»   » ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

Posted By:
Subscribe to Filmibeat Kannada
Bigg Boss Kannada Season 5 : ತಾಳ್ಮೆ ಕಳೆದುಕೊಂಡು ಎಲ್ಲರ ಮೇಲೆ ಕೂಗಾಡಿದ ಜಗನ್ | Filmibeat Kannada

''ಐ ಡೋಂಟ್ ಲೈಕ್ ಎನಿಬಡಿ ಶೌಟಿಂಗ್ ಅಟ್ ಮಿ (ಬೇರೆಯವರು ನನ್ನ ಮೇಲೆ ಕೂಗಾಡುವುದು ನನಗೆ ಇಷ್ಟ ಆಗಲ್ಲ)'' ಅಂತ ಕೂಗಾಡುತ್ತಲೇ ಸಿಹಿ ಕಹಿ ಚಂದ್ರುಗೆ ಹೇಳುವ ಮಿಸ್ಟರ್ ಜಗನ್ನಾಥ್ ಚಂದ್ರಶೇಖರ್ 'ಬಿಗ್ ಬಾಸ್' ಮನೆಯಲ್ಲಿ ಇನ್ನೊಬ್ಬರ ಮೇಲೆ ಕೂಗಾಡದೆ, ರೇಗಾಡದೆ ಕಳೆದ ದಿನವೇ ಇಲ್ಲ.!!

ತಾವು ಮಾಡುವುದೇ ಸರಿ, ತಾವು ಹೇಳುವುದೇ ಸರಿ ಎಂಬ ಧೋರಣೆ ಹೊಂದಿರುವ ಜಗನ್ನಾಥ್ ಚಂದ್ರಶೇಖರ್ ಗೆ ಇನ್ನೊಬ್ಬರು ಆಡುವ ಮಾತುಗಳನ್ನ ಸಂಪೂರ್ಣವಾಗಿ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲ.

ಮಾತೆತ್ತಿದರೆ, ಪಿತ್ತ ನೆತ್ತಿಗೇರಿಸಿಕೊಳ್ಳುವ ಜಗನ್ನಾಥ್ ಚಂದ್ರಶೇಖರ್ ಸುಖಾ ಸುಮ್ಮನೆ ಟೆಂಪರ್ ರೇಸ್ ಮಾಡಿಕೊಂಡು ಘೋರ ಸಮರಕ್ಕೆ ನಾಂದಿ ಹಾಡುತ್ತಾರೆ. ಈ ವಾರದ 'ಜ್ಯೂಸ್ ಬೇಕು' ಹಾಗೂ 'ತಾಂಬೂಲ ಬೇಕು' ಟಾಸ್ಕ್ ನಲ್ಲೂ ಜಗನ್ ಮಾಡಿದ್ದು ಇದನ್ನೇ.! ಮುಂದೆ ಓದಿರಿ....

'ಬಿಗ್ ಬಾಸ್' ಕೊಟ್ಟ ಟಾಸ್ಕ್ ಏನು.?

'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಈ ವಾರ ಚಾಲ್ತಿಯಲ್ಲಿದೆ. ಇದೇ ಟಾಸ್ಕ್ ನಲ್ಲಿ 'ಜ್ಯೂಸ್ ಬೇಕು' ಮೊದಲ ಹಂತದ ಸವಾಲು ಆಗಿದ್ದರೆ, 'ತಾಂಬೂಲ ಬೇಕು' ಎರಡನೇ ಹಂತದ ಸವಾಲು.

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

ಆಟದ ನಿಯಮಗಳು ಏನು.?

'ಜ್ಯೂಸ್ ಬೇಕು' ಸವಾಲಿನಲ್ಲಿ ಉಭಯ ತಂಡಗಳು ಜ್ಯೂಸ್ ಸಿದ್ಧಪಡಿಸಬೇಕಿತ್ತು. ಬಳಿಕ ತಂಡದ ಕ್ಯಾಪ್ಟನ್, ಎದುರಾಳಿ ತಂಡದ ಜ್ಯೂಸ್ ಕ್ವಾಲಿಟಿ ಚೆಕ್ ಮಾಡಬೇಕಿತ್ತು. ನಂತರ ತಂಡಗಳು ತಯಾರಿಸಿದ ಜ್ಯೂಸ್ ನ ಎದುರಾಳಿ ತಂಡದ ಮೂವರು, ಐದು ನಿಮಿಷದ ಒಳಗೆ ಕುಡಿದರೆ, ಕುಡಿದಷ್ಟು ಜ್ಯೂಸ್ ನ ಹಣವನ್ನು ಪಡೆಯುತ್ತಾರೆ. ಸಂಪೂರ್ಣವಾಗಿ ಕುಡಿಯದ ಜ್ಯೂಸ್ ನ ಪರಿಗಣಿಸುವಂತಿಲ್ಲ ಎಂಬ ನಿಯಮವನ್ನ 'ಬಿಗ್ ಬಾಸ್' ನೀಡಿದ್ದರು. ಇನ್ನೂ, 'ತಾಂಬೂಲ ಬೇಕು ಸವಾಲಿನಲ್ಲಿ ಉಭಯ ತಂಡಗಳು ತಾಂಬೂಲ ಸಿದ್ಧಪಡಿಸಬೇಕಿತ್ತು.

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಸಮೀರಾಚಾರ್ಯ ಶರ್ಟ್ ಎಳೆದ ಜಗನ್

ಜಗನ್ನಾಥ್ ತಂಡ ತೆಗೆದುಕೊಂಡು ಬಂದಿದ್ದ ಕಬ್ಬನ್ನ ಎತ್ತಿಕೊಂಡು ಸಮೀರಾಚಾರ್ಯ ಹೋಗುತ್ತಿರುವಾಗ, ಸಮೀರಾಚಾರ್ಯ ಶರ್ಟ್ ನ ಹಿಡಿದು ಎಳೆದು ಹರಿದುಬಿಟ್ಟರು ಜಗನ್.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಸಬೂಬು ನೀಡಿದ ಜಗನ್

ಶರ್ಟ್ ನ ಹರಿದು ಹಾಕಿದ್ದಕ್ಕೆ, ಸಮೀರಾಚಾರ್ಯ ಕೋಪಗೊಂಡರು. ''ಶರ್ಟ್ ಹರಿಯುವ ಹಾಗಿಲ್ಲ'' ಎಂದು ಸಮೀರಾಚಾರ್ಯ ಹೇಳಲು ಹೋದರೆ ''ನಾನು ತಡೆಯುತ್ತಿದ್ದೇನೆ'' ಅಂತ ಏರುದನಿಯಲ್ಲಿ ಜಗನ್ ಸಬೂಬು ನೀಡಿದರು. ''ತಡೆಯುವುದು ಬೇರೆ, ಶರ್ಟ್ ಹರಿಯುವ ಹಾಗಿಲ್ಲ'' ಅಂತ ಸಮೀರಾಚಾರ್ಯ ಹೇಳಿದರೆ, ''ಯಾರಿಗೆ ಹೇಳ್ತಾಯಿದ್ದೀಯಾ ನೀನು'' ಅಂತ ಏಕವಚನದಲ್ಲಿ ಜಗನ್ ಕೂಗಾಡಿದರು. ಜೊತೆಗೆ ''ನಾನು ತಡೆಯುತ್ತಿದ್ದೆ, ಹೋಗಿ ಹೋಗಿ ಅಂತ ಹೇಳುತ್ತಿದೆ'' ಅಂತ ಶರ್ಟ್ ಹರಿದಿದ್ದಕ್ಕೆ ಜಗನ್ ಕುಂಟು ನೆಪ ನೀಡಿದರು. ಆದರೆ, ''ನೀವು ನನ್ನನ್ನ ತಡೆಯಲಿಲ್ಲ'' ಅಂತ ಸಮೀರಾಚಾರ್ಯ ವಾದ ಮಾಡಿದರು.

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

ತಾಂಬೂಲ ಬೇಕು ಟಾಸ್ಕ್ ನಲ್ಲಿ....

ತೆಂಗಿನಕಾಯಿ ಹಿಡಿಯುವ ಆತುರದಲ್ಲಿ ಜಾರು ಬಂಡೆ ಮಾದರಿಯ ನೆಟ್ ಮೇಲೆ ಆಗಾಗ ಸಮೀರಾಚಾರ್ಯ ಬೀಳುತ್ತಿದ್ದರು. ತೆಂಗಿನಕಾಯಿ ಹಿಡಿಯುವುದರಲ್ಲಿ ಸಮೀರಾಚಾರ್ಯ ಆಕ್ರಮಣಕಾರಿ ಆದರು. ನೆಟ್ ಮೇಲೆ ಕಾಲು ಇಡುವ ಹಾಗಿಲ್ಲ ಅಂತ ರಿಯಾಝ್ ಹೇಳುತ್ತಿದ್ದರೂ, ಅದನ್ನ ಸಮೀರಾಚಾರ್ಯ ಕೇಳಲಿಲ್ಲ.

ಕೌಂಟರ್ ಕೊಡಲು ಶುರು ಮಾಡಿದ ಜಗನ್

ಸಮೀರಾಚಾರ್ಯ ಕಾಲು ಇಟ್ಟಿದ್ದಕ್ಕೆ, ಜಗನ್ ಜಾರು ಬಂಡೆಯನ್ನು ಅಲುಗಾಡಿಸಲು ಶುರು ಮಾಡಿದರು. ಚಂದನ್ ಶೆಟ್ಟಿ ಹಾಗೂ ದಿವಾಕರ್ ಕೂಡ ನೆಟ್ ಒಳಗೆ ಕಾಲಿಟ್ಟರು, ಬಿದ್ದರು. ಹೀಗಾಗಿ, ''ಎಲ್ಲವೂ ನಿಮ್ಮಿಂದಲೇ ಶುರು ಆಗಿದ್ದು'' ಅಂತ ಸಮೀರಾಚಾರ್ಯ ಕಡೆ ರಿಯಾಝ್ ಬೆಟ್ಟು ಮಾಡಿ ತೋರಿಸಿದರು. ಜೊತೆಗೆ ಡಿಸ್ ಕ್ವಾಲಿಫೈ ಮಾಡುವುದಾಗಿ ತಿಳಿಸಿದರು. ಆಗ, ಜಗನ್ ಮಾಡಿದ್ದು ಕೂಡ ತಪ್ಪು ಅಂತ ಸಮೀರಾಚಾರ್ಯ ದನಿ ಎತ್ತಿದಾಗ...

ಯಾವುದು ಸುಳ್ಳು, ಯಾವುದು ಸತ್ಯ.?

ನೆಟ್ ಇದ್ದ ಜಾರು ಬಂಡೆಯನ್ನ ಜಗನ್ ಅಲುಗಾಡಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಮೀರಾಚಾರ್ಯ ದನಿ ಎತ್ತಿದಾಗ... ರಿಯಾಝ್ ಪ್ರಶ್ನಿಸಿದಾಗ... ''ಗಾನ್ ಮ್ಯಾಡ್. (ಹುಚ್ಚು ಹಿಡಿದಿದ್ಯಾ) ಸುಳ್ಳು ಹೇಳಬೇಡಿ ನನಗೆ'' ಎಂದರು ಜಗನ್ನಾಥ್.

ಹಳೇ ಬಾಯ್ ಫ್ರೆಂಡ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಅನುಪಮಾ ಗೌಡ.!

ತಿರುಗೇಟು ನೀಡಿದ ಸಮೀರಾಚಾರ್ಯ

''ಹೀ ಹ್ಯಾಸ್ ನಾಟ್ ಗಾನ್ ಮ್ಯಾಡ್ (ಅವರಿಗೆ ಹುಚ್ಚು ಹಿಡಿದಿಲ್ಲ) ಹೀ ಈಸ್ ಸೇಯಿಂಗ್ ದಿ ಟ್ರೂತ್ (ಅವರು ಸತ್ಯ ಹೇಳುತ್ತಿದ್ದಾರೆ) ಅಂತ ಸಮೀರಾಚಾರ್ಯ ತಿರುಗೇಟು ನೀಡಿದರು.

ಆಗ ರಿಯಾಝ್ ಹೇಳಿದಿಷ್ಟು.!

''ಮೊದಲನೇಯದಾಗಿ, ಯಾರೂ ಇಂಗ್ಲೀಷ್ ನಲ್ಲಿ ಮಾತನಾಡಬೇಡಿ. ಎಲ್ಲರೂ ಕನ್ನಡದಲ್ಲಿ ಮಾತನಾಡಿ. ಇಬ್ಬರಿಗೂ ಹೇಳುತ್ತಿದ್ದೇನೆ'' ಅಂತ ರಿಯಾಝ್ ಹೇಳುವಷ್ಟರಲ್ಲಿ ಜಗನ್ ಕುಪಿತಗೊಂಡರು.

ರಿಯಝ್ - ಜಗನ್ ನಡುವಿನ ಸಂಭಾಷಣೆ

ಜಗನ್ನಾಥ್ - ''ನೀನು ಮಾತನಾಡಬೇಡ ಅಂತ ನನಗೆ ಹೇಳಬೇಡಿ''

ರಿಯಾಝ್ - ''ನೀನು ಅಂತ ಮಾತನಾಡಿಲ್ಲ ನಾನು. ಮಾತನಾಡಬೇಡಿ ಅಂತ ಮರ್ಯಾದೆ ಕೊಟ್ಟು ಹೇಳಿದೆ''

ಜಗನ್ನಾಥ್ - ''ಮರ್ಯಾದೆ ಕೊಡದೆ ಹೋದರೆ ನಾನು ಕೂಡ ವಾಪಸ್ ಕೊಡಬಹುದು ಅಲ್ವಾ.?''

ರಿಯಾಝ್ - ''ನಾನು ಮಾತನಾಡಬಾರದು ಅಂತ ನೀವು ಹೇಳೋಕೆ ಹೇಗೆ ಸಾಧ್ಯ.?''

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.?

ರಿಯಾಝ್ - ''ಸಮಾಧಾನ ಮಾಡಿಕೊಳ್ಳಿ ಅಂತ ಇಬ್ಬರಿಗೂ ಹೇಳುತ್ತಿದ್ದೇನೆ. ಅದರಲ್ಲಿ ಏನು ತಪ್ಪು.?''

ಜಗನ್ನಾಥ್ - ''ಬಾಸ್, ಮಾತನಾಡಬಾರದು ಅಂತ ನನಗೆ ನೀವು ಅದ್ಹೇಗೆ ಹೇಳ್ತೀರಾ.? ನೀವ್ಯಾರು ಹೇಳೋಕೆ ಅದನ್ನ.? ಮಾತನಾಡಬೇಡಿ ಅಂತ ಹೇಳುವ ಹಕ್ಕು ನಿಮಗಿಲ್ಲ''

ಜೆಕೆಗೆ ಸಿಟ್ಟು ಬಂತು

ರಿಯಾಝ್ ಹಾಗೂ ಜಗನ್ ನಡುವೆ ವಾಕ್ಸಮರ ನಡೆಯುವಾಗ ''ಟಾಸ್ಕ್ ಆದ್ಮೇಲೆ ಮಾತನಾಡೋಣ'' ಅಂತ ಜೆ.ಕೆ ಕೂಗಾಡಿದ ಮೇಲೆ ಎಲ್ಲರೂ ಟಾಸ್ಕ್ ನಲ್ಲಿ ತಲ್ಲೀನರಾದರು.

ಸರಿಯಾಗಿ ಕೇಳಿಸಿಕೊಳ್ಳದ ಜಗನ್

''ಇಂಗ್ಲೀಷ್ ನಲ್ಲಿ ಮಾತನಾಡಬೇಡಿ'' ಅಂತ ರಿಯಾಝ್ ಹೇಳಿದ್ದನ್ನ ಸರಿಯಾಗಿ ಕೇಳಿಸಿಕೊಳ್ಳದೆ ''ಮಾತನಾಡಲೇಬಾರದು ಅಂತ ಹೇಳುವ ಹಕ್ಕಿಲ್ಲ'' ಎಂದು ಹೇಳಿ ಜಗನ್ ರಂಪ ಮಾಡಿದರು.

ಆತುರದ ನಿರ್ಧಾರ

ಇನ್ನೂ 'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಲೋಟಗಳ ಬಗ್ಗೆ ರಿಯಾಝ್ ನಿರ್ಣಯಕ್ಕೆ ಬರುವ ಮುನ್ನವೇ ಎಲ್ಲ ಲೋಟಗಳನ್ನು ಡಿಸ್ ಅಪ್ರೂವ್ ಮಾಡಿ ರಾದ್ಧಾಂತಕ್ಕೆ ಜಗನ್ ಕಾರಣವಾದರು.

ಜಗನ್ ಬಗ್ಗೆ ವೀಕ್ಷಕರು ಬೇಸರ.!

ಬರೀ ಕೂಗಾಡುವ, ರೇಗಾಡುವ ಜಗನ್ ವರ್ತನೆ ವೀಕ್ಷಕರಿಗೂ ಕಿರಿಕಿರಿ ತಂದಿದೆ. 'ಬಿಗ್ ಬಾಸ್' ಮನೆಯಿಂದ ಈ ವಾರ ಜಗನ್ ಔಟ್ ಆಗಲೇಬೇಕು ಅಂತ ವೀಕ್ಷಕರು ಪಟ್ಟು ಹಿಡಿದಿದ್ದಾರೆ.

English summary
Bigg Boss Kannada 5: Week 4: Jaganath Chandrashekar loses patience

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X