»   » 'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಜೈ ಶ್ರೀನಿವಾಸನ್ ಪಂಚಿಂಗ್ ಡೈಲಾಗ್ಸ್ ಫುಲ್ ಜೋರು | Filmibeat Kannada

ನಿಜ ಹೇಳ್ಬೇಕಂದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಮ್ಮ ಮ್ಯಾನರಿಸಂ ಹಾಗೂ ಪಂಚಿಂಗ್ ಡೈಲಾಗ್ ಗಳಿಂದ ಮಸ್ತ್ ಮನರಂಜನೆ ನೀಡುತ್ತಿರುವವರು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.

ಸಣ್ಣ ಪುಟ್ಟ ವಿಷಯಕ್ಕೆ ಆಶಿತಾ ಚಂದ್ರಪ್ಪ ಹಾಗೂ ದಯಾಳ್ ಪದ್ಮನಾಭನ್ ಕೆಂಗಣ್ಣಿಗೆ ಗುರಿಯಾಗಿದ್ದ ಜಯಶ್ರೀನಿವಾಸನ್ ಇದೀಗ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಅನಿಸಿದ್ದನ್ನ ನೇರವಾಗಿ ಹೇಳುತ್ತಾರೆ.

ಯಾವ ಸ್ಯಾಂಡಲ್ ವುಡ್ ಹೀರೋಗೂ ಕಮ್ಮಿ ಇಲ್ಲ ಎನ್ನುವಂತೆ ಡಿಸೈನ್ ಡಿಸೈನ್ ಡೈಲಾಗ್ ಹೊಡೆಯುತ್ತಾರೆ... ರಜನಿಕಾಂತ್ ಸ್ಟೈಲ್ ನಲ್ಲಿ ನಗುತ್ತಾರೆ... ಕಳೆದ ಎರಡ್ಮೂರು ದಿನಗಳಲ್ಲಿ ಜಯಶ್ರೀನಿವಾಸನ್ ಬಾಯಿಂದ ಬಂದ ಪಂಚಿಂಗ್ ಡೈಲಾಗ್ ಗಳು ಇಲ್ಲಿವೆ...

'ಹೆಬ್ಬುಲಿ' ಬಂದಿದೆ... 'ಹೆಬ್ಬುಲಿ' ಬಂದಿದೆ...

ಹುಲಿ ಹುಲಿ ಹೆಬ್ಬುಲಿ...

ಹುಲಿ ಹುಲಿ ಹೆಬ್ಬುಲಿ...

ಜಯಶ್ರೀನಿವಾಸನ್ ಇಲ್ಲಿ...

ಸುಮ್ನೆ ಇರಿ ಅಲ್ಲಿ....

ಅಂತ 'ಹೆಬ್ಬುಲಿ' ಚಿತ್ರದ ಶೀರ್ಷಿಕೆ ಗೀತೆಯನ್ನ ತಮಗೆ ಬೇಕಾದ ಹಾಗೆ ರೀಮಿಕ್ಸ್ ಮಾಡಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಹಾಡುತ್ತಿರುತ್ತಾರೆ ಜಯಶ್ರೀನಿವಾಸನ್.

ಜನಾದೇಶ ನಂಬಿರುವ ಜಯಶ್ರೀನಿವಾಸನ್

ನೀವೆಲ್ಲ ಕೊಡೋದು ಬರೀ ಆದೇಶ..

ಅಲ್ಲಿದೆ ಜನಾದೇಶ..

ಈ ಜಯಶ್ರೀನಿವಾಸನ್ ಇಲ್ಲಿರೋದು ನಿಮ್ಮ ಆದೇಶ ನಂಬಿ ಅಲ್ಲ..

ಹೊರಗಿನ ಜನಾದೇಶ ನಂಬಿ..

ಜಯಶ್ರೀನಿವಾಸನ್ ಇಲ್ಲಿ..

ಸುಮ್ನೆ ಇರಿ ಅಲ್ಲಿ..

ಹುಲಿ ಹುಲಿ ಹೆಬ್ಬುಲಿ..

ಹುಲಿ ಹುಲಿ ಹೆಬ್ಬುಲಿ..

ಜಯಶ್ರೀನಿವಾಸನ್ ಇಲ್ಲಿ ..

ಸುಮ್ನೆ ಇರಿ ಅಲ್ಲಿ..

ಅಂತ 'ಬಿಗ್ ಬಾಸ್' ಮನೆಯಲ್ಲಿ 'ಭರ್ಜರಿ' ಡೈಲಾಗ್ ಹೊಡೆದಿದ್ದಾರೆ ಜಯಶ್ರೀನಿವಾಸನ್.

ಇನ್ಮೇಲೆ ಸುನಾಮಿನೇ.!

''ಗಾಳಿ ಬಿರುಗಾಳಿ ಎಲ್ಲ ಇನ್ಮೇಲೆ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಇನ್ಮೇಲೆ ಸುನಾಮಿನೇ.!''

''ಟ್ರೇನ್ ಮುಂದೆ ಯಾರೇ ಓಡಿದ್ರೂ, ಟ್ರೇನ್ ಪಕ್ಕದಲ್ಲಿ ಯಾರೇ ಓಡಿದ್ರೂ ಗೆಲ್ಲೋನು ನಾನೇ. ತುಳಿದು ಹಾಕೊಂಡು ಮುಂದೆ ಹೋಗ್ತಾಯಿರೋದೇ.!'' ಅಂತ ಘರ್ಜಿಸಿದ್ದಾರೆ ಜಯಶ್ರೀನಿವಾಸನ್.

ಓಪನ್ ಅಪ್ ಆದ ಜಯಶ್ರೀನಿವಾಸನ್

''ಇವತ್ತು ನವೆಂಬರ್ 1... ಎಲ್ಲರಿಗೂ ಶುಭವಾದ ದಿನ. ಇವತ್ತಿಂದ ನಿಮ್ಮ ಅಣ್ಣ, ನಿಮ್ಮ ಗುರುಗಳು ಓಪನ್ ಅಪ್ ಆಗಿದ್ದಾರೆ. ಇನ್ಯಾವುದಕ್ಕೂ ಸಹಿಸುವುದಿಲ್ಲ. ನಾನಿರುವ ಕಡೆ ಮೋಸ, ವಂಚನೆ ನಡೆಯಲು ಬಿಡಲ್ಲ. ಇನ್ಮೇಲೆ ನನ್ನ ಎರಡನೇ ಮುಖವನ್ನ ಮನೆಯಲ್ಲಿ ಇರೋರೆಲ್ಲ ನೋಡುತ್ತಾರೆ. ಇವರ ಹತ್ತಿರ ಇರೋದೆಲ್ಲ ಅಧಿಕಾರ, ಜನರ ಹತ್ತಿರ ಇರೋದೆಲ್ಲ ಸರ್ವಾಧಿಕಾರ. ನಾನು ಜನರ ಆದೇಶ ಪಾಲಿಸುವವನು'' ಅಂತ ಹೇಳ್ತಾ ರಜನಿಕಾಂತ್ ಸ್ಟೈಲಲ್ಲಿ ನಕ್ಕಿದ್ದಾರೆ ಜಯಶ್ರೀನಿವಾಸನ್.

ಅವರದ್ದು ಬಂಗಾರ, ನಮ್ಮದು ಕಲ್ಲಿದ್ದಲು ನಾ.?

''ಅವರ ಹೃದಯವನ್ನ ಬಂಗಾರದಲ್ಲಿ ಮಾಡಿದ್ದಾರಾ.? ನಮ್ಮ ಹೃದಯವನ್ನ ಕಲ್ಲಿದ್ದಲಿನಲ್ಲಿ ಮಾಡಿದ್ದಾರಾ.? ಹುಲಿ ಯಾರು, ಇಲಿ ಯಾರು ಅಂತ ಗೊತ್ತಾಗುತ್ತೆ ಸ್ವಲ್ಪ ದಿನದಲ್ಲಿ...'' ಎಂದಿದ್ದಾರೆ ಜಯಶ್ರೀನಿವಾಸನ್.

ಪ್ರತಾಪ ತೋರಿಸಿ ಬಿಡ್ಲಾ.?

ತಮ್ಮ ಮೇಲೆ ಯಾರೇ ಸಿಟ್ಟು ಮಾಡಿಕೊಂಡರೂ, ಇಲ್ಲಿಯವರೆಗೂ ಜಯಶ್ರೀನಿವಾಸನ್ ತಾಳ್ಮೆ ಕಳೆದುಕೊಂಡಿಲ್ಲ. ಆದರೂ, ''ನನ್ನ ಪ್ರತಾಪ ತೋರಿಸಿ ಬಿಡ್ಲಾ.?'' ಅಂತ ಸಹ ಸ್ಪರ್ಧಿಗಳ ಮುಂದೆ ಹೇಳುತ್ತಲೇ ಬಂದಿದ್ದಾರೆ.

English summary
Bigg Boss Kannada 5: Week 3: Jayasreenivasan's punching dialogues. ಜಯಶ್ರೀನಿವಾಸನ್ ಬಾಯಿಂದ ಬಂದ ಪಂಚಿಂಗ್ ಡೈಲಾಗ್ ಗಳು ಇಲ್ಲಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada