»   » ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ನಿವೇದಿತಾ ಗೌಡ ಬಳಿ ಒರಟಾಗಿ ಮಾತಾಡಿದ ಜಗನ್ | Filmibeat Kannada

ಯಾವುದೇ ವಿವಾದಗಳಿಗೆ ಸಿಲುಕದೆ, ಯಾರೊಂದಿಗೂ ಜಗಳ ಮಾಡಿಕೊಳ್ಳದೆ, ತಾನಾಯ್ತು, ತನ್ನ ಕೆಲಸ ಆಯ್ತು ಅಂತ ತನ್ನ ಪಾಡಿಗೆ ತಾನಿರುವ ನಿವೇದಿತಾ ಗೌಡ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಅದಕ್ಕೆ ಕಾರಣ ಜಗನ್ನಾಥ್.

'ದೊಡ್ಮನೆ'ಯಲ್ಲಿ 'ಟ್ರೂತ್/ಡೇರ್' ಆಟ ಆಡುತ್ತಿದ್ದ ಜಗನ್ನಾಥ್, ನಿವೇದಿತಾ ಗೌಡ ಬಗ್ಗೆ ತಮಗೆ ಅನಿಸಿದನ್ನ ನೇರವಾಗಿ ಹೇಳಿ ಆಕೆಯ ಮನಸ್ಸಿಗೆ ನೋವುಂಟು ಮಾಡಿದ್ದಾರೆ.

ಜಗನ್ನಾಥ್ ರವರ ಒರಟು ಸ್ವಭಾವದಿಂದಾಗಿ ನಿವೇದಿತಾ ಗೌಡ ಗೊಳೋ ಎಂದು ಅತ್ತು ಬಿಟ್ಟಿದ್ದಾರೆ. ಅಷ್ಟಕ್ಕೂ, ಆಗಿದ್ದೇನು ಎಂಬ ಸಂಪೂರ್ಣ ವಿವರ ಇಲ್ಲಿದೆ ಓದಿರಿ....

'ಟ್ರೂತ್/ಡೇರ್' ಆಟ ಆಡುತ್ತಿದ್ದ ಜಗನ್ನಾಥ್

ನಟ ಜಗನ್ನಾಥ್, ನಟಿ ಆಶಿತಾ ಚಂದ್ರಪ್ಪ, ಕೃಷಿ ತಾಪಂಡ, ಅನುಪಮಾ ಗೌಡ 'ಟ್ರೂತ್/ಡೇರ್' ಆಟ ಆಡುತ್ತಿದ್ದರು. ಜಗನ್ನಾಥ್ ಸರದಿ ಬಂದಾಗ, ನಟಿ ಆಶಿತಾ ಒಂದು ಡೇರ್ ಕೊಟ್ಟರು ಅರ್ಥಾತ್ ತಮ್ಮ 'ತಾಕತ್ತು ಪ್ರದರ್ಶನ' ಮಾಡಲು ಸೂಚಿಸಿದರು.

ಓಹೋ.! ಮಾಜಿ ಪ್ರೇಯಸಿ ಅನುಪಮಾ ರನ್ನ ತಬ್ಬಿಕೊಂಡು, ಮುತ್ತು ಕೊಟ್ಟ ಜಗನ್ನಾಥ್.!

ಆಶಿತಾ ಕೊಟ್ಟ ಡೇರ್ ಏನು.?

''ಊಟಕ್ಕೆ ನಿವೇದಿತಾ ಬಂದು ಕರೆದಾಗ, ಆಕೆಯ ಬಗ್ಗೆ ಆಗ ಜಗನ್ ಗೆ ಮೂಡಿದ ಅನಿಸಿಕೆಯನ್ನ ನಿವೇದಿತಾ ಗೌಡ ಹತ್ತಿರ ಹೋಗಿ ನೇರವಾಗಿ ಹೇಳಬೇಕು'' ಎಂಬ ಡೇರ್ ನ ಜಗನ್ನಾಥ್ ಗೆ ಆಶಿತಾ ನೀಡಿದರು.

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

ನಿವೇದಿತಾ ಬಳಿ ಹೋಗಿ ಜಗನ್ ಹೇಳಿದ್ದೇನು.?

ಕೊಟ್ಟ ಡೇರ್ ನ ಸ್ವೀಕರಿಸಿ, ನಿವೇದಿತಾ ಬಳಿ ಹೋದ ಜಗನ್, ''ನೀನು ಆಗಲೇ ಬಂದು ಊಟಕ್ಕೆ ಕರೆದಾಗ, ಆಗ ನನಗೆ ತುಂಬಾ ಕಿರಿಕಿರಿ ಆಯ್ತು. ಯಾಕಂದ್ರೆ, ನಾವೇನೋ ಮುಖ್ಯವಾದ ವಿಷಯ ಮಾತನಾಡುತ್ತಿದ್ವಿ. ನೀನು ಇನ್ನೊಂದು ಬಾರಿ ಬಂದು ಕರೆದೆ. ಆ ಟೈಮ್ ನಲ್ಲಿ ನನಗೆ ಕಿರಿಕಿರಿ ಆಗಿ ನಿನ್ನನ್ನ ನೀರಿಗೆ ಎತ್ತಿ ಹಾಕೋಣ, ಬಿಲ್ಡಿಂಗ್ ನಿಂದ ಹೊರಗೆ ಹಾಕಿ ಬಿಡೋಣ ಅಂತ ಅನಿಸ್ತು. ಆದ್ರೆ, ಸುಮ್ನೆ ಆದೆ'' ಎಂದರು.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಬೇಸರಗೊಂಡ ನಿವೇದಿತಾ

ಜಗನ್ ಆಡಿದ ಮಾತುಗಳನ್ನು ಕೇಳಿ ಬೇಸರಗೊಂಡ ನಿವೇದಿತಾ ಕಣ್ಣೀರು ಸುರಿಸಲು ಆರಂಭಿಸಿದರು.

ಜಗನ್ ಬಗ್ಗೆ ನಿವೇದಿತಾ ಹೇಳಿದ್ದೇನು.?

''ನನ್ನ ಜೊತೆ ತುಂಬಾ ರೂಡ್ ಆಗಿ ಮಾತನಾಡುತ್ತಾರೆ. ನನಗೆ ಅದೆಲ್ಲ ಇಷ್ಟ ಆಗಲ್ಲ. ನನಗೆ ನಿನ್ನೆಯಿಂದ ತುಂಬಾ ಕಿರಿಕಿರಿ ಆಗುತ್ತಿದೆ. ನನ್ನ ಪಾಡಿಗೆ ನಾನು ಇದ್ದರೂ, ತಪ್ಪು'' ಎಂದು ಜಗನ್ ಬಗ್ಗೆ ನಿವೇದಿತಾ ಗೌಡ ಕಾಮೆಂಟ್ ಮಾಡಿದರು.

ಸ್ಟುಪಿಡ್ ಸ್ಟೇಟ್ಮೆಂಟ್

''ಟ್ರೂತ್/ಡೇರ್' ಗೇಮ್ ಆಡುತ್ತಿದ್ದರೂ, ಈ ಮಾತು ಸುಮ್ಮನೆ ಬರಲ್ಲ. ನಾನ್ಸೆನ್ಸ್. ಸ್ಟುಪಿಡ್ ಸ್ಟೇಟ್ ಮೆಂಟ್'' ಎನ್ನುತ್ತಿದ್ದರು ನಿವೇದಿತಾ ಗೌಡ.

ಇದು ಅಡುಗೆ ಮನೆ ಮ್ಯಾಟರ್

''ಇನ್ಮೇಲೆ ನಾನು ಯಾರನ್ನೂ ಕರೆಯಲ್ಲ. ಒಮ್ಮೆ ಕರೆಯುತ್ತೇನೆ. ಬೇಕಿದ್ರೆ, ಬಂದು ತಿನ್ನಲಿ ಇಲ್ಲ ಅಂದ್ರೆ ಬಿಡಲಿ. ಅವರಿಗೆ ನೀವು ಅಡುಗೆ ಮನೆ ವಹಿಸಿಕೊಂಡಿರುವುದು ಇಷ್ಟ ಇಲ್ಲ. ಆ ಕೋಪನ ನನ್ನ ಮೇಲೆ ತೋರಿಸುತ್ತಿದ್ದಾರೆ. ಇದು ತಪ್ಪು'' ಎಂದು ಚಂದನ್ ಶೆಟ್ಟಿ, ಜಯಶ್ರೀನಿವಾಸನ್, ರಿಯಾಝ್, ಸಮೀರಾಚಾರ್ಯ ಮುಂದೆ ನಿವೇದಿತಾ ಗೌಡ ಹೇಳುತ್ತಿದ್ದರು.

English summary
Bigg Boss Kannada 5: Week 4: Jaganath speaks harshly to Niveditha Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X