ಮೊದಲು ಶ್ರುತಿ ನಂತರ ನಿವೇದಿತಾ: ಸದ್ಯ ಉಳಿದಿರೋದು ಮೂವರು ಮಾತ್ರ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯ ಮೊದಲ ದಿನವಾದ ಇಂದು ಎರಡು ವಿಕೆಟ್ ಪತನಗೊಂಡಿದೆ. ಮೊದಲು ಗಾಯಕಿ ಮತ್ತು ನಟಿ ಶ್ರುತಿ ಪ್ರಕಾಶ್ ಎಲಿಮಿನೇಟ್ ಆದರೆ, ನಂತರ ಶ್ರುತಿ ಹಾದಿಯಲ್ಲೇ ಸಾಗಿದವರು 'ಬೊಂಬೆ' ನಿವೇದಿತಾ ಗೌಡ.
ಜನಸಾಮಾನ್ಯ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದ ನಿವೇದಿತಾ ಗೌಡ, 105 ದಿನಗಳ ಕಾಲ ಕ್ಯಾಮರಾ ಮುಂದೆ ಬಂಧಿಯಾಗಿದ್ದರು. 'ಬಿಗ್' ಮನೆಯೊಳಗೆ ಹೋದ್ಮೇಲೆ ಅಪಾರ ಅಭಿಮಾನಿ ಬಳಗ ಗಳಿಸಿದ ನಿವೇದಿತಾ ಗೌಡ, ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ಎಲಿಮಿನೇಟ್ ಆದರು.
'ದೊಡ್ಮನೆ'ಯೊಳಗೆ ವಿವಾದಗಳಿಗೆ ಸಿಲುಕದೆ, ಡಬಲ್ ಗೇಮ್ ಆಡದೆ ಸ್ವಚ್ಛ ಮನಸ್ಸಿನಿಂದ ಸದಾ ಖುಷಿ ಖುಷಿಯಾಗಿ ಇರುತ್ತಿದ್ದವರು ನಿವೇದಿತಾ ಗೌಡ. ಚಂದನ್ ಶೆಟ್ಟಿಗೆ ಕ್ಲೋಸ್ ಫ್ರೆಂಡ್ ಆಗಿದ್ದವರು ನಿವೇದಿತಾ ಗೌಡ. ನಿವೇದಿತಾ ಬಗ್ಗೆ ಚಂದನ್ ಶೆಟ್ಟಿ ಸಂಯೋಜಿಸಿದ್ದ 'ಗೊಂಬೆ... ಗೊಂಬೆ...' ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

'ಬಿಗ್ ಬಾಸ್' ಸ್ಪರ್ಧಿಯಾಗಲೇಬೇಕು ಎಂದು ನಾಲ್ಕು ವರ್ಷಗಳಿಂದ ಕನಸು ಕಂಡಿದ್ದ ನಿವೇದಿತಾ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಭಾಗವಹಿಸಿ ಟಾಪ್ 4 ಹಂತದವರೆಗೂ ಬರುವಲ್ಲಿ ಯಶಸ್ವಿಯಾದರು.
ನಿವೇದಿತಾ ಗೌಡ ಜೊತೆಗೆ ಶ್ರುತಿ ಪ್ರಕಾಶ್, ಜಯರಾಂ ಕಾರ್ತಿಕ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಫೈನಲಿಸ್ಟ್ ಆಗಿದ್ದರು. ಐದು ಜನರ ಪೈಕಿ ಮೊದಲು ಶ್ರುತಿ ಎಲಿಮಿನೇಟ್ ಆದರು. ಬಳಿಕ ನಿವೇದಿತಾ ಗೌಡ ಔಟ್ ಆದರು.
ಸದ್ಯ ಟಾಪ್ 3 ಹಂತದಲ್ಲಿ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಕಾರ್ ಮಾತ್ರ ಇದ್ದಾರೆ. ಫೈನಲ್ ಹಂತ ತಲುಪಿದ್ದ ಇಬ್ಬರು ಹೆಣ್ಮಕ್ಕಳು ಹೊರಗೆ ಬಂದಿದ್ದಾರೆ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.


Click it and Unblock the Notifications











