»   » ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ.?

ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ.?

Posted By:
Subscribe to Filmibeat Kannada
Bigg Boss Kannada Season 5 : ಅನುಪಮಾ ಗೌಡ ಗುಟ್ಟಾಗಿ ಮದುವೆಯಾಗಿದ್ದಾರಂತೆ? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದೇ ತಡ, ಅಷ್ಟು ದಿನ ಸೀರಿಯಲ್ ಲೋಕಕ್ಕೆ ಮಾತ್ರ ಗೊತ್ತಿದ್ದ 'ಅಕ್ಕ' ಅನುಪಮಾ ಗೌಡ ಹಾಗೂ 'ಗಾಂಧಾರಿ' ಜಗನ್ನಾಥ್ ಲವ್ ಕಮ್ ಬ್ರೇಕಪ್ ಸ್ಟೋರಿ... ಇಡೀ ಕರ್ನಾಟಕದಲ್ಲಿ ಜಗಜ್ಜಾಹೀರಾಯ್ತು.

'ಬಿಗ್ ಬಾಸ್' ಮನೆಯಲ್ಲೇ ತಮ್ಮ ಪ್ರೀತಿ ಮುರಿದು ಬಿದ್ದ ಚರಿತ್ರೆಯನ್ನ ಹೇಳುತ್ತಾ ಕಣ್ಣೀರು ಸುರಿಸಿದ್ದ ನಟಿ ಅನುಪಮಾ ಗೌಡಗೆ ಈಗಾಗಲೇ ಮದುವೆ ಆಗಿದ್ಯಂತೆ.! ಹಾಗಂತ ಸ್ವತಃ ಅನುಪಮಾ ಗೌಡ ಹೇಳಿಕೊಂಡಿದ್ದಾರೆ.

ಅದು ಕಾಗೆ ಹಾರಿಸುವ ಪ್ರೋಗ್ರಾಮೋ, ಇಲ್ಲ ನಿಜವಾಗಲೂ ಹಾಗೆ ಹೇಳಿದ್ರೋ ನಮಗಂತೂ ಗೊತ್ತಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್' ಮನೆಯೊಳಗೆ ''ನನಗೆ ಮದುವೆ ಆಗಿದೆ'' ಎಂಬ ಮಾತು ಅನುಪಮಾ ಗೌಡ ಬಾಯಿಂದ ಬಂದಿದೆ. ಮುಂದೆ ಓದಿರಿ....

ರಿಯಾಝ್ ತಲೆಯಲ್ಲಿ ಏನಿತ್ತು.?

ನಟಿ ಅನುಪಮಾ ಗೌಡ ಮದುವೆಯ ಟಾಪಿಕ್ ಶುರು ಆಗಿದ್ದು ರಿಯಾಝ್ ರಿಂದ. ಅನುಪಮಾ ಗೌಡಗೆ ಮದುವೆ ಆಗಿದೆ ಎಂದು ರಿಯಾಝ್ ಅಂದುಕೊಂಡಿದ್ದರಂತೆ. ''ನಾನು ಇಲ್ಲಿಯವರೆಗೂ ಅನುಪಮಾಗೆ ಮದುವೆ ಆಗಿದೆ ಅಂತಲೇ ತಿಳಿದುಕೊಂಡಿದ್ದೆ'' ಎಂದು ಅನುಪಮಾಗೆ ರಿಯಾಝ್ ಹೇಳಿದರು.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಜೆಕೆಗೆ ಯಾರೋ ಹೇಳಿದ್ರಂತೆ.!

''ನಾನೂ ಕೂಡ ಅನುಪಮಾಗೆ ಮದುವೆ ಆಗಿದೆ ಅಂತಲೇ ತಿಳಿದುಕೊಂಡಿದ್ದೇನೆ. ಅನುಪಮಾಗೆ ಮದುವೆ ಆಗಿದೆ ಅಂತ ನನಗೆ ಯಾರೋ ಹೇಳಿದ್ದರು. ಮದುವೆ ಆಯ್ತಾ.?'' ಎಂದು ಅನುಪಮಾಗೆ ಜೆಕೆ ಕೂಡ ಪ್ರಶ್ನೆ ಮಾಡಿದರು.

ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!

ವ್ಯತ್ಯಾಸ ಏನು.?

''ನಾನು ಮದುವೆ ಆಗಿದ್ರೂ, ಆಗದೇ ಇದ್ದರೂ ಏನು ವ್ಯತ್ಯಾಸ ಆಗುತ್ತೆ ನಿನಗೆ'' ಅಂತ ಅನುಪಮಾ ಕೇಳಿದಾಗ ''ಆಂಟಿ ಅಂತ ಕರೆಯಬಹುದಲ್ವಾ.?'' ಎಂದು ಜೆಕೆ ಕಾಲೆಳೆದರು.

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಜಯಶ್ರೀನಿವಾಸನ್ ಏನಂತಾರೆ.?

''ನನಗೆ ಮದುವೆ ಆಗಿದೆ ಅಂತ ಅನ್ಸುತ್ತಾ.? ಆಗಿಲ್ಲ ಅಂತ ಅನ್ಸುತ್ತಾ.?'' ಎಂದು ಜಯಶ್ರೀನಿವಾಸನ್ ಬಳಿ ಅನುಪಮಾ ಗೌಡ ಕೇಳಿದರು. ಆಗ ಅನುಪಮಾ ಕೈ ನೋಡಿ ''ಇನ್ನೂ ಮದುವೆ ಆಗಿಲ್ಲ'' ಎಂದರು ಜಯಶ್ರೀನಿವಾಸನ್.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ಗುಟ್ಟಾಗಿ ಮದುವೆ ಆಗಿದ್ದಾರಾ.?

''ನನಗೆ ಮದುವೆ ಆಗಿದೆ. ಆದ್ರೆ, ಅದನ್ನ ನಾನು ರಿವೀಲ್ ಮಾಡುತ್ತಿಲ್ಲ ಅಷ್ಟೆ'' ಎಂದುಬಿಟ್ಟರು ಅನುಪಮಾ ಗೌಡ.

ಅನುಪಮಾ ಗಂಡನ ಹೆಸರೇನು.?

''ನಿನ್ನ ಗಂಡನ ಹೆಸರು ಕಾರ್ತಿಕ್ ಅಲ್ವಾ?'' ಅಂತ ಜೆಕೆ ಕೇಳಿದ್ದಕ್ಕೆ, ''ನೋಡು ಎಷ್ಟು ಚೆನ್ನಾಗಿ ನೆನಪಲ್ಲಿ ಇಟ್ಟುಕೊಂಡಿದ್ದೀಯಾ.?'' ಎಂದರು ಅನುಪಮಾ ಗೌಡ.

ಎಷ್ಟು ವರ್ಷ ಆಯ್ತು ಮದುವೆ ಆಗಿ.?

''ಎರಡು ವರ್ಷ ಆಯ್ತು ಮದುವೆ ಆಗಿ'' ಅಂತ ಜಯಶ್ರೀನಿವಾಸನ್ ಬಳಿ ಅನುಪಮಾ ಗೌಡ ಹೇಳುತ್ತಿದ್ದರು.

ಇದು ನಿಜವೋ, ಸುಳ್ಳೋ.?

ಇದೆಲ್ಲ ಕಾಗೆ ಹಾರಿಸುವ ಪ್ರೋಗ್ರಾಮೋ ಅಥವಾ ಸೀರಿಯಸ್ ಮಾತುಕತೆಯೋ ಎಂಬುದರ ಬಗ್ಗೆ ನಮಗಂತೂ ಕ್ಲಾರಿಟಿ ಇಲ್ಲ.

English summary
Bigg Boss Kannada 5: Week 6: Is Anupama Gowda secretly married.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada