For Quick Alerts
  ALLOW NOTIFICATIONS  
  For Daily Alerts

  ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ನಟ ಜಯರಾಂ ಕಾರ್ತಿಕ್.!

  By Harshitha
  |

  ಬಹುತೇಕ ಸ್ಪರ್ಧಿಗಳ ಊಹೆ ಸುಳ್ಳಾಗಿದೆ. ಸೆಲೆಬ್ರಿಟಿ ಸ್ಪರ್ಧಿಗಳ ಆಸೆಗೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ. 'ಬಿಗ್ ಬಾಸ್' ಮನೆಯೊಳಗೆ ಸದಾ ನಗುನಗುತ್ತಾ ಕಾಲ ಕಳೆದ ನಟ, ಸಿ.ಸಿ.ಎಲ್ ಆಟಗಾರ ಜಯರಾಂ ಕಾರ್ತಿಕ್ 'ಬಿಗ್ ಬಾಸ್' ಗೆಲ್ಲುವ ರೇಸ್ ನಿಂದ ಹೊರಬಿದ್ದಿದ್ದಾರೆ.

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮವನ್ನ ಜಯರಾಂ ಕಾರ್ತಿಕ್ ಗೆದ್ದೇ ಗೆಲ್ಲುತ್ತಾರೆ, ಗೆಲ್ಲಲೇಬೇಕು ಎಂಬುದು ದಯಾಳ್, ತೇಜಸ್ವಿನಿ, ಆಶಿತಾ, ಜಗನ್ ಸೇರಿದಂತೆ ಎಲ್ಲ ಸೆಲೆಬ್ರಿಟಿ ಸ್ಪರ್ಧಿಗಳ ಇಚ್ಛೆ ಆಗಿತ್ತು. ಹಾಗೇ, ಜೆಕೆ ಅಭಿಮಾನಿಗಳ ಆಶಯ ಕೂಡ ಆಗಿತ್ತು. ಆದ್ರೆ, ಇದು ಈಡೇರಲಿಲ್ಲ.

  ಟಾಪ್ 3 ಹಂತಕ್ಕೆ ಏರಿದ್ದ ಜೆಕೆ, ಗೆಲ್ಲಲು ಒಂದೇ ಒಂದು ಹೆಜ್ಜೆ ಬಾಕಿ ಇರುವಾಗ ಎಡವಿ ಬಿದ್ದಿದ್ದಾರೆ. ಜಯರಾಂ ಕಾರ್ತಿಕ್ ಜೊತೆಗೆ ಚಂದನ್ ಶೆಟ್ಟಿ ಹಾಗೂ ದಿವಾಕರ್ ಗ್ರ್ಯಾಂಡ್ ಫಿನಾಲೆಯ ಟಾಪ್ 3 ಸ್ಥಾನ ತಲುಪಿದ್ದರು. ಈ ಮೂವರ ಪೈಕಿ ಮೊದಲು ಸೂಟ್ ಕೇಸ್ ಹಿಡಿದು 'ಬಿಗ್ ಬಾಸ್' ಮನೆಯಿಂದ ಹೊರಬಂದವರು ಜಯರಾಂ ಕಾರ್ತಿಕ್.

  ''ಕನ್ನಡಿಗರು ನನ್ನ ಮಗನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ'' ಎಂದು ಜಯರಾಂ ಕಾರ್ತಿಕ್ ತಂದೆ 'ಬಿಗ್ ಬಾಸ್' ವೇದಿಕೆ ಮೇಲೆ ಹೇಳಿದ್ದರು. ಆದರೆ ಆ ಮಾತು ನಿಜ ಆಗಲಿಲ್ಲ. ಕಾಮನ್ ಮ್ಯಾನ್ ದಿವಾಕರ್ ಮತ್ತು ಕನ್ನಡ rapper ಚಂದನ್ ಶೆಟ್ಟಿ ಟಾಪ್ 2 ಹಂತಕ್ಕೆ ಲಗ್ಗೆ ಇಟ್ಟರು.

  ''ಜೀವನದಲ್ಲಿ ಹೇಗಿರಬೇಕು ಅಂತ ಸಾಕಷ್ಟು ಕಲಿತಿದ್ದೇನೆ. ಇದರ ಬಗ್ಗೆ ಖುಷಿ ಇದೆ'' ಎಂದ ಜೆಕೆ, ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಮನೆಯಿಂದ ಹೊರಬಂದರು. ಜೆಕೆ ಔಟ್ ಆಗಿದ್ದಕ್ಕೆ ದಯಾಳ್ ಕಣ್ಣೀರಿಟ್ಟರು. ಸೆಲೆಬ್ರಿಟಿ ಸ್ಪರ್ಧಿಗಳು ಶಾಕ್ ಆದರು.

  ಸದ್ಯ ಚಂದನ್ ಶೆಟ್ಟಿ ಹಾಗೂ ದಿವಾಕರ್ ಮಧ್ಯೆ ಗೆಲ್ಲೋರು ಯಾರು ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.

  English summary
  Bigg Boss Kannada 5 Grand Finale: Karthik Jayaram aka JK eliminated from #BBK5 House.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X