»   » ಅಂದು ಮೊಸರಿಗಾಗಿ ಗಲಾಟೆ ಮಾಡಿದವರೇ ಇಂದು ಸಮೀರಾಚಾರ್ಯಗೆ ತಿನ್ನಿಸಿದರು.!

ಅಂದು ಮೊಸರಿಗಾಗಿ ಗಲಾಟೆ ಮಾಡಿದವರೇ ಇಂದು ಸಮೀರಾಚಾರ್ಯಗೆ ತಿನ್ನಿಸಿದರು.!

Posted By:
Subscribe to Filmibeat Kannada

ಎತ್ತಿಟ್ಟಿದ್ದ ಮೊಸರು ಖಾಲಿ ಆದಾಗ, ಕ್ಯಾಪ್ಟನ್ ಆಗಿದ್ದ ಕೃಷಿ ತಾಪಂಡ ಕಿರುಚಾಡಿದರು. ಇನ್ಮೇಲೆ ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಇರುವುದಿಲ್ಲ ಅಂತ ಶಪಥ ಮಾಡಿದರು.

ಮೊಸರನ್ನ ಅವಲಕ್ಕಿ ಜೊತೆ ಮಿಕ್ಸ್ ಮಾಡಿಕೊಂಡು ಸಮೀರಾಚಾರ್ಯ ತಿಂದಿದ್ರಿಂದ, 'ಬಿಗ್ ಬಾಸ್' ಮನೆಯಲ್ಲಿ ಮಹಾಯುದ್ಧವೇ ನಡೆದು ಹೋಯ್ತು. ಬಳಿಕ ''ಎರಡು ಒಲೆ ಉರಿಯುವುದು ಬೇಡ, ಇನ್ಮೇಲೆ ಇಲ್ಲೇ ತಿನ್ನುವೆ. ನನ್ನ ಭಾಗದ ತಿಂಡಿ-ಊಟವನ್ನ ಎತ್ತಿಟ್ಟಿರಿ. ಹಸಿವಾದ ಮೇಲೆ ತಿನ್ನುವೆ'' ಎಂದು ಬೇಸರದಿಂದ ನುಡಿದರು ಸಮೀರಾಚಾರ್ಯ.

Bigg Boss Kannada 5: Krishi Thapanda tries to patch up with Sameer Acharya

ಒಂದು ಕಪ್ ಮೊಸರಿಗಾಗಿ 'ಬಿಗ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!

ಇಷ್ಟೆಲ್ಲ ಆದ್ಮೇಲೆ, ಬಹುಶಃ ಸಮೀರಾಚಾರ್ಯ ಊಟ ಮಾಡಲಿಲ್ಲ ಅಂತ ಕಾಣುತ್ತೆ. ಹೀಗಾಗಿ, ಸಮೀರಾಚಾರ್ಯ ಅವರಿಗೆ ಅದೇ ಕೃಷಿ ತಾಪಂಡ ಊಟ ತಿನ್ನಿಸಿದರು.

''ಮೂರು ಹೊತ್ತು ಊಟ ಮಾಡಿ ಅಂತ ಎಷ್ಟು ಬಾರಿ ನಿಮಗೆ ಹೇಳುವುದು.? ಊಟ ಮಾಡದೆ ಬಾತ್ ರೂಮ್ ಗೆ ಹೋಗಿ ಯಾಕೆ ಒಬ್ಬರೇ ಕೂರುತ್ತೀರಾ.? ನಿಮ್ಮ ಹೊಟ್ಟೆಗೆ ನೀವು ಮೋಸ ಮಾಡಿಕೊಂಡು ಏನು ಸಾಧಿಸುತ್ತಿದ್ದೀರಾ.?'' ಎನ್ನುತ್ತಾ ಸಮೀರಾಚಾರ್ಯ ಅವರಿಗೆ ಊಟ ತಿನ್ನಿಸಿದರು ಕೃಷಿ ತಾಪಂಡ.

ಇದಕ್ಕೆ ಮಾನವೀಯತೆ ಅಂತ ಕರೆಯಬೇಕೋ, ಅಥವಾ ಗೇಮ್ ಪ್ಲಾನ್ ಎನ್ನಬೇಕೋ ನಿಮಗೆ ಬಿಟ್ಟಿದ್ದು. ಯಾಕಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ಯಾರು ಯಾವಾಗ ಸ್ನೇಹಿತರಾಗುತ್ತಾರೋ, ಯಾರು ಯಾವಾಗ ಶತ್ರುಗಳಾಗುತ್ತಾರೋ, ಹೇಳುವುದು ಬಹಳ ಕಷ್ಟ. ಸ್ಪರ್ಧಿಗಳ ಪ್ರತಿಯೊಂದು ನಡೆಯನ್ನೂ ಜನ ಗಮನಿಸುವುದರಿಂದ, ಎಲ್ಲರೂ ಹುಷಾರಾಗಿ ಹೆಜ್ಜೆ ಇಡಲೇಬೇಕು ಅಲ್ಲವೇ.?!

English summary
Bigg Boss Kannada 5: Week 10: Krishi Thapanda tries to patch up with Sameer Acharya after the fight over a cup of curd which was consumed by Sameer Acharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X