»   » ನಟಿ ಕೃಷಿ ತಾಪಂಡ ಬದುಕಿನ ಅತಿ ದೊಡ್ಡ ಗುಟ್ಟು 'ಬಿಗ್ ಬಾಸ್' ಮನೆಯಲ್ಲಿ ರಟ್ಟು.!

ನಟಿ ಕೃಷಿ ತಾಪಂಡ ಬದುಕಿನ ಅತಿ ದೊಡ್ಡ ಗುಟ್ಟು 'ಬಿಗ್ ಬಾಸ್' ಮನೆಯಲ್ಲಿ ರಟ್ಟು.!

Posted By:
Subscribe to Filmibeat Kannada

'ಅಕಿರ', 'ಕಹಿ' ಸೇರಿದಂತೆ ಕನ್ನಡದ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ 'ಕೊಡಗಿನ ಬೆಡಗಿ' ನಟಿ ಕೃಷಿ ತಾಪಂಡ ಇದೀಗ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಈಗಿನ್ನೂ ಅಂಬೆಗಾಲು ಇಡುತ್ತಿರುವ ಕೃಷಿ ತಾಪಂಡ ಅದಾಗಲೇ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಒಮ್ಮೆ ಔಟ್ ಆಗಿ, ಸೆಕೆಂಡ್ ಚಾನ್ಸ್ ಗಿಟ್ಟಿಸಿಕೊಂಡು, ಸದ್ಯ 'ದೊಡ್ಮನೆ'ಯೊಳಗೆ ಪ್ರಬಲ ಸ್ಪರ್ಧಿಯಾಗಿ ಬೇರೆಯವರಿಗೆ ಪೈಪೋಟಿ ನೀಡುತ್ತಿದ್ದಾರೆ.

ಇಂತಿಪ್ಪ ಕೃಷಿ ತಾಪಂಡ ಬೆಂಗಳೂರಿಗೆ ಬಂದಾಗ, ಕೈಯಲ್ಲಿ ದುಡ್ಡು ಇಲ್ಲದೆ, ಪಿ.ಜಿಗೆ ಬಾಡಿಗೆ ಕಟ್ಟಲು ಹಣ ಇಲ್ಲದೆ ಮನೆಗೆಲಸ ಮಾಡಿದ್ದರಂತೆ. ಕೃಷಿ ತಾಪಂಡ ಬದುಕಿನ ಈ ಅತಿ ದೊಡ್ಡ ಗುಟ್ಟು ರಟ್ಟಾಗಿದ್ದು 'ಬಿಗ್ ಬಾಸ್' ಮನೆಯಲ್ಲಿ.! ಮುಂದೆ ಓದಿರಿ...

'ಕಹಿ' ಘಟನೆ ಬಗ್ಗೆ ಕೃಷಿ ಬಾಯ್ಬಿಟ್ಟಿದ್ದು ಯಾಕೆ.?

ತಮ್ಮ ಕಷ್ಟದ ದಿನಗಳ ಬಗ್ಗೆ ನಟಿ ಕೃಷಿ ತಾಪಂಡ ಬಾಯ್ಬಿಡಲು ಕಾರಣ 'ಬಿಗ್ ಬಾಸ್'. ಹೊಸ ವರ್ಷದ ಹೊಸ್ತಿಲಲ್ಲಿ ಇದ್ದ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಆಗ ಈ ಗುಟ್ಟನ್ನು ಕೃಷಿ ರಟ್ಟು ಮಾಡಲೇಬೇಕಾಯಿತು.

ಆತ್ಮಹತ್ಯೆಗೆ ಯತ್ನಿಸಿದ್ದ ಅನುಪಮಾ: ದೊಡ್ಡ ರಹಸ್ಯ ಬಯಲು ಮಾಡಿದ 'ಅಕ್ಕ'.!

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

ಹೊಸ ವರ್ಷಕ್ಕೆ ಕಾಲಿರಿಸುವ ಶುಭ ಸಂದರ್ಭದಲ್ಲಿ ಸ್ಪರ್ಧಿಗಳು ತಮ್ಮ ಮನಸ್ಸಿನಲ್ಲಿ ಇರುವ ಯಾವುದಾದರೂ ಒಂದು ಗುಟ್ಟು, ಯಾರೊಂದಿಗೂ ಇಲ್ಲಿಯವರೆಗೂ ಹಂಚಿಕೊಂಡಿರದ ರಹಸ್ಯವೊಂದನ್ನು ಹಂಚಿಕೊಳ್ಳಲು 'ಬಿಗ್ ಬಾಸ್' ಅವಕಾಶ ಕಲ್ಪಿಸಿದರು.

ಎರಡನೇ ಅವಕಾಶ ಗಿಟ್ಟಿಸಿಕೊಂಡ ಕೃಷಿ ಇದೆಲ್ಲ ನಿಮಗೆ ಬೇಕಿತ್ತಾ.?

ಕ್ಯಾಮರಾ ಮುಂದೆ ಕೃಷಿ ಹೇಳಿದ್ದೇನು.?

''ಬೆಂಗಳೂರಿಗೆ ಬಂದಾಗ ನನಗೆ ತುಂಬಾ ಕಷ್ಟದ ಸಮಯ. ಕಾಲೇಜಿಗೆ ಹೋಗುತ್ತಿದ್ದೆ. ಜೊತೆಗೆ ಕೆಲಸ ಕೂಡ ಹುಡುಕುತ್ತಿದ್ದೆ. ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದೆ. ಫ್ಯಾಮಿಲಿಯಿಂದ ದೂರ ಉಳಿದಿದ್ದೆ'' ಎಂದು ತಮ್ಮ ಕಷ್ಟದ ದಿನಗಳನ್ನು ಕೃಷಿ ಬಹಿರಂಗ ಪಡಿಸಿದರು.

ಸೂಕ್ಷ್ಮತೆ ಇಲ್ಲದೆ ನಡೆದುಕೊಂಡ ಕೃಷಿ ತಾಪಂಡಗೆ ಭಾರಿ ಮುಖಭಂಗ.!

ಮನೆಗೆಲಸದವಳಾಗಿದ್ದೆ.!

''ಆ ಟೈಮ್ ನಲ್ಲಿ ನಾನು ಪಿ.ಜಿ (ಪೇಯಿಂಗ್ ಗೆಸ್ಟ್) ಯಲ್ಲಿದ್ದೆ. ಪಿ.ಜಿಗೆ ಬಾಡಿಗೆ ಕಟ್ಟಲು ನನ್ನ ಬಳಿ ಹಣ ಇರಲಿಲ್ಲ. ಆಗ ಬೇರೆ ದಾರಿ ಇಲ್ಲದೆ ಪಿ.ಜಿ ಓನರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಪಾತ್ರೆ ತೊಳೆಯುವುದರಿಂದ ಹಿಡಿದು ಮನೆಗೆಲಸದವಳಾಗಿ ಎಲ್ಲ ಕೆಲಸ ಮಾಡುತ್ತಿದ್ದರಿಂದ ಅವರು ನನ್ನ ಬಳಿ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ'' - ಕೃಷಿ ತಾಪಂಡ

ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

ಅಪ್ಪ-ಅಮ್ಮನಿಗೆ ಈ ವಿಚಾರ ಗೊತ್ತಿಲ್ಲ

''ನನ್ನ ಅಪ್ಪ-ಅಮ್ಮನಿಗೆ ಈ ವಿಷಯ ಗೊತ್ತಿಲ್ಲ. ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ. ಆದ್ರೆ, ಇವತ್ತು ನಾನು ಸ್ವತಂತ್ರವಾಗಿ, ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ. ನಿಮ್ಮನ್ನೂ (ಅಪ್ಪ-ಅಮ್ಮ) ನೋಡಿಕೊಳ್ಳುವ ಮಟ್ಟಕ್ಕೆ ನಾನು ಬಂದಿದ್ದೇನೆ'' - ಕೃಷಿ ತಾಪಂಡ

English summary
Bigg Boss Kannada 5: Week 12: Krishi Thapanda reveals her biggest secret in BBK House. Krishi Thapanda had worked as a housemaid when she came to Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X