»   » ಈ ವಾರ ಜಯರಾಂ ಕಾರ್ತಿಕ್ ಔಟ್: ಐದು ಲಕ್ಷ ರೂಪಾಯಿ ಬೆಟ್ಟಿಂಗ್.!

ಈ ವಾರ ಜಯರಾಂ ಕಾರ್ತಿಕ್ ಔಟ್: ಐದು ಲಕ್ಷ ರೂಪಾಯಿ ಬೆಟ್ಟಿಂಗ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ ಜಯರಾಂ ಕಾರ್ತಿಕ್ ಅಲಿಯಾಸ್ ಜೆ.ಕೆ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ವಿವಾದಗಳಿಗೆ, ಜಗಳಗಳಿಗೆ, ರಾದ್ಧಾಂತಗಳಿಗೆ ಮೂಗು ತೂರಿಸದೆ, ತಾವಾಯ್ತು, ತಮ್ಮ ಟಾಸ್ಕ್ ಆಯ್ತು ಅಂತ ಇರುವ ಜೆಕೆ ಕೆಲವರಿಗಂತೂ ಅಚ್ಚುಮೆಚ್ಚು.

ಸೈಲೆಂಟ್ ಆಗಿ ಸೇಫ್ ಗೇಮ್ ಆಡುತ್ತಿರುವ ಜೆಕೆ 'ಬಿಗ್ ಬಾಸ್' ಮನೆಯಲ್ಲಿ ಇರಬಾರದು ಅಂತ ಕೆಲ ವೀಕ್ಷಕರು ಅಭಿಪ್ರಾಯ ಪಟ್ಟಿರುವುದು ಕೂಡ ಸತ್ಯವೇ.

ಹೀಗಿರುವಾಗಲೇ, ಜೆಕೆ ಈ ವಾರ ನಾಮಿನೇಟ್ ಆಗಿದ್ದಾರೆ. ಜೆಕೆ ಜೊತೆಗೆ ನಿವೇದಿತಾ ಗೌಡ, ರಿಯಾಝ್, ಶ್ರುತಿ ಪ್ರಕಾಶ್, ಕೃಷಿ ತಾಪಂಡ ಹಾಗೂ ಅನುಪಮಾ ಗೌಡ ಕೂಡ ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ.

ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರನ್ನ ಹೊರಗೆ ಕರೆಯಲು 'ವೀಕ್ಷಕ ಮಹಾಪ್ರಭು' ನಿರ್ಧರಿಸುತ್ತಾರೋ, ಗೊತ್ತಿಲ್ಲ. ಆದ್ರೆ, ''ಈ ವಾರ ಹೊರ ಹೋಗುವುದು ನಾನೇ'' ಎಂದಿದ್ದಾರೆ ಜಯರಾಂ ಕಾರ್ತಿಕ್. ಸಾಲದಕ್ಕೆ ಐದು ಲಕ್ಷ ಬೆಟ್ಟಿಂಗ್ ಕೂಡ ಕಟ್ಟಿದ್ದಾರೆ. ಮುಂದೆ ಓದಿರಿ...

ಎಲ್ಲವೂ ವೀಕ್ಷಕರ ಇಚ್ಛೆ

ಯಾರಿಗೆ ವೀಕ್ಷಕರ ಬೆಂಬಲ ಕಮ್ಮಿ ಇರುತ್ತೋ, ಅವರಿಗೆ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಲಭಿಸುತ್ತೆ. ಹಾಗ್ನೋಡಿದ್ರೆ, 'ಪ್ರಬಲ ಸ್ಪರ್ಧಿಗಳು' ಎಂದೇ ಗುರುತಿಸಿಕೊಂಡಿದ್ದ ದಯಾಳ್ ಪದ್ಮನಾಭನ್ ಹಾಗೂ ಸಿಹಿ ಕಹಿ ಚಂದ್ರುಗೆ ವೀಕ್ಷಕರ ಬೆಂಬಲ ಸಿಗದ ಕಾರಣ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಆರಂಭದಲ್ಲಿಯೇ ನಿರ್ಗಮಿಸಿದರು. ಹೀಗಾಗಿ ಈ ವಾರ ವೀಕ್ಷಕರ ಇಚ್ಛೆ ಏನಾಗಿರಬಹುದು ಎಂಬ ಕೌತುಕ ಸ್ಪರ್ಧಿಗಳಲ್ಲಿದೆ.

'ಬಿಗ್ ಬಾಸ್ ಕನ್ನಡ-5': ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?

ನಾನೇ ಔಟ್ ಆಗುವುದು.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಆರಂಭದಿಂದಲೂ ಎಲಿಮಿನೇಷನ್ ಪ್ರಕ್ರಿಯೆಯನ್ನ ಸೂಕ್ಷ್ಮವಾಗಿ ಗಮನಿಸುತ್ತ ಬಂದಿರುವ ಜೆಕೆ, ''ಈ ವಾರ ನಾನು ಔಟ್ ಆಗುತ್ತೇನೆ'' ಎಂದು ಭವಿಷ್ಯ ನುಡಿದಿದ್ದಾರೆ.

ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ.!

ಕೃಷಿ ಏನಂದರು.?

''ಗ್ರ್ಯಾಂಡ್ ಫಿನಾಲೆಯಲ್ಲಿ ರಿಯಾಝ್, ಚಂದನ್ ಶೆಟ್ಟಿ, ಅನುಪಮಾ, ಜೆಕೆ ಇರುತ್ತಾರೆ'' ಎಂಬುದು ಕೃಷಿ ಲೆಕ್ಕಾಚಾರ.

ಐದು ಲಕ್ಷ ಬೆಟ್ ಕಟ್ಟಿದ ಜೆಕೆ

''ಈ ವಾರ ನಾನು ಹೋಗುತ್ತೇನೆ'' ಎನ್ನುತ್ತಾ ಸಮೀರಾಚಾರ್ಯ ಜೊತೆ ಐದು ಲಕ್ಷ ಬೆಟ್ ಕಟ್ಟಿದ್ದಾರೆ ಜಯರಾಂ ಕಾರ್ತಿಕ್.

ಸಮೀರಾಚಾರ್ಯಗೆ ನಂಬಿಕೆ ಇದೆ

ಯಾವುದೇ ಕಾರಣಕ್ಕೂ ಜೆಕೆ ಈ ವಾರ ಔಟ್ ಆಗಲ್ಲ ಎಂಬ ನಂಬಿಕೆ ಇರುವುದರಿಂದ ಸಮೀರಾಚಾರ್ಯ ಕೂಡ 'ಐದು ಲಕ್ಷ ಬೆಟ್ಟಿಂಗ್'ಗೆ ಜೈ ಎಂದಿದ್ದಾರೆ.

ಯಾರು ಗೆಲ್ಲುತ್ತಾರೋ.?

ಅಪ್ಪಿತಪ್ಪಿ ಜೆಕೆ ಔಟ್ ಆಗ್ಬಿಟ್ರೆ, ಸಮೀರಾಚಾರ್ಯ ಐದು ಲಕ್ಷ ರೂಪಾಯಿಯನ್ನ ಕೊಡಬೇಕು. ಜೆಕೆ ಸೇಫ್ ಆದ್ರೆ, ಸಮೀರಾಚಾರ್ಯ ಅವರಿಗೆ ಐದು ಲಕ್ಷ ಲಾಭ. ಇಬ್ಬರ ಈ ಬೆಟ್ಟಿಂಗ್ ನಲ್ಲಿ ಯಾರನ್ನ ಗೆಲ್ಲಿಸಬೇಕು ಎಂಬ ನಿರ್ಧಾರ ವೀಕ್ಷಕರ ಕೈಯಲ್ಲಿದೆ.

English summary
Bigg Boss Kannada 5: Week 12: Jayaram Karthik predicts Week 12 eviction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X