»   » ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

Posted By:
Subscribe to Filmibeat Kannada
ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಮಹಾಯುದ್ಧ | Filmibeat Kannada

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ತರಹೇವಾರಿ ವಿಷಯಗಳಿಗೆ ದೊಡ್ಡ ದೊಡ್ಡ ರಾದ್ಧಾಂತಗಳು ನಡೆದು ಹೋಗಿವೆ. ಆದ್ರೆ, ಬರೀ ಊಟ, ತಿಂಡಿ, ಅಡುಗೆ, ಹಣ್ಣು, ಐಸ್ ಕ್ರೀಮ್, ಬಿಸ್ಕತ್ತುಗಳಿಗೆ ಚಿಕ್ಕ ಮಕ್ಕಳಂತೆ ಪದೇ ಪದೇ ಕಿತ್ತಾಟ ನಡೆದಿರುವುದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮಾತ್ರ.!

ಹಾಲಿನ ಪ್ಯಾಕೆಟ್ ಗಳನ್ನು ಮುಚ್ಚಿಟ್ಮೇಲೆ ''ಜನರ ಮುಂದೆ ನೀವು ಹೇಗೆ ಕಾಣಿಸುತ್ತಿದ್ದೀರಾ, ಸ್ವಲ್ಪ ಯೋಚಿಸಿ'' ಎಂದು ಸುದೀಪ್ ಹೇಳಿದ್ಮೇಲೂ, 'ಬಿಗ್ ಬಾಸ್' ಮನೆಯಲ್ಲಿ ತಿನ್ನುವ ವಿಚಾರಕ್ಕೆ ಗಲಾಟೆ ನಿಂತಿಲ್ಲ.!

ತಿನ್ನಲು ಎಲ್ಲರಿಗೂ ಆಸೆ ನಿಜ. ಆದ್ರೆ, ಎಲ್ಲರಿಗೂ ಸಮನಾಗಿ ಹಂಚಿ ತಿಂದರೆ ಸಮಸ್ಯೆ ಆಗಲ್ಲ. ಅದು ಬಿಟ್ಟು... ಮುಚ್ಚಿಟ್ಟು, ಬಚ್ಚಿಟ್ಟು, ಕದ್ದು ತಿಂದು, ಬೇಕಾದವರಿಗೆ ಮಾತ್ರ ಹಂಚುವ ಪ್ರಯತ್ನ ನಡೆಯುತ್ತಿರುವುದರಿಂದ 'ಬಿಗ್ ಬಾಸ್' ಮನೆ ಆಗಾಗ ರಣರಂಗವಾಗುತ್ತಿದೆ. ಮುಂದೆ ಓದಿರಿ....

ಉಪ್ಪಿಟ್ಟು ಮಾಡಿದ್ದಕ್ಕೆ ಕೋಪ.!

ಸದ್ಯ ಅಡುಗೆ ಮನೆಯ ಜವಾಬ್ದಾರಿ ವಹಿಸಿಕೊಂಡಿರುವವರು ಸಿಹಿ ಕಹಿ ಚಂದ್ರು ಹಾಗೂ ಅನುಪಮಾ ಗೌಡ. ಬೆಳಗ್ಗಿನ ಉಪಹಾರಕ್ಕಾಗಿ ಸಿಹಿ ಕಹಿ ಚಂದ್ರು ಉಪ್ಪಿಟ್ಟು ಮಾಡಿದ್ದು ಜಗನ್ ಗೆ ಇಷ್ಟ ಆಗಿಲ್ಲ. ಒಂದು ಸೌಟು ಉಪ್ಪಿಟ್ಟು ಹಾಕಿದರೆ ಸಾಲಲ್ಲ, ಹೊಟ್ಟೆ ಹಸಿವಾಗುತ್ತದೆ ಎಂಬ ವಾದ ಜಗನ್ ರವರದ್ದು. ಇದೇ ಕಾರಣಕ್ಕೆ ಜಗನ್ ಹಾಗೂ ಅನುಪಮಾ ನಡುವೆ ವಾದ-ವಾಗ್ವಾದ ಕೂಡ ನಡೆಯಿತು.

ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?

ಐಸ್ ಕ್ರೀಮ್ ಹಂಚಿಕೆ ಇಷ್ಟ ಆಗಿಲ್ಲ.!

ಇನ್ನೂ ಸಿಹಿ ಕಹಿ ಚಂದ್ರು ಐಸ್ ಕ್ರೀಮ್ ಹಂಚಿದ ರೀತಿ ಕೂಡ ಜಗನ್ ಗೆ ಸಮಾಧಾನ ತಂದಿಲ್ಲ. ''ಎಲ್ಲರಿಗೂ ಚಿಕ್ಕ ಸ್ಪೂನ್ ನಲ್ಲಿ ಐಸ್ ಕ್ರೀಮ್ ಹಾಕಿ ಕೊಟ್ಟು, ಕೊನೆಗೆ ಅವರು ಮಾತ್ರ ನಾಲ್ಕು ಸ್ಪೂನ್ ಹಾಕೊಂಡು, ಏನಾದರೂ ಮಾಡಿಕೊಳ್ಳಿ ಅಂತ ಎದ್ದು ಹೋದರು'' ಎಂದು ಆಶಿತಾ ಬಳಿ ಜಗನ್ ಬೇಸರ ವ್ಯಕ್ತಪಡಿಸುತ್ತಿದ್ದರು.

ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...

ಬಿಸ್ಕತ್ತು ಹಂಚಿಕೆ ಸರಿಯಾಗಿ ಆಗಿಲ್ಲ.!

ಮನೆಯ ಸದಸ್ಯರಿಗೆಲ್ಲ ಆರು ಪ್ಯಾಕೆಟ್ ಬಿಸ್ಕತ್ತುಗಳನ್ನ 'ಬಿಗ್ ಬಾಸ್' ಕಳುಹಿಸಿದ್ದರು. ಒಬ್ಬರಿಗೆ ಅರ್ಧ ಪ್ಯಾಕೆಟ್ ಬಿಸ್ಕತ್ತು ಬರುವಂತೆ ಹಂಚಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದ್ರೆ, ಹಾಗಾಗದ ಕಾರಣ ಬಿಸ್ಕತ್ತುಗಳಿಗಾಗಿ ಕಿತ್ತಾಟ ನಡೆದಿದೆ.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

ಖಾಲಿ ಮಾಡಿದವರು ಯಾರು.?

ಬಿಸ್ಕತ್ತು ಪ್ಯಾಕೆಟ್ ಗಳನ್ನ ಮೊದಲು ತೆಗೆದುಕೊಂಡಿದ್ದು ಜಗನ್. ಆದ್ರೆ, ಬಿಸ್ಕತ್ತು ಪ್ಯಾಕೆಟ್ ಗಳನ್ನ ಮೊದಲು ಓಪನ್ ಮಾಡಿದ್ದು ಅನುಪಮಾ ಗೌಡ. ಎಲ್ಲರಿಗೂ ಹಂಚಿಕೆ ಆಗುವ ಮುನ್ನವೇ ಪ್ಯಾಕೆಟ್ ಗಳು ಖಾಲಿ ಆಗಿದ್ದವು. ಇದೇ ಜಗಳಕ್ಕೆ ಮೂಲ ಕಾರಣ.

ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

ಎಲ್ಲರಿಗೂ ಸಮನಾಗಿ ಹಂಚಿಕೆ ಆಗಲಿ...

ಅಡುಗೆ ಮನೆಯಲ್ಲಿ ಯಾರ್ಯಾರು ಇದ್ದರೋ, ಅವರಿಗೆ ಮಾತ್ರ ಬಿಸ್ಕತ್ತುಗಳನ್ನ ಅನುಪಮಾ ಗೌಡ ಹಂಚಿದ್ರಂತೆ. ಇದು ಇತರರನ್ನ ಕೆರಳಿಸಿದೆ. ಎಲ್ಲರಿಗೂ ಸಮನಾಗಿ ಹಂಚಿಕೆ ಆಗಬೇಕು ಎಂಬುದು ರಿಯಾಝ್ ಮತ್ತು ಚಂದನ್ ಶೆಟ್ಟಿ ವಾದ.

'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

ಕೆರಳಿದ ಸಿಹಿ ಕಹಿ ಚಂದ್ರು

ಬಿಸ್ಕತ್ತುಗಳು ಸಮನಾಗಿ ಶೇರ್ ಆಗಿಲ್ಲ ಅಂತ ರಿಯಾಝ್ ಮತ್ತು ಚಂದನ್ ಶೆಟ್ಟಿ ದನಿ ಎತ್ತಿದ್ದಕ್ಕೆ, ''ಐಸ್ ಕ್ರೀಮ್ ಕೂಡ ಸಮನಾಗಿ ಶೇರ್ ಆಗಲಿಲ್ಲ. ನಾನು ಎಲ್ಲರಿಗೂ ಹಂಚುತ್ತಿದೆ. ಆದರೆ ನನಗೆ ಸಿಗಲೇ ಇಲ್ಲ'' ಎಂದು ಸಿಹಿ ಕಹಿ ಚಂದ್ರು ಕೆರಳಿದರು.

ಶ್ರುತಿ ಹರಿಹರನ್ ತಂದಿದ್ದ ಐಸ್ ಕ್ರೀಮ್.!

'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದ ಶ್ರುತಿ ಹರಿಹರನ್, ತಮ್ಮ ಜೊತೆ ಐಸ್ ಕ್ರೀಮ್ ಬಾಕ್ಸ್ ಗಳನ್ನ ತಂದಿದ್ದರು.

ಜಗನ್, ಅನುಪಮಾ ಮಾಡಿದ್ದೇನು.?

ಎಲ್ಲ ಸದಸ್ಯರ ಜೊತೆ ಶ್ರುತಿ ಹರಿಹರನ್ ಪರಿಚಯ ಮಾಡಿಕೊಳ್ಳುವ ಮುನ್ನವೇ ಒಂದು ಐಸ್ ಕ್ರೀಮ್ ಬಾಕ್ಸ್ ನ ಜಗನ್ ತೆಗೆದುಕೊಂಡರೆ, ಮತ್ತೊಂದು ಐಸ್ ಕ್ರೀಮ್ ಬಾಕ್ಸ್ ನ ಅನುಪಮಾ ತೆಗೆದುಕೊಂಡರು.

ಮೊದಲು ಓಪನ್ ಮಾಡಿದ್ದು ಜಗನ್.!

ಐಸ್ ಕ್ರೀಮ್ ಬಾಕ್ಸ್ ನ ಮೊದಲು ಓಪನ್ ಮಾಡಿದ್ದು ಜಗನ್. ನಂತರ ಅದನ್ನ ಹೇಗೆ ಹಂಚಿದರೋ ಗೊತ್ತಿಲ್ಲ. ಆದ್ರೆ, ''ಎಲ್ಲರಿಗೂ ಚಿಕ್ಕ ಸ್ಪೂನ್ ನಲ್ಲಿ ಐಸ್ ಕ್ರೀಮ್ ಹಾಕಿ ಕೊಟ್ಟು, ಕೊನೆಗೆ ಅವರು (ಸಿಹಿ ಕಹಿ ಚಂದ್ರು) ಮಾತ್ರ ನಾಲ್ಕು ಸ್ಪೂನ್ ಹಾಕೊಂಡು, ಏನಾದರೂ ಮಾಡಿಕೊಳ್ಳಿ ಅಂತ ಎದ್ದು ಹೋದರು'' ಎಂದು ಜಗನ್ ಅವರೇ ಆಶಿತಾ ಮುಂದೆ ಹೇಳಿದ್ದಾರೆ.

ಸಿಹಿ ಕಹಿ ಚಂದ್ರು ಹೇಳುವುದೇ ಬೇರೆ.!

''ಐಸ್ ಕ್ರೀಮ್ ನ ನಾನು ಎಲ್ಲರಿಗೂ ಹಂಚುತ್ತಿದ್ದೆ. ಆದ್ರೆ ಹಂಚುವುದಕ್ಕೆ ಬಿಡಲೇ ಇಲ್ಲ. ಎಲ್ಲರೂ ಕಿತ್ಕೊಂಡ್ ತಿಂದರು. ನನಗೆ ಐಸ್ ಕ್ರೀಮ್ ಸಿಗಲಿಲ್ಲ. ನಾನು ನೆಕ್ಕೊಂಡ್ ತಿಂದೆ'' ಅಂತಾರೆ ಸಿಹಿ ಕಹಿ ಚಂದ್ರು.

ಕಿತ್ಕೊಂಡ್ ತಿಂದಿಲ್ಲ.!

''ನಮ್ಮ ತಾಯಾಣೆ ನಾವು ಕಿತ್ಕೊಂಡ್ ತಿಂದಿಲ್ಲ. ಗ್ಲಾಸ್ ನಲ್ಲಿ ಒಂದು ಸ್ಪೂನ್ ಹಾಕಿ ಕೊಟ್ಟಿದ್ದನ್ನ ತಿಂದ್ವಿ ಅಷ್ಟೇ'' ಎಂದರು ಚಂದನ್ ಶೆಟ್ಟಿ

ಎಲ್ಲವೂ ಕ್ಯಾಪ್ಟನ್ ಮೇಲೆ

ಇನ್ಮುಂದೆ ಎಲ್ಲವನ್ನೂ ಸಮನಾಗಿ ಹಂಚುವ ಜವಾಬ್ದಾರಿ ಕ್ಯಾಪ್ಟನ್ ವಹಿಸಿಕೊಳ್ಳಬೇಕು ಅಂತ ಸ್ಪರ್ಧಿಗಳು ನಿರ್ಧಾರ ಮಾಡಿದ್ದಾರೆ. ಇನ್ನಾದರೂ ತಿನ್ನುವ ವಿಚಾರಕ್ಕೆ ಕೋಲಾಹಲ ಕಮ್ಮಿ ಆಗುತ್ತಾ ಅಂತ ನೋಡಬೇಕು.!

English summary
Bigg Boss Kannada 5: Week 6: Fight over Biscuits and Ice cream

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada