Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಫಿಲ್ಮಿಬೀಟ್' FB Poll ಪ್ರಕಾರ 'ಬಿಗ್ ಬಾಸ್ ಕನ್ನಡ-5' ವಿನ್ನರ್ 'ಇವರೇ'.!

'ಬಿಗ್ ಬಾಸ್ ಕನ್ನಡ-5' ವಿನ್ನರ್ ಯಾರಾಗಬೇಕು.? ಎಂದು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ನಲ್ಲಿ ಆಯೋಜಿಸಿದ್ದ ಲೈವ್ ವೋಟಿಂಗ್ ಪೋಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಫಲಿತಾಂಶ ಪ್ರಕಟ ಮಾಡುವ ಸಮಯ ಬಂದಿದೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಹೆಜ್ಜೆ ಇಟ್ಟಿರುವ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ ಹಾಗೂ ಶ್ರುತಿ ಪ್ರಕಾಶ್ ಮಧ್ಯೆ ನಿನ್ನೆ ಜನವರಿ 25 ರಂದು 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಚುನಾವಣೆ ನಡೆಸಲಾಗಿತ್ತು. ಇವರ ಪೈಕಿ ಅತಿ ಹೆಚ್ಚು ಮತ ಲಭಿಸಿದ್ದು ಒಬ್ಬರಿಗೆ ಮಾತ್ರ.! ಯಾರದು.? ತಿಳಿಯಿರಿ ಫೋಟೋ ಸ್ಲೈಡ್ ಗಳಲ್ಲಿ...

ಮೂರು ಲಕ್ಷ ಜನರಿಗೆ ರೀಚ್ ಆಯ್ತು
ಮೂರು ಲಕ್ಷ ಜನರಿಗೆ ರೀಚ್ ಆದ ಈ ಲೈವ್ ಪೋಲ್ ನ 47 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಪೈಕಿ ಹಲವರು ಲೈವ್ ಪೋಲ್ ವೋಟಿಂಗ್ ನಲ್ಲಿ ಪಾಲ್ಗೊಂಡು ಚಂದನ್ ಶೆಟ್ಟಿಗೆ ಬೆಂಬಲ ನೀಡಿದ್ದಾರೆ.
'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?

ಚಂದನ್ ಶೆಟ್ಟಿ ವಿನ್ನರ್.!
ಹೌದು, ಲೈವ್ ವೋಟಿಂಗ್ ಪೋಲ್ ನಲ್ಲಿ ಚಂದನ್ ಶೆಟ್ಟಿಗೆ ಮೂರು ಸಾವಿರಕ್ಕೂ ಅಧಿಕ ಮತಗಳು ಲಭಿಸಿವೆ. ವೀಕ್ಷಕರಿಗೆ ಯಾರ ಮೇಲೆ ಒಲವು ಇದೆ ಎಂಬುದಕ್ಕೆ ಇದೇ ಉತ್ತಮ ಉದಾಹರಣೆ.
'ಬೊಂಬೆ' ನಿವೇದಿತಾ 'ಬಿಗ್ ಬಾಸ್' ಗೆದ್ದರೆ ಅಚ್ಚರಿ ಪಡಬೇಡಿ.! ಯಾಕಂದ್ರೆ...

ಮಿಕ್ಕವರು ಸಾವಿರ ಗಡಿ ದಾಟಲಿಲ್ಲ.!
ಉಳಿದಂತೆ ದಿವಾಕರ್, ನಿವೇದಿತಾ, ಜಯರಾಂ ಕಾರ್ತಿಕ್ ಹಾಗೂ ಶ್ರುತಿ ಪ್ರಕಾಶ್ ಗೆ ಮತಗಳು ಸಾವಿರದ ಗಡಿ ದಾಟಲಿಲ್ಲ.
ಎಂದೂ ತಾಳ್ಮೆ ಕಳೆದುಕೊಳ್ಳದ ಜೆಕೆ 'ಬಿಗ್ ಬಾಸ್' ಗೆದ್ದುಬಿಟ್ಟರೆ.?

ರಿಯಲ್ ವಿನ್ನರ್ ಯಾರು.?
'ಫಿಲ್ಮಿಬೀಟ್ ಕನ್ನಡ' ಆಯೋಜಿಸಿದ್ದ ಪೂರ್ವ ಸಮೀಕ್ಷೆ ಪ್ರಕಾರ, 'ಬಿಗ್ ಬಾಸ್ ಕನ್ನಡ-5' ವಿನ್ನರ್ ಚಂದನ್ ಶೆಟ್ಟಿ. ಆದ್ರೆ, ಇದೇ ಶನಿವಾರ ಮತ್ತು ಭಾನುವಾರ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗಲಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ನಿವೇದಿತಾ ಗೌಡ ಹಾಗೂ ಶ್ರುತಿ ಪ್ರಕಾಶ್.... ಈ ಐವರಲ್ಲಿ ನಿಜವಾದ ವಿನ್ನರ್ ಯಾರಾಗಬಹುದು ಎಂದು ತಿಳಿಯಲು ನಾಳೆ ಸಂಜೆ 7 ಗಂಟೆಗೆ ಕಲರ್ಸ್ ಸೂಪರ್ ಟ್ಯೂನ್ ಮಾಡಿ...