»   » ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

Posted By:
Subscribe to Filmibeat Kannada
Bigg Boss Kannada Season 5 : ಅನುಪಮಾಗೆ ತಬ್ಬಿ ಮುತ್ತಿಟ್ಟ ಜಗನ್ | Filmibeat Kannada

ಒಂದು ಕಾಲದಲ್ಲಿ ಪ್ರೇಮ ಪಕ್ಷಿಗಳಂತೆ ಹಾರಾಡಿದ್ದ ಕಿರುತೆರೆ ನಟ ಜಗನ್ನಾಥ್ ಹಾಗೂ ನಟಿ ಅನುಪಮಾ ಗೌಡ ರವರ ಪ್ರೀತಿ ಈಗ ಮುರಿದು ಬಿದ್ದಿದೆ, ನಿಜ. ಎರಡು ವರ್ಷಗಳ ಹಿಂದೆ ಬ್ರೇಕಪ್ ಆಗಿದ್ದ ಅನುಪಮಾ ಗೌಡ ಹಾಗೂ ಜಗನ್ನಾಥ್ ಈಗ 'ಬಿಗ್ ಬಾಸ್' ಮನೆ ಸೇರಿದ್ದಾರೆ.

ಮಾಜಿ ಪ್ರೇಯಸಿ ಅನುಪಮಾ ಗೌಡ ಎದುರಿಗೆ ಓಡಾಡುತ್ತಿದ್ದರೂ, ''ಸಂಬಂಧವೇ ಇಲ್ಲ'' ಎಂಬಂತೆ ಕೃಷಿ ತಾಪಂಡ, ಆಶಿತಾ ಚಂದ್ರಪ್ಪ ಜೊತೆ ಹಾಯಾಗಿದ್ದಾರೆ ಮಿಸ್ಟರ್ ಜಗನ್ನಾಥ್.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಇನ್ನೂ, ''ಜಗನ್ನಾಥ್ ಪತ್ನಿಯಾಗಬೇಕು'' ಎಂದು ಆಸೆ ಪಟ್ಟಿದ್ದ ಅನುಪಮಾ ಗೌಡ ಮಾತ್ರ ಆಗಾಗ ಹಳೆಯದನ್ನೆಲ್ಲ ನೆನಪಿಸಿಕೊಂಡು ಕಣ್ಣೀರಿಡುತ್ತಿರುತ್ತಾರೆ. ಪರಿಸ್ಥಿತಿ ಹೀಗಿರುವಾಗಲೇ, ಇದಕ್ಕಿದ್ದಂತೆ ಮಾಜಿ ಪ್ರೇಯಸಿ ಅನುಪಮಾ ಬಳಿ ತೆರಳಿ, ಆಕೆಯನ್ನ ತಬ್ಬಿಕೊಂಡು, ಮುತ್ತು ಕೊಟ್ಟಿದ್ದಾರೆ ಜಗನ್ನಾಥ್.! ಮುಂದೆ ಓದಿರಿ....

ಹಳೆಯ ಜೋಡಿ ಒಂದಾಯ್ತು ಅಂತಲ್ಲ.!

ಅನುಪಮಾ ಗೌಡ ರನ್ನ ತಬ್ಬಿಕೊಂಡು, ಜಗನ್ನಾಥ್ ಮುತ್ತು ಕೊಟ್ಟರು ಎಂದ ಮಾತ್ರಕ್ಕೆ ಮಾಜಿ ಪ್ರೇಮಿಗಳು ಒಂದಾದರು ಎಂದು ಭಾವಿಸಬೇಡಿ. ಮಿಸ್ಟರ್ ಜಗನ್ನಾಥ್ ತಮ್ಮ ತಾಕತ್ತನ್ನು ಪ್ರದರ್ಶಿಸಲು ಹೀಗೆ ಮಾಡಿದರು ಅಷ್ಟೇ.

ಟ್ರೂತ್/ಡೇರ್ ಆಟ ಆಡುತ್ತಿದ್ದ ಜಗನ್ನಾಥ್

ನಟ ಜಗನ್ನಾಥ್, ನಟಿ ಆಶಿತಾ ಚಂದ್ರಪ್ಪ ಹಾಗೂ ಕೃಷಿ ತಾಪಂಡ 'ಟ್ರೂತ್/ಡೇರ್' ಆಟ ಆಡುತ್ತಿದ್ದರು. ಜಗನ್ನಾಥ್ ಸರದಿ ಬಂದಾಗ, ನಟಿ ಕೃಷಿ ತಾಪಂಡ ಒಂದು ಡೇರ್ ಕೊಟ್ಟರು ಅರ್ಥಾತ್ 'ತಾಕತ್ತು ಪ್ರದರ್ಶನ' ಮಾಡಲು ಸೂಚಿಸಿದರು.

ಕೃಷಿ ತಾಪಂಡ ಕೊಟ್ಟ ಡೇರ್ ಏನು.?

''ಅನುಪಮಾ ಬಳಿ ಹೋಗಿ ತಬ್ಬಿಕೊಂಡು, ಹಣೆ ಮೇಲೆ ಮುತ್ತು ಕೊಟ್ಟು ಬರಬೇಕು'' ಎಂಬ ಡೇರ್ ನ ಜಗನ್ನಾಥ್ ಗೆ ಕೃಷಿ ತಾಪಂಡ ನೀಡಿದರು.

ಹಣೆ ಮೇಲೆ ಮುತ್ತು ಯಾಕೆ.?

''ಹಣೆ ಮೇಲೆ ಮುತ್ತು ಕೊಟ್ಟರೆ ತುಂಬಾ ಭಾವನಾತ್ಮಕ ಅನ್ಸುತ್ತೆ'' - ಹೀಗಾಗಿ ಹಣೆ ಮೇಲೆ ಮುತ್ತು ಕೊಡಲು ಜಗನ್ನಾಥ್ ಗೆ ಆಶಿತಾ ಹಾಗೂ ಕೃಷಿ ತಾಪಂಡ ಸೂಚಿಸಿದರು.

ಅನುಪಮಾ ರನ್ನ ತಬ್ಬಿಕೊಂಡು ಮುತ್ತಿಟ್ಟ ಜಗನ್

ತಾಕತ್ತು ಪ್ರದರ್ಶಿಸಲು ಸಿದ್ಧಗೊಂಡ ಜಗನ್ನಾಥ್, ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಅನುಪಮಾ ಗೌಡ ಬಳಿ ತೆರಳಿ, ಆಕೆಯನ್ನ ತಬ್ಬಿಕೊಂಡು ಹಣೆ ಮೇಲೆ ಮುತ್ತಿಟ್ಟರು.

ಅನುಪಮಾಗೆ ಸತ್ಯ ಗೊತ್ತಾಯ್ತು.!

ಇದಕ್ಕಿದ್ದಂತೆ ಜಗನ್ ಬಂದು ತಬ್ಬಿಕೊಂಡು, ಮುತ್ತಿಟ್ಟ ಕಾರಣ ಇದು 'ಟ್ರೂತ್/ಡೇರ್' ಆಟ ಎಂಬ ಸತ್ಯ ಅನುಪಮಾ ಗೌಡಗೆ ಗೊತ್ತಾಯ್ತು.

ಫ್ಲ್ಯಾಶ್ ಬ್ಯಾಕ್ ಗೆ ಹೋಗಲಿಲ್ಲ

ಆಟವನ್ನ ಆಟದ ರೀತಿ ಪರಿಗಣಿಸಿದ ಅನುಪಮಾ ಗೌಡ ಕಿರಿಕಿರಿಗೊಳ್ಳಲಿಲ್ಲ. ಜಗನ್ನಾಥ್ ಕೂಡ ಫ್ಲ್ಯಾಶ್ ಬ್ಯಾಕ್ ಗೆ ಹೋಗಲಿಲ್ಲ.

English summary
Bigg Boss Kannada 5: Week 4: Jaganath hugs and kisses Anupama Gowda. ಮಾಜಿ ಪ್ರೇಯಸಿ ಅನುಪಮಾ ಬಳಿ ತೆರಳಿ, ಆಕೆಯನ್ನ ತಬ್ಬಿಕೊಂಡು, ಮುತ್ತು ಕೊಟ್ಟಿದ್ದಾರೆ ಜಗನ್ನಾಥ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X