»   » 'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.!

'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಮನೆಯಿಂದ ಹೊರ ಬಂದಮೇಲೆ ಚಂದನ್ ಶೆಟ್ಟಿ ಮದುವೆಯಂತೆ

'ಮೂರೇ ಮೂರು ಪೆಗ್ ಗೆ...' ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋದ ಕೂಡಲೆ ಮದುವೆ ಆಗುತ್ತಾರಂತೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಚಂದನ್ ಶೆಟ್ಟಿ ಸಿದ್ದವಾಗಿದ್ದಾರಂತೆ.

ಹಾಗಂತ ನಾವು ಹೇಳ್ತಿಲ್ಲ. ಬದಲಾಗಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗುರೂಜಿ ಹೇಳಿದ್ದಾರೆ. ಅದು ಚಂದನ್ ಶೆಟ್ಟಿ ಪಕ್ಕದಲ್ಲಿ ಇರುವಾಗಲೇ.!

ಹೇಳಿ ಕೇಳಿ ಜಯಶ್ರೀನಿವಾಸನ್ ಹಾಗೂ ಅವರ 'ಸಂಖ್ಯೆ'ಗಳ ಬಗ್ಗೆ ಚಂದನ್ ಶೆಟ್ಟಿಗೆ ನಂಬಿಕೆ ಇದೆ. ಜಯಶ್ರೀನಿವಾಸನ್ ರವರ ಸಲಹೆಗಳನ್ನ ಚಾಚು ತಪ್ಪದೆ ಪಾಲಿಸಿ ಚಂದನ್ ಶೆಟ್ಟಿ ಖ್ಯಾತಿ ಗಳಿಸಿದ್ದಾರೆ. ಇದೀಗ ಅದೇ ಚಂದನ್ ಶೆಟ್ಟಿ ಮದುವೆಯ ಬಗ್ಗೆ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಯಲ್ಲಿ 'ಜಾಹೀರಾತು' ನೀಡಿದ್ದಾರೆ. ಇದೇನಪ್ಪಾ ಎಂದು ಕನ್ ಫ್ಯೂಸ್ ಆಗುವ ಮುನ್ನ ಪೂರ್ತಿ ಮ್ಯಾಟರ್ ಓದಿರಿ....

ಚಂದನ್ ಶೆಟ್ಟಿ ಎದೆಯಲ್ಲಿ ಗಿಟಾರ್ ಬಾರಿಸುತ್ತಿದೆ.!

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಕೂಡಲೆ ಚಂದನ್ ಶೆಟ್ಟಿ ಎದೆಯಲ್ಲಿ ಗಿಟಾರ್ ಬಾರಿಸಲು ಶುರುವಾಗಿದೆ. ಚಂದನ್ ಶೆಟ್ಟಿಗೆ ಲೈಟಾಗಿ ಲವ್ ಆಗಿರುವ ಹಾಗೆ ಕಾಣುತ್ತಿದೆ. ಯಂಗ್ ಅಂಡ್ ಸ್ಮಾರ್ಟ್ ಆಗಿ ಕಾಣುವ ಚಂದನ್ ಶೆಟ್ಟಿ ತಮ್ಮ ಎದುರಿಗೆ ಸಿಕ್ಕ ಕೂಡಲೆ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ 'ಮದುವೆಯ ಟಾಪಿಕ್' ತೆಗೆದು 'ಜಾಹೀರಾತು' ಕೊಡಲು ಆರಂಭಿಸಿದರು.

ಮದುವೆಗೆ ಸಿದ್ಧವಾಗಿರುವ ವರ.!

''ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ತಕ್ಷಣ ಮದುವೆ ಸಿದ್ಧವಾಗಿರುವ ವರ. ವರನ ಹೆಸರು ಚಂದನ್ ಶೆಟ್ಟಿ. ಸಕಲೇಶಪುರದ ಪ್ರಕೃತಿ ಮಡಿಲಿನಲ್ಲಿ ಹುಟ್ಟಿರುವ ಚಂದನ್ ಶೆಟ್ಟಿ, ಮಣ್ಣಿನ ಮಗ. ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿರುವ ಚಂದನ್ ಗೆ ಯಾವುದೇ ದುರಭ್ಯಾಸ ಇಲ್ಲ'' ಎನ್ನುತ್ತಾ ಚಂದನ್ ಶೆಟ್ಟಿ ಮದುವೆಯ ಬಗ್ಗೆ ಜಯಶ್ರೀನಿವಾಸನ್ ಜಾಹೀರಾತು ಕೊಡಲು ಶುರು ಮಾಡಿದರು.

ಜಯಶ್ರೀನಿವಾಸನ್ ಸಂಖ್ಯಾಶಾಸ್ತ್ರದ ಪ್ರಕಾರ

''ಹೆಂಡತಿ ಆಗುವವಳನ್ನ ಅಂಗೈಯಲ್ಲಿಟ್ಟು, ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿಕೊಳ್ಳುತ್ತಾರೆ. ಒಳ್ಳೆ ಹುಡುಗಿ 5, 14, 23ನೇ ತಾರೀಖು ಹುಟ್ಟಿರುವವರು 6, 15, 24ನೇ ತಾರೀಖು ಹುಟ್ಟಿರುವವರು, ಸ್ವಲ್ಪ ಸ್ಫುರದ್ರೂಪಿ ಆಗಿರುವವರು ಚಂದನ್ ಶೆಟ್ಟಿ ರನ್ನ ಮದುವೆ ಆಗಬಹುದು'' ಎಂದು ಲೆಕ್ಕಾಚಾರ ಮಾಡಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹೇಳಿದರು.

ತಂದೆ-ತಾಯಿ ಜೊತೆಯಲ್ಲಿ ಇರಬೇಕು

''ಇವರಿಗೆ ತಂದೆ-ತಾಯಿ, ತಮ್ಮ ಇದ್ದಾರೆ. ತಂದೆ-ತಾಯಿಯನ್ನ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಅನ್ನೋದು ಅವರ ಆಸೆ. ಇದಕ್ಕೆ ಒಪ್ಪುವ ಹುಡುಗಿಯರು ಮದುವೆ ಆಗಬಹುದು'' ಎಂದು ಜಯಶ್ರೀನಿವಾಸನ್ ಹೇಳಿದರು.

ಕೈಮುಗಿಯುತ್ತಿದ್ದರು ಚಂದನ್ ಶೆಟ್ಟಿ

ಜಯಶ್ರೀನಿವಾಸನ್ ಇಷ್ಟೆಲ್ಲ ಹೇಳುವಾಗ, ಪಕ್ಕದಲ್ಲೇ ಇದ್ದ ಚಂದನ್ ಶೆಟ್ಟಿ ಕೈಮುಗಿಯುತ್ತಾ ಕ್ಯಾಮರಾ ನೋಡುತ್ತಿದ್ದರು.

English summary
Bigg Boss Kannada 5: Week 3: Jayasreenivasan advertises for Chandan Shetty's marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X