»   » 'ಬಿಗ್' ಮನೆಯಿಂದ ಹೊರಬಂದ ಸುಮಾ ರಾಜ್ ಕುಮಾರ್ ಎಕ್ಸ್ ಕ್ಲೂಸಿವ್ ಸಂದರ್ಶನ

'ಬಿಗ್' ಮನೆಯಿಂದ ಹೊರಬಂದ ಸುಮಾ ರಾಜ್ ಕುಮಾರ್ ಎಕ್ಸ್ ಕ್ಲೂಸಿವ್ ಸಂದರ್ಶನ

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada

ಮೈಸೂರು. ಅಕ್ಟೋಬರ್ 25 : ಬಿಗ್ ಬಾಸ್ ಸೀಸನ್ - 5 ನಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟವರು ಮೈಸೂರಿನ ಸುಮಾ ರಾಜ್ ಕುಮಾರ್. ಕಾರ್ಯಕ್ರಮದ ಉದ್ದಕ್ಕೂ ಸೈಲೆಂಟ್ ಆಗಿ ಇದ್ದವರು. ಈ ವಾರ ನಾಮಿನೇಟ್ ಆಗಿ ಹೊರಬಂದವರು ಇವರು. ಸದ್ಯ ಮೈಸೂರಿಗರ ಹೃದಯದಲ್ಲಿ ಮನೆ ಮಾಡಿದ್ದಾರೆ. ಅವರು ನಮ್ಮ ಪ್ರತಿನಿಧಿಯೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

'ಬಿಗ್ ಬಾಸ್' ಮನೆಯ ಹೊಸ 'ಅಮ್ಮ' ಸುಮಾ ರಾಜ್ ಕುಮಾರ್ ಜೀವನ ಹಿನ್ನೋಟ.!

ಸೈಲೆಂಟ್ ಆಗಿ ಎಂಟ್ರಿಕೊಟ್ಟಿದ್ದ ಗೃಹಿಣಿ ಸುಮಾ, 'ಬಿಗ್ ಬಾಸ್' ಮನೆಯಿಂದ ಹೊರ ಬಂದಿದ್ದು ಕೇವಲ ಒಂದೇ ವಾರಕ್ಕೆ.! ಇದಕ್ಕೆ ಅವರಿಗೆ ಬೇಸರ ಇಲ್ಲ. ಸುಮಾ ರವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಸಂದರ್ಶನ ಇಲ್ಲಿದೆ. ಓದಿರಿ...

ಮೊದಲ ವಾರವೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸುಮಾ!

ನಿಮಗೆ ಬಿಗ್ ಬಾಸ್ ಮನೆಗೆ ಅವಕಾಶ ಸಿಕ್ಕಿದಾಗ ಏನೇನಿಸಿತು ?

ಬಿಗ್ ಬಾಸ್ ಎಂಬ ಶಬ್ದವೇ ಸಂತಸದಾಯಕ. ಅದನ್ನು ಕೇಳುವುದಿರಲಿ, ನಾನು ಆ ಮನೆಯೊಳಗೆ ಪ್ರವೇಶಿಸಿತ್ತೇನೆಂದಾಗ ನನಗೆ ಸಂತಸವನ್ನುಂಟು ಮಾಡಿತ್ತು. ಕಂಡು ಕೇಳರಿಯದ ಅತೀ ದೊಡ್ಡ ರಿಯಾಲಿಟಿ ಶೋ ಅದು. ನಾನು ಕೂಡ ಲಕ್ಷ ಜನರಲ್ಲಿ ಆಯ್ಕೆ ಆದಾಗ ತುಂಬಾ ಖುಷಿಯಾಯಿತು. ಹಾಗಾಗಿ ಯೋಚಿಸದೇ ನಾನು ಕೂಡ ಅಲ್ಲಿ ಎಂಟ್ರಿ ಕೊಟ್ಟೆ.

ಟಾಸ್ಕ್ ನಲ್ಲಿ ನಿಮ್ಮ ಇನ್ ವಾಲ್ವ್ಮೆಂಟ್ ಹೇಗಿತ್ತು ?

ಕಾರ್ಯಕ್ರಮದ ಪ್ರತಿಯೊಂದು ಟಾಸ್ಕ್ ನಲ್ಲಿಯೂ ಕೂಡ ನಾನು ಎಲ್ಲರಂತೆ ಭಾಗವಹಿಸುತ್ತಿದೆ. ಮನೆಯ ಕೆಲಸಗಳಲ್ಲಿಯೂ ಸಹ ಹಾಗೆಯೇ ತೊಡಗಿಕೊಳ್ಳುತ್ತಿದೆ. ನನಗೆ ಯಾವ ಕಾರ್ಯವೂ ಕಷ್ಟವೆನಿಸಲಿಲ್ಲ. ಸುಲಭವಾಗಿಯೇ ತೊಡಗಿಕೊಂಡೆ.

ಬಿಗ್ ಬಾಸ್ ನಿಂದ ಹೊರಗೆ ಬರುವಾಗ ನಿಮಗೆ ಬೇಸರವಾಗಲಿಲ್ಲವೇ ?

ಖಂಡಿತಾ ಬೇಸರವಾಯಿತು. ನನಗೆ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಹೊಸ ವೇದಿಕೆಯನ್ನು ಹಾಗೆಯೇ ಅವಕಾಶವನ್ನು ಕಲ್ಪಿಸಿಕೊಟ್ಟ ಜಾಗ. ನನ್ನತನವನ್ನು ಹೊರಗೆ ಬಿಡದೇ ಬಿಗ್ ಬಾಸ್ ನಿಂದ ಹೊರಬಂದೆ. ಅಲ್ಲಿ ಹೋಗುವ ಛಾನ್ಸ್ ಸಿಕ್ಕಿದ್ದೇ ನನ್ನ ಪುಣ್ಯ.

ಇತರೆ ಸ್ಫರ್ಧಾಳುಗಳ ನಡುವಿನ ನಿಮ್ಮ ಕಾಂಪಿಟೇಶನ್ ಹೇಗಿತ್ತು ?

ಸ್ಫರ್ಧೆ ಎಂದ ಮೇಲೆ ಎಲ್ಲರೂ ಸಮಾನರು. ಮೇಲು -ಕೀಳು ಎಂಬುದಿಲ್ಲ. ಅಲ್ಲಿ ಸಾಮಾನ್ಯರಿಗಿಂತ ಸೆಲಿಬ್ರಿಟಿಗಳ ಸಂಖ್ಯೆಯೇ ಅಧಿಕವಾಗಿತ್ತು. ಅವರಿಗಿಂತ ನಾವೇನು ಕಡಿಮೆ ಇಲ್ಲವೆಂಬಂತೆ ಸಾಮಾನ್ಯರಾದ ನಾವು ಕೂಡ ಕಾಂಪಿಟೇಶನ್ ಕೊಟ್ಟಿದ್ದೇವೆ.

ನೀವು ನಾಮಿನೇಟ್ ಆದಾಗ ನಿಮಗೆ ಬೇಸರವೆನಿಸಲಿಲ್ಲವೇ ?

ಸ್ಪರ್ಧೆ ಎಂದ ಮೇಲೆ ಹೊರಬರಲೇಬೇಕು. ಆದರೆ ನಾನು ಎಲ್ಲರೊಂದಿಗೆ ಬೇರೆಯುತ್ತಿದ್ದೆ ಜೊತೆಗೆ ಟಫ್ ಕಾಂಪಿಟೇಶನ್ ಕೂಡ ನೀಡಿದ್ದೆ. ಆದರೆ ನಾನು ಮಾಡಿದ ಕೆಲಸವನ್ನು, ಎಲ್ಲರೊಂದಿಗೆ ಮಾತನಾಡಿದ್ದನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತೋರಿಸಿದ ಅವಧಿ ಕಡಿಮೆಯಾಯಿತು. ಬಹುಶಃ ನಾನು ಹಾಗಾಗಿ ಹೊರಬಂದಿರಬಹುದು ಎಂಬುದು ನನ್ನ ಅಭಿಪ್ರಾಯ.

English summary
Bigg Boss Kannada 5: Eliminated Contestant Suma Rajkumar Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X