»   » ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ದಿನಕ್ಕೊಂದು ಕಿರಿಕ್ ಗಳಿಂದ ಬೇಜಾನ್ ಸೌಂಡ್ ಮಾಡಿದವರು 'ಒಳ್ಳೆ ಹುಡುಗ' ಪ್ರಥಮ್. ಕಿರಿಕ್ ಮಾತ್ರ ಅಲ್ಲ, ಅದರೊಂದಿಗೆ ಮನರಂಜನೆ ಕೂಡ ಕೊಡುತ್ತಿದ್ದ ಪ್ರಥಮ್ 'ಬಿಗ್ ಬಾಸ್' ವಿನ್ನರ್ ಆದರು.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗ ಪ್ರಥಮ್ ಯಾರು ಅನ್ನೋದೇ ಕರ್ನಾಟಕ ಜನತೆಗೆ ಗೊತ್ತಿರಲಿಲ್ಲ. ಅಂಥ ಪ್ರಥಮ್ 'ಬಿಗ್ ಬಾಸ್' ವಿಜೇತರಾಗುತ್ತಾರೆ ಅಂದ್ರೆ, ಪ್ರಥಮ್ ವ್ಯಕ್ತಿತ್ವ, ಗೇಮ್ ಪ್ಲಾನ್ ಜನರಿಗೆ ಇಷ್ಟ ಆಗಿದೆ ಅಂತಲೇ ಅರ್ಥ.

ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ.!

ಇಂತಿಪ್ಪ ಪ್ರಥಮ್ ರನ್ನ ದಿವಾಕರ್ ಫಾಲೋ ಮಾಡ್ತಿದ್ದಾರಾ.? 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೂ 'ಕಾಮನ್ ಮ್ಯಾನ್' ದಿವಾಕರ್ ಟಾರ್ಗೆಟ್ ಆಗಿದ್ದಾರೆ. ಹಲವು ಗಲಾಟೆ, ಜಗಳಗಳಿಗೆ ದಿವಾಕರ್ ಸಾಕ್ಷಿ ಆಗಿದ್ದಾರೆ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ 'ಕಿರಿಕ್' ಕೀರ್ತಿ, 'ಬಿಗ್ ಬಾಸ್' ಮನೆಯೊಳಗೆ ಕನ್ನಡ ಮೇಷ್ಟ್ರಾಗಿ ಹೋಗಿದ್ದಾಗ, ''ಕಳೆದ ಸೀಸನ್ ನಲ್ಲಿ ಎಲ್ಲದಕ್ಕೂ ಖಂಡಿಸುತ್ತೇನೆ ಅಂತ ಹೇಳುತ್ತಿದ್ದ ಸ್ಪರ್ಧಿಯನ್ನ ನೀವು ಫಾಲೋ ಮಾಡುತ್ತಿದ್ದೀರಾ'' ಅಂತ ದಿವಾಕರ್ ಗೆ ಹೇಳಿದ್ರಂತೆ.! ಮುಂದೆ ಓದಿರಿ...

ಸುದೀಪ್ ಕೇಳಿದ ಪ್ರಶ್ನೆ ಏನು.?

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಸ್/ನೋ ಪ್ರಶ್ನೆಗಳ ಸುತ್ತಿನಲ್ಲಿ, ''ತಾವು ಯಾಕೆ ಎಲ್ಲರ ಜೊತೆ ಜಗಳ ಆಡುತ್ತಿದ್ದೇನೆ ಅಂತ ಸ್ವತಃ ದಿವಾಕರ್ ಅವರಿಗೇ ಗೊತ್ತಿಲ್ಲ.!'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಸುದೀಪ್ ಮುಂದೆ ಬಾಯ್ಬಿಟ್ಟ ಜಯಶ್ರೀನಿವಾಸನ್.!

ಸುದೀಪ್ ಕೇಳಿದ ಪ್ರಶ್ನೆಗೆ 'ನೋ' ಎನ್ನುತ್ತಾ, ''ದಿವಾಕರ್ ಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ''ಕಳೆದ ಸೀಸನ್ ನಲ್ಲಿ ಎಲ್ಲದಕ್ಕೂ ಖಂಡಿಸುತ್ತೇನೆ ಅಂತ ಹೇಳುತ್ತಿದ್ದ ಸ್ಪರ್ಧಿಯನ್ನ ನೀವು ಫಾಲೋ ಮಾಡುತ್ತಿದ್ದೀರಾ'' ಅಂತ ಕೀರ್ತಿ ಹೇಳಿದಾಗ ದಿವಾಕರ್ ಅವರಲ್ಲಿ ಬದಲಾವಣೆ ಕಾಣ್ತು. ದಿವಾಕರ್ ಅವರಿಗೆ ಎಲ್ಲ ವಿಷಯ ಗೊತ್ತಿದೆ. ಸ್ಟ್ರಾಟೆಜಿ ಪ್ರಕಾರವೇ ಆಡುತ್ತಿದ್ದಾರೆ'' ಎಂದು ಜಯಶ್ರೀನಿವಾಸನ್ ಹೇಳಿದರು.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಯಾರ ರೀತಿಯೂ ಆಡುತ್ತಿಲ್ಲ.!

ಸ್ಟ್ರಾಟೆಜಿ ಪ್ರಕಾರ ದಿವಾಕರ್ ಆಡುತ್ತಿದ್ದಾರೆ ಅಂತ ಜಯಶ್ರೀನಿವಾಸನ್ ಹೇಳಿದ್ದಕ್ಕೆ, ಸಿಟ್ಟಾದ ದಿವಾಕರ್, ''ಇಲ್ಲಿಯವರೆಗೂ ನಾನು 'ಬಿಗ್ ಬಾಸ್' ಕಾರ್ಯಕ್ರಮದ ಮೂರ್ನಾಲ್ಕು ಸಂಚಿಕೆಗಳನ್ನು ಮಾತ್ರ ನೋಡಿರಬಹುದು. ಆದ್ರೆ, ಯಾರ ರೀತಿಯೂ ಪ್ಲಾನ್ ಮಾಡಿ ಆಡುತ್ತಿಲ್ಲ'' ಎಂದು ದಿವಾಕರ್ ಹೇಳಿದರು.

ನಿಮಗೇನು ಅನ್ಸುತ್ತೆ.?

ಪ್ರಥಮ್ ರವರನ್ನ ದಿವಾಕರ್ ಫಾಲೋ ಮಾಡುತ್ತಿದ್ದಾರೆ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 6: Is Diwakar following Pratham.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada