»   » 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಭಾಗ 1

'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ - ಭಾಗ 1

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಮೊದಲ ಭಾಗ ನಿನ್ನೆ (ಜನವರಿ 27) ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಯ್ತು. ಇದೇ ಸಂಚಿಕೆಯಲ್ಲಿ ಶ್ರುತಿ ಪ್ರಕಾಶ್ ಹಾಗೂ ನಿವೇದಿತಾ ಗೌಡ ಔಟ್ ಆದರು.

ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಟಾಪ್ 3 ಹಂತಕ್ಕೆ ಲಗ್ಗೆ ಇಟ್ಟರು. ಈ ಮೂವರ ಪೈಕಿ ಯಾರು ವಿನ್ನರ್ ಆಗುತ್ತಾರೆ ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಅದಕ್ಕೂ ಮುನ್ನ ಹಲವು ವಿಶೇಷತೆಗಳಿಂದ ಕೂಡಿದ ಗ್ರ್ಯಾಂಡ್ ಫಿನಾಲೆಯ ಮೊದಲ ಸಂಚಿಕೆಯ ಹೈಲೈಟ್ಸ್ ಇಲ್ಲಿದೆ. ನೋಡ್ಕೊಂಡ್ ಬನ್ನಿ...

ಫೈನಲಿಸ್ಟ್ ಗಳ ಪರ್ಫಾಮೆನ್ಸ್

ಟಾಪ್ 5 ಹಂತಕ್ಕೆ ತಲುಪಿದ್ದ ನಿವೇದಿತಾ, ಶ್ರುತಿ ಪ್ರಕಾಶ್, ದಿವಾಕರ್, ಜಯರಾಂ ಕಾರ್ತಿಕ್ ಹಾಗೂ ಚಂದನ್ ಶೆಟ್ಟಿ ಅವರುಗಳ ಡ್ಯಾನ್ಸ್ ಪರ್ಫಾಮೆನ್ಸ್ ಮೂಲಕ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫಿನಾಲೆಗೆ ಚಾಲನೆ ನೀಡಲಾಯ್ತು.

ಟಾಪ್ 5 ಸ್ಪರ್ಧಿಗಳ ಕುಟುಂಬದವರ ಪ್ರಕಾರ 'ಇವರೇ' ಬಿಗ್ ಬಾಸ್ ಗೆಲ್ಲಬೇಕು.!

ಜಸ್ಟ್ ಮಾತ್ ಮಾತಲ್ಲಿ...

'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ಹಾಡಿನ ಮೂಲಕ ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳೆಲ್ಲ ವೇದಿಕೆಗೆ ಆಗಮಿಸಿದರು.

ಮೊದಲು ಶ್ರುತಿ ನಂತರ ನಿವೇದಿತಾ: ಸದ್ಯ ಉಳಿದಿರೋದು ಮೂವರು ಮಾತ್ರ.!

'ಹೆಬ್ಬುಲಿ' ಘರ್ಜನೆ

'ಹೆಬ್ಬುಲಿ' ಚಿತ್ರದ ಟೈಟಲ್ ಟ್ರ್ಯಾಕ್ ಮೂಲಕ ಕಿಚ್ಚ ಸುದೀಪ್ 'ಬಿಗ್ ಬಾಸ್' ವೇದಿಕೆಗೆ ಎಂಟ್ರಿಕೊಟ್ಟು ಕಿಚ್ಚು ಹಚ್ಚಿಸಿದರು.

'ಬಿಗ್ ಬಾಸ್ ಕನ್ನಡ-5': ಗ್ರ್ಯಾಂಡ್ ಫಿನಾಲೆಯಿಂದ ಹೊರಬಂದ ಮೊದಲ ಸ್ಪರ್ಧಿ ಶ್ರುತಿ

ಸ್ಪರ್ಧಿಗಳಿಗೆ ವಾಸ್ತವ ದರ್ಶನ

ಕಳೆದ ಮೂರು ತಿಂಗಳಿನಲ್ಲಿ ಹೊರಗಿನ ಪ್ರಪಂಚದಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ದರ್ಶನ 'ನ್ಯೂಸ್ ಬುಲೆಟಿನ್' ಮೂಲಕ ಸ್ಪರ್ಧಿಗಳಿಗೆ ಆಯ್ತು.

ಸಿಂಹ.. ಜಯಶ್ರೀನಿವಾಸನ್

'ಚಾಮುಂಡಿ ತಾಯಿ ಆಣೆ...' ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ವೇದಿಕೆ ಮೇಲೆ ಪ್ರತ್ಯಕ್ಷವಾದರು.

ವೇದಿಕೆ ಮೇಲೆ ಕುಟುಂಬದವರು

ಟಾಪ್ 5 ಹಂತ ತಲುಪಿದ್ದ ಸ್ಪರ್ಧಿಗಳ ಕುಟುಂಬದವರನ್ನ ವೇದಿಕೆ ಮೇಲೆ ಆಹ್ವಾನಿಸಿದ ಸುದೀಪ್ ಅವರೊಂದಿಗೆ ಕೆಲಕಾಲ ಹರಟೆ ಹೊಡೆದರು.

ಸಮೀರಾಚಾರ್ಯ ಜೊತೆ ಮಾತುಕತೆ

ಐದು ದಿನಗಳ ಹಿಂದೆಯಷ್ಟೇ ಔಟ್ ಆಗಿದ್ದ ಸಮೀರಾಚಾರ್ಯ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆಸಿದರು.

ಲಾಸ್ಯ ಪರ್ಫಾಮೆನ್ಸ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ಲಾಸ್ಯ 'ಕಾಂತಾ...' ಹಾಡಿಗೆ ಹೆಜ್ಜೆ ಹಾಕಿದರು.

ಎಲ್ಲೆಲ್ಲು ಓಡುವ ಮನಸೇ...

'ಎಲ್ಲೆಲ್ಲು ಓಡುವ ಮನಸೇ...' ಹಾಡಿಗೆ ತೇಜಸ್ವಿನಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು

ಔಟ್ ಆದ ಶ್ರುತಿ ಪ್ರಕಾಶ್

ಮೊದಲ ರೌಂಡ್ ಎಲಿಮಿನೇಷನ್ ನಲ್ಲಿ ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಔಟ್ ಆದರು.

ಸ್ಟೆಪ್ ಹಾಕಿದ ರಿಯಾಝ್

'ಬಿಗ್ ಬಾಸ್' ಮನೆಯೊಳಗೆ ರೂಲ್ಸ್ ಗಾಗಿ ಫೇಮಸ್ ಆಗಿದ್ದ ರಿಯಾಝ್ 'ಚಕ್ರವ್ಯೂಹ' ಹಾಡಿಗೆ ಸ್ಟೆಪ್ ಹಾಕಿದರು.

ನಿವೇದಿತಾ ಔಟ್

ಎರಡನೇ ರೌಂಡ್ ಎಲಿಮಿನೇಷನ್ ನಲ್ಲಿ ನಿವೇದಿತಾ ಗೌಡ ಔಟ್ ಆದರು.

ಟಾಪ್ 3

ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಸದ್ಯ ಟಾಪ್ 3 ಸ್ಥಾನದಲ್ಲಿ ಇದ್ದಾರೆ. ಇವರ ಪೈಕಿ ಯಾರಿಗೆ ವಿಜಯ ಕಿರೀಟ ದೊರಕುತ್ತೆ.? ಇಂದು ನೋಡೋಣ.

English summary
Bigg Boss Kannada 5: In pics- Grand Finale highlights part-1.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada