»   » ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ತಿಳಿಯದ ಜಗನ್.!

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ತಿಳಿಯದ ಜಗನ್.!

Posted By:
Subscribe to Filmibeat Kannada
Bigg Boss Kannada 5 : ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ತಿಳಿಯದ ಜಗನ್ | Filmibeat Kannada

ಕರ್ನಾಟಕದಲ್ಲಿ ಹುಟ್ಟಿ ಬೆಳೆದು... ಕನ್ನಡದ 'ಕಲರ್ಸ್ ಕನ್ನಡ' ವಾಹಿನಿಯ 'ಗಾಂಧಾರಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದ ಕನ್ನಡಿಗ ಜಗನ್ನಾಥ್ ಚಂದ್ರಶೇಖರ್ ಅವರಿಗೆ ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಅನ್ನೋದೇ ಗೊತ್ತಿಲ್ಲ.!

ಹೌದು, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರ ಕ್ಯಾಪ್ಟನ್ ಟಾಸ್ಕ್ ಅನುಸಾರವಾಗಿ ಸ್ಪರ್ಧಿಗಳ ಸಾಮಾನ್ಯ ಜ್ಞಾನವನ್ನ 'ಬಿಗ್ ಬಾಸ್' ಪರೀಕ್ಷಿಸಿದರು.

ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ.!

Bigg Boss Kannada 5: Jagan's General Knowledge put to test

ಅದರಂತೆ, ''ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ'' ಎಂಬ ಪ್ರಶ್ನೆಯನ್ನ 'ಬಿಗ್ ಬಾಸ್' ಜಗನ್ ಗೆ ಕೇಳಿದರು. ಪ್ರಶ್ನೆ ಕೇಳಿದ ಕೂಡಲೆ ಉತ್ತರ ಗೊತ್ತಾಗದೆ ''ಯಾಕೆ ಉಗಿಸುತ್ತೀರಾ ಜನರ ಕೈಯಲ್ಲಿ ನನ್ನನ್ನ.?'' ಎನ್ನುತ್ತಾ ''32'' ಎಂದು ತಪ್ಪು ಉತ್ತರ ಕೊಟ್ಟರು ಜಗನ್.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಹಾಗೇ, ''ಮಿಸ್ ಯೂನಿವರ್ಸ್ ಪಟ್ಟವನ್ನು ಮೊದಲು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಮಹಿಳೆ ಯಾರು.?'' ಎಂಬ ಪ್ರಶ್ನೆಗೂ ''ಐಶ್ವರ್ಯ ರೈ'' ಎಂದು ತಪ್ಪು ಉತ್ತರ ನೀಡಿ ಕ್ಯಾಪ್ಟನ್ ರೇಸ್ ನಿಂದ ಹೊರಬಿದ್ದರು ಜಗನ್ನಾಥ್ ಚಂದ್ರಶೇಖರ್.

English summary
Bigg Boss Kannada 5: Week 6: Jagan's General Knowledge put to test

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada