»   » ನೀವು 'ಇಷ್ಟು' ಸಂಬಳ ಕೊಟ್ಟರೆ, ನಟಿ ಕೃಷಿ ನಿಮ್ಮ ಮನೆ ಪಾತ್ರೆ ತೊಳೆಯುತ್ತಾರೆ.!

ನೀವು 'ಇಷ್ಟು' ಸಂಬಳ ಕೊಟ್ಟರೆ, ನಟಿ ಕೃಷಿ ನಿಮ್ಮ ಮನೆ ಪಾತ್ರೆ ತೊಳೆಯುತ್ತಾರೆ.!

Posted By:
Subscribe to Filmibeat Kannada
ಕೃಷಿ ತಾಪಂಡ ಬಿಚ್ಚಿಟ್ಟ ತನ್ನ ಜೀವನದ ಒಂದು ದೊಡ್ಡ ರಹಸ್ಯ | Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರ ಬಂದ್ಮೇಲೆ, ಚಿತ್ರರಂಗದಲ್ಲಿ ಅವಕಾಶಗಳು ಜಾಸ್ತಿ ಆಗುತ್ತದೆ ಎಂಬ ಮಾತಿದೆ. ಈಗಿನ್ನೂ ಸ್ಯಾಂಡಲ್ ವುಡ್ ನಲ್ಲಿ ಅಂಬೆಗಾಲಿಡುತ್ತಿರುವ 'ಕೊಡಗಿನ ಬೆಡಗಿ' ನಟಿ ಕೃಷಿ ತಾಪಂಡಗೆ ಬಣ್ಣದ ಬದುಕಿನಲ್ಲಿ ಬೆಳೆಯಬೇಕು ಎಂಬ ಆಸೆ ಇದೆ. ಅದಕ್ಕಿಂತ ಹೆಚ್ಚಾಗಿ 'ಇಷ್ಟು' ಸಂಬಳ ಕೊಟ್ಟುಬಿಟ್ಟರೆ ಪಾತ್ರೆ ತೊಳೆದುಕೊಂಡು ಹಾಯಾಗಿ ಇದ್ದು ಬಿಡ್ತಾರಂತೆ ನಟಿ ಕೃಷಿ ತಾಪಂಡ.

ಇದೇನಪ್ಪಾ ಹೀಗೆ ಅಂತ ಕನ್ಫ್ಯೂಸ್ ಆದ್ರಾ.? ''ಒಂದು ಲಕ್ಷ ಸಂಬಳ ಕೊಟ್ಟರೆ, ಪಾತ್ರೆ ತೊಳೆದುಕೊಂಡು ಇದ್ದು ಬಿಡುತ್ತೇನೆ'' ಎಂದು ಸ್ವತಃ ನಟಿ ಕೃಷಿ ತಾಪಂಡ 'ಬಿಗ್ ಬಾಸ್' ಮನೆಯಲ್ಲಿಯೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಆಗಿದ್ದೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಪಾತ್ರೆ ತೊಳೆಯಲು ರೆಡಿ

''ನಮ್ಮನ್ನ ಕೆಲಸಕ್ಕೆ ಇಟ್ಟುಕೊಂಡು ತಿಂಗಳಿಗೆ ಒಂದು ಲಕ್ಷ ಕೊಟ್ಟರೆ ಪಾತ್ರೆ ತೊಳೆದುಕೊಂಡು ಇರುತ್ತೇನೆ'' ಎಂದು ನಗುನಗುತ್ತಾ ಕೃಷಿ ಹೇಳಿದಾಗ, ''ಒಂದು ಲಕ್ಷ ಅಷ್ಟೇನಾ'' ಅಂತ ಅನುಪಮಾ ಕೇಳಿದರು. ಆಗ ''ಒಂದು ವಾರಕ್ಕೆ ಒಂದು ಲಕ್ಷ ಕೊಟ್ಟರೆ ಸಾಕು'' ಎಂದುಬಿಟ್ಟರು ನಟಿ ಕೃಷಿ ತಾಪಂಡ.

ನಟಿ ಕೃಷಿ ತಾಪಂಡ ಬದುಕಿನ ಅತಿ ದೊಡ್ಡ ಗುಟ್ಟು 'ಬಿಗ್ ಬಾಸ್' ಮನೆಯಲ್ಲಿ ರಟ್ಟು.!

ಒಂದು ಲಕ್ಷ ಸಂಬಳ ಯಾಕೆ.?

''ನಾನು ತುಂಬಾ ಎಂಟರ್ಟೇನ್ ಮಾಡುತ್ತೇನೆ. ದಿನಕ್ಕೆ ಮೂರು ಬಾರಿ ಪಾತ್ರೆ ತೊಳೆಯುತ್ತೇನೆ. ನನ್ನ ಜೊತೆ ಮಾತನಾಡುತ್ತಿದ್ದರೆ, ಟೈಮ್ ಹೋಗುವುದೇ ಗೊತ್ತಾಗುವುದಿಲ್ಲ. ಅದಕ್ಕಿಂತ ಬೇಕಾ.? ಚೆನ್ನಾಗಿ ಕಾಫಿ, ಟೀ ಮಾಡಿಕೊಡುತ್ತೇನೆ. ಜಸ್ಟ್ ಲುಕ್ ಆಟ್ ಮಿ... ವಾಟ್ ಡು ಯು ಥಿಂಕ್...'' ಎನ್ನುತ್ತ ಒಂದು ವಾರಕ್ಕೆ ಒಂದು ಲಕ್ಷ ಯಾಕೆ ಎಂಬುದರ ಬಗ್ಗೆ ಕೃಷಿ ತಾಪಂಡ ಸಮರ್ಥನೆ ನೀಡಿದರು.

ಸೂಕ್ಷ್ಮತೆ ಇಲ್ಲದೆ ನಡೆದುಕೊಂಡ ಕೃಷಿ ತಾಪಂಡಗೆ ಭಾರಿ ಮುಖಭಂಗ.!

ಜೆಕೆಗೆ ಫ್ರೀ

''ನಾನು ನಿನಗೆ ಐದು ಪೈಸಾನೂ ಕೊಡಲ್ಲ'' ಅಂತ ಜೆಕೆ ಹೇಳಿದ್ದಕ್ಕೆ, ''ನಿನ್ನ ಮನೆಗೆ ದುಡ್ಡು ಕೇಳಲ್ಲ'' ಎಂದರು ಕೃಷಿ ತಾಪಂಡ.

ಎರಡನೇ ಅವಕಾಶ ಗಿಟ್ಟಿಸಿಕೊಂಡ ಕೃಷಿ ಇದೆಲ್ಲ ನಿಮಗೆ ಬೇಕಿತ್ತಾ.?

ಮನೆಗೆಲಸ ಮಾಡಿದ್ದ ಕೃಷಿ

ಹಾಗ್ನೋಡಿದ್ರೆ, ಕೃಷಿ ಬೆಂಗಳೂರಿಗೆ ಬಂದಾಗ ಕೈಯಲ್ಲಿ ದುಡ್ಡು ಇಲ್ಲದೆ, ತಾವಿದ್ದ ಪಿ.ಜಿಗೆ ಬಾಡಿಗೆ ಕಟ್ಟಲು ಹಣ ಇಲ್ಲದೆ ಮನೆಗೆಲಸ ಮಾಡಿದ್ದರಂತೆ. ಈ ಸತ್ಯವನ್ನ 'ಬಿಗ್ ಬಾಸ್' ಮನೆಯಲ್ಲಿಯೇ ಕೃಷಿ ಬಿಚ್ಚಿಟ್ಟರು.

ಸಂದರ್ಶನ : ಕೃಷಿ ಬಿಚ್ಚಿಟ್ಟ 'ಬಿಗ್ ಬಾಸ್' ಕುತೂಹಲಕಾರಿ ವಿಷಯಗಳು

ಅಡುಗೆ ಮನೆಯಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.!

ನಿಜ ಹೇಳ್ಬೇಕಂದ್ರೆ, 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ, ನಟಿ ಕೃಷಿ ಅಡುಗೆ ಮನೆಯೊಳಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಟಾಸ್ಕ್ ಗಳಲ್ಲೂ ಕೃಷಿ ಪರ್ಫಾಮೆನ್ಸ್ ಚೆನ್ನಾಗಿದೆ.

English summary
Bigg Boss Kannada 5: Week 12: Krishi Thapanda wants 1 lakh salary to wash vessels.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X