»   » ಅನುಪಮಾ ಏನೇನ್ ಹೇಳಿದ್ರೋ, ಎಲ್ಲವೂ ಜಗನ್ ಮುಂದೆ ಜಗಜ್ಜಾಹೀರಾಯ್ತು.!

ಅನುಪಮಾ ಏನೇನ್ ಹೇಳಿದ್ರೋ, ಎಲ್ಲವೂ ಜಗನ್ ಮುಂದೆ ಜಗಜ್ಜಾಹೀರಾಯ್ತು.!

Posted By:
Subscribe to Filmibeat Kannada
ಅನುಪಮಾ ಏನೇನ್ ಹೇಳಿದ್ರೋ, ಎಲ್ಲವೂ ಜಗನ್ ಮುಂದೆ ಜಗಜ್ಜಾಹೀರಾಯ್ತು

ಪ್ರಿಯತಮನಾಗಿದ್ದ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಜೊತೆಗೆ ಬ್ರೇಕಪ್ ಆದ ತಮ್ಮ ಬದುಕಿನ ಕಹಿ ಘಟನೆಯನ್ನ 'ಬಿಗ್ ಬಾಸ್' ಮನೆಯಲ್ಲಿ ಅನುಪಮಾ ಕಣ್ಣೀರು ಸುರಿಸುತ್ತಾ ನಟಿ ತೇಜಸ್ವಿನಿ ಅವರೊಂದಿಗೆ ಹೇಳಿಕೊಂಡರು. ಆ ಮೂಲಕ ಜಗನ್ನಾಥ್ ಹಾಗೂ ಅನುಪಮಾ 'ಮಾಜಿ ಪ್ರೇಮಿಗಳು' ಎಂಬ ಸಂಗತಿ ಬಟಾ ಬಯಲಾಯ್ತು.

ಅಲ್ಲಿಯವರೆಗೂ ಅನುಪಮಾ ತಮಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದ ಜಗನ್ನಾಥ್... ಅನುಪಮಾ ಕಣ್ಣೀರು ಸುರಿಸಿದ್ಮೇಲೆ, ಕ್ಯಾಮರಾ ಮುಂದೆ ಯೋಚಿಸಿ ಮಾತನಾಡುವಂತೆ ಸೂಚಿಸಿದ್ದರು.

ತೇಜಸ್ವಿನಿ ಜೊತೆ ಅನುಪಮಾ ವೈಯುಕ್ತಿಕ ವಿಚಾರವನ್ನು ಹೇಳಿಕೊಂಡಿದ್ದಾರೆ ಎಂಬ ಗ್ಯಾರೆಂಟಿ ಜಗನ್ ಗೆ ಇತ್ತು. ಆದ್ರೆ, ಅನುಪಮಾ ತಮ್ಮ ಬ್ರೇಕಪ್ ಕಹಾನಿಯನ್ನೇ ಹೇಳಿಕೊಂಡಿದ್ದಾರಾ ಎಂಬುದರ ಬಗ್ಗೆ ಕ್ಲಾರಿಟಿ ಇರಲಿಲ್ಲ. ಕ್ಲಾರಿಫೈ ಮಾಡಿಕೊಳ್ಳುವ ಗೋಜಿಗೂ ಜಗನ್ ಹೋಗಲಿಲ್ಲ. ಹೀಗಿರುವಾಗಲೇ, ತೇಜಸ್ವಿನಿ ಜೊತೆ ಅನುಪಮಾ ಮಾತನಾಡಿದ ಸುದೀರ್ಘ ವಿಡಿಯೋ ಕ್ಲಿಪ್ ನ ಜಗನ್ ವೀಕ್ಷಿಸಿದ್ದಾರೆ. ಮುಂದೆ ಓದಿರಿ....

'ಬಿಗ್ ಬಾಸ್ ನಗರ' ಲಕ್ಷುರಿ ಬಜೆಟ್ ಟಾಸ್ಕ್

ಆಧುನಿಕ ನಗರದ ಜನ ಜೀವನದ ಶೈಲಿಯನ್ನ ಪರಿಚಯಿಸುವ ಸಲುವಾಗಿ 'ಬಿಗ್ ಬಾಸ್ ನಗರ' ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಇದರ ಅನುಸಾರ ಮನೆಯ ವಿವಿಧ ಜಾಗಗಳಿಗೆ ವಿವಿಧ ಹೆಸರು ನೀಡಲಾಗಿತ್ತು. ಅದರಂತೆ ಕನ್ಫೆಶನ್ ಕೋಣೆಗೆ 'ಕಪಾಲಿ ಚಿತ್ರಮಂದಿರ' ಅಂತ ಹೆಸರು ಇಡಲಾಗಿತ್ತು.

ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ.?

ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ

'ಚಿತ್ರ ಪ್ರದರ್ಶನ' ಎಂದ ಕೂಡಲೆ 'ಬಿಗ್ ಬಾಸ್' ಮನೆಯಲ್ಲಿ ಮನರಂಜನೆಗೆ ಅವಕಾಶ ನೀಡಿಲ್ಲ. ಬದಲಾಗಿ, ಕನ್ಫೆಶನ್ ರೂಮ್ ಅರ್ಥಾತ್ ಕಪಾಲಿ ಚಿತ್ರಮಂದಿರದಲ್ಲಿ 'ಬಿಗ್ ಬಾಸ್' ಮನೆಯಲ್ಲಿರುವವರ ನಿಜ ಬಣ್ಣ ಬಯಲು ಮಾಡಲಾಗುತ್ತಿತ್ತು.

ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!

ಕಪಾಲಿ ಚಿತ್ರಮಂದಿರದಲ್ಲಿ ಜಗನ್ ನೋಡಿದ್ದೇನು.?

ಕಪಾಲಿ ಚಿತ್ರಮಂದಿರದಲ್ಲಿ ಸಿಹಿ ಕಹಿ ಚಂದ್ರು ಬಳಿಕ ಒಳಗೆ ಹೋದವರು ಜಗನ್ನಾಥ್. ಅಲ್ಲಿ ಮುಂಗಡ ಹಣ ಪಾವತಿ ಮಾಡಿ, ಜಗನ್ ಚಿತ್ರ ವೀಕ್ಷಿಸಿದರು.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಒಳಗೆ ಏನಾಯ್ತು.?

ಕಿಚ್ಚ ಸುದೀಪ್ ಮುಂದೆ ಜಗನ್ ಹಾಗೂ ಆಶಿತಾ ಬಗ್ಗೆ ಕೃಷಿ ಮಾಡಿದ ಕಾಮೆಂಟ್ ಕ್ಲಿಪ್ ನ ಜಗನ್ ವೀಕ್ಷಿಸಿದರು.

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ಅನುಪಮಾ ಕಣ್ಣೀರಧಾರೆ

ಜಗನ್ನಾಥ್ ಜೊತೆಗಿನ ತಮ್ಮ ಲವ್ ಹಾಗೂ ಬ್ರೇಕಪ್ ಬಗ್ಗೆ ಕಣ್ಣೀರು ಸುರಿಸುತ್ತಾ ಅನುಪಮಾ ಮಾತನಾಡಿದ ವಿಡಿಯೋ ಕ್ಲಿಪ್ ನ ಜಗನ್ ವೀಕ್ಷಿಸಿದರು.

ಜಗನ್ ಕೊಟ್ಟ ಪ್ರತಿಕ್ರಿಯೆ ಹೇಗಿತ್ತು.?

ಇಷ್ಟೆಲ್ಲ ನೋಡಿದ್ಮೇಲೆ, ''ಈ ಸಿನಿಮಾ ನೋಡುವುದು ಬೇಡ, ಮೆಂಟಲ್ ಆಗುವುದು ಬೇಡ. ಏನೇನು ಅಗಿದ್ಯೋ, ಎಲ್ಲಾ ಆಗಿದೆ. ಅಲ್ಲ, ಇಬ್ಬರು ಚೆನ್ನಾಗಿ ಮಾತನಾಡುತ್ತೇವೆ ಅಂದ್ರೆ ತಪ್ಪು ಕಲ್ಪನೆ, ತಪ್ಪು ಸಂಬಂಧ ಕಟ್ಟಿಬಿಡ್ತಾರಲ್ಲ... ಈ ಜನಕ್ಕೆ ಏನು ಹೇಳೋಣ'' ಎಂದು ಒಬ್ಬರೇ ಕೂತ್ಕೊಂಡು ಜಗನ್ ಮಾತನಾಡಿಕೊಳ್ಳುತ್ತಿದ್ದರು.

ಜಗನ್ ಗೆ ಈಗ ಕನ್ಫರ್ಮ್ ಆಗಿದೆ.!

ತೇಜಸ್ವಿನಿ ಜೊತೆ ಮಾತನಾಡುತ್ತಾ ಅನುಪಮಾ ಅತ್ತಿದ್ದು ಯಾಕೆ ಎಂಬ ಪ್ರಶ್ನೆಗೆ ಇದೀಗ ಜಗನ್ ಗೆ ಉತ್ತರ ಸಿಕ್ಕಿದೆ. ಅನುಪಮಾ ಜೊತೆಗಿನ ತಮ್ಮ ಬ್ರೇಕಪ್ ಕಹಾನಿ ಜಗಜ್ಜಾಹೀರಾಗಿದೆ ಎಂಬ ಸತ್ಯ ಕೂಡ ಜಗನ್ ಗೆ ಗೊತ್ತಾಗಿದೆ. ಇನ್ಮುಂದೆ ಜಗನ್ ಆಟದ ವೈಖರಿ ಯಾವ ರೀತಿ ಇರುತ್ತೋ, ನೋಡೋಣ.

ಅನುಪಮಾಗೆ ಭಯ.!

ಕಪಾಲಿ ಚಿತ್ರಮಂದಿರದಿಂದ ಹೊರಗೆ ಬಂದ್ಮೇಲೆ, ಜಗನ್ ಗೆ ಸಿಟ್ಟು ಬಂದಿದೆ ಎಂದು ಅನುಪಮಾ ಭಾವಿಸಿದ್ದಾರೆ. ಹೀಗಾಗಿ, ಜಗನ್ ರನ್ನ ಮಾತನಾಡಿಸುವುದೋ, ಬೇಡ್ವೋ ಎಂಬ ಭಯ ಅನುಪಮಾರಲ್ಲಿ ಕಾಡುತ್ತಿದೆ.

ಮುಂದೆ ಹೇಗಿರುತ್ತೋ.?

ಮೊದಲ ಕೆಲವು ದಿನ ಅನುಪಮಾ ರಿಂದ ದೂರ ಇದ್ದ ಜಗನ್, ಇತ್ತೀಚೆಗೆ ಮಾತನಾಡಲು ಆರಂಭಿಸಿದ್ದರು. ಇದೀಗ ವಿಡಿಯೋ ಕ್ಲಿಪ್ ನೋಡಿದ್ಮೇಲೆ, ಅನುಪಮಾರೊಂದಿಗೆ ಜಗನ್ ವರ್ತನೆ ಹೇಗಿರುತ್ತೋ.?!

English summary
Bigg Boss Kannada 5: Week 7: Jagan watched Anupama Gowda revealing her past in a video clip.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada