್ರುತಿ ಪ್ರಕಾಶ್ ಮತ್ತು ದಿವಾಕರ್ ಅವರ ಈ ಗಲಾಟೆ ಸಂಚಿಕೆ ಇಂದು ರಾತ್ರಿ ಪ್ರಸಾರ ಆಗಲಿದೆ.

English summary
Bigg Boss Kannada 5: Divakar annoyed with Shruti Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X