»   » ಜನಸಾಮಾನ್ಯರನ್ನ ಔಟ್ ಮಾಡುತ್ತಿರುವ 'ಬಿಗ್ ಬಾಸ್'ಗೆ ವೀಕ್ಷಕರ ಧಿಕ್ಕಾರ.!

ಜನಸಾಮಾನ್ಯರನ್ನ ಔಟ್ ಮಾಡುತ್ತಿರುವ 'ಬಿಗ್ ಬಾಸ್'ಗೆ ವೀಕ್ಷಕರ ಧಿಕ್ಕಾರ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಎರಡು ವಾರಗಳು ಕಳೆದಿವೆ. ಎರಡೂ ವಾರ 'ಬಿಗ್ ಬಾಸ್' ಮನೆಯಿಂದ ಜನಸಾಮಾನ್ಯರೇ ಔಟ್ ಆಗಿದ್ದಾರೆ. ಮೊದಲ ವಾರ ಮೈಸೂರಿನ ಗೃಹಿಣಿ ಸುಮಾ ರಾಜ್ ಕುಮಾರ್ ಹೊರಬಂದರೆ, ಎರಡನೇ ವಾರ ಕೊಡಗಿನ ಮೇಘ ಎಲಿಮಿನೇಟ್ ಆಗಿದ್ದಾರೆ.

'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?

ಸಾಲಾಗಿ ಜನಸಾಮಾನ್ಯರನ್ನೇ 'ಬಿಗ್ ಬಾಸ್' ಹೊರಗೆ ಕಳುಹಿಸುತ್ತಿರುವ ಬಗ್ಗೆ ವೀಕ್ಷಕರಿಗೆ ಸಿಟ್ಟು ಬಂದಿದೆ. ಮೇಲಾಗಿ ನಿರ್ದೇಶಕ ದಯಾಳ್ ಪದ್ಮನಾಭನ್ ಸೇಫ್ ಆಗಿರುವುದು ವೀಕ್ಷಕರಲ್ಲಿ ಅಸಮಾಧಾನ ಮೂಡಿದೆ. ಅದಕ್ಕೆ ಸಾಕ್ಷಿ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ವ್ಯಕ್ತವಾಗುತ್ತಿರುವ ಕಾಮೆಂಟ್ ಗಳು...

'ಬಿಗ್ ಬಾಸ್'ಗೆ ಧಿಕ್ಕಾರ ಧಿಕ್ಕಾರ

''ಪ್ರತಿ ಬಾರಿ ಕಾಮನ್ ಮ್ಯಾನ್ ಟಾರ್ಗೆಟ್ ಆಗುತ್ತಿದ್ದಾರೆ. ಕಾಮನ್ ಮ್ಯಾನ್ ನ ಎಲಿಮಿನೇಟ್ ಮಾಡಿರುವ 'ಬಿಗ್ ಬಾಸ್' ಗೆ ಧಿಕ್ಕಾರ ಧಿಕ್ಕಾರ'' ಅಂತಿದ್ದಾರೆ ವೀಕ್ಷಕರು.

'ಬಿಗ್ ಬಾಸ್ ಕನ್ನಡ-5': ಮನೆಯಿಂದ ಹೊರಬಂದ 'ಡೆವಿಲ್' ಮೇಘ

ಮೇಘ ಔಟ್ ಆಗಲು ಮಾನದಂಡ ಏನು.?

''ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಕಾಮೆಂಟ್ಸ್ ನೋಡಿದರೆ, ದಯಾಳ್ ಗೆ ಯಾರೂ ವೋಟ್ ಮಾಡಿದ ಹಾಗೆ ಕಾಣುತ್ತಿಲ್ಲ. ಹೀಗಿರುವಾಗ, ಯಾವ ಮಾನದಂಡದ ಮೇಲೆ ಮೇಘ ರನ್ನ ಎಲಿಮಿನೇಟ್ ಮಾಡಿದ್ರಿ.?'' ಎಂದು ವೀಕ್ಷಕರು ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ 'ಬಿಗ್ ಬಾಸ್' ಉತ್ತರ ಕೊಡಬೇಕು.

'ಕಾಮನ್ ಮ್ಯಾನ್' ದಿವಾಕರ್ ಗೆ ಸೂಪರ್ ಅಧಿಕಾರ ಕೊಟ್ಟ 'ಮಾಸ್' ಮೇಘ

ಟ್ರೋಲ್ ಆಗುತ್ತಿದ್ದಾರೆ ದಯಾಳ್

ದಯಾಳ್ ಸೇಫ್ ಅಂತ ಅನೌನ್ಸ್ ಆದಾಗ ವೀಕ್ಷಕರ ಪ್ರತಿಕ್ರಿಯೆ ಹೀಗಿತ್ತು.!

ಫೇಸ್ ಬುಕ್ ನಲ್ಲಿ ವೋಟ್ ಮಾಡಲು ಅವಕಾಶ ನೀಡಿ

''ಫೇಸ್ ಬುಕ್ ಮೂಲಕ ವೋಟ್ ಮಾಡುವ ಅವಕಾಶ ಕೊಡಿ. ಆಗ ಗೊತ್ತಾಗುತ್ತೆ, ಯಾರಿಗೆ ನಿಜವಾಗಲೂ ವೋಟ್ ಬೀಳುತ್ತೆ ಅಂತ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸ್ಕ್ರಿಪ್ಟೆಡ್ ಶೋ

ದಯಾಳ್ ಸೇಫ್ ಆಗಿರುವ ಬಗ್ಗೆ ಸಿಡಿಮಿಡಿಗೊಂಡ ವೀಕ್ಷಕರು ''ಬಿಗ್ ಬಾಸ್' ಒಂದು ಸ್ಕ್ರಿಪ್ಟೆಡ್ ಶೋ'' ಎನ್ನುತ್ತಿದ್ದಾರೆ.

ಐ ಹೇಟ್ 'ಬಿಗ್ ಬಾಸ್'

''ಕಾಮನ್ ಮ್ಯಾನ್ ನ ಎಲಿಮಿನೇಟ್ ಮಾಡುವ ಹಾಗಿದ್ದರೆ, ಅವರನ್ನ ಕರೆಸುವ ಅವಶ್ಯಕತೆ ಏನಿತ್ತು.? ಸೆಲೆಬ್ರಿಟಿಗಳನ್ನೇ ಕರೆಸಬೇಕಿತ್ತು. ಐ ಹೇಟ್ ಬಿಗ್ ಬಾಸ್'' ಅಂತಾವ್ರೆ ವೀಕ್ಷಕರು.

ಫಿಕ್ಸೆಡ್ ಶೋ

''ಯಾರೋ ಎಲಿಮಿನೇಟ್ ಆಗುವ ಜಾಗದಲ್ಲಿ ಮತ್ತಿನ್ಯಾರೋ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ 'ಬಿಗ್ ಬಾಸ್' ಒಂದು ಫಿಕ್ಸೆಡ್ ಶೋ'' ಎಂದು ವೀಕ್ಷಕರೊಬ್ಬರು ಕೋಪದಿಂದ ಕಾಮೆಂಟ್ ಮಾಡಿದ್ದಾರೆ.

ಮರ್ಯಾದಸ್ಥ ಹೆಣ್ಣು ಮಕ್ಕಳಿಗೆ ಅದು ಜಾಗ ಅಲ್ಲ

''ಕಾಲಿಗೆ ಬಿದ್ದು ದೊಡ್ಡವರಿಗೆ ಗೌರವ ನೀಡುವ ಹೆಣ್ಣು ಮಕ್ಕಳಿಗೆ ಅವಕಾಶ ಇಲ್ಲ. ಮರ್ಯಾದಸ್ಥ ಕುಟುಂಬದ ಹೆಣ್ಣು ಮಕ್ಕಳಿಗೆ 'ಬಿಗ್ ಬಾಸ್' ಮನೆಯಲ್ಲಿ ಜಾಗ ಇಲ್ಲ'' ಅಂತ ಪ್ರೂವ್ ಆಗಿದ್ಯಂತೆ

ದಯಾಳ್ ಗೆ ವೋಟ್ ಮಾಡಿದವರು ಯಾರು.?

''ಕಾವೇರಿ ನೀರು ಕುಡಿದ ಯಾವ ಕನ್ನಡಿಗ ದಯಾಳ್ ಗೆ ವೋಟ್ ಮಾಡಿದ್ದಾರೆ ಅಂತ ಕಲರ್ಸ್ ವಾಹಿನಿಯವರೇ ಹೇಳಬೇಕು'' ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ.

ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ 'ಜನಸಾಮಾನ್ಯ' ಸ್ಪರ್ಧಿ ಮೇಘ ಔಟ್ ಆಗಿರುವ ಬಗ್ಗೆ ನಿಮ್ಮ ಅನಿಸಿಕೆ ಏನು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ..

English summary
Bigg Boss Kannada 5: Week 2: Viewers have taken Colors Super Official Facebook page to express their displeasure about Megha's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X