»   » 'ಬಿಗ್ ಬಾಸ್' ಚದುರಂಗದಾಟ: ಸ್ಪರ್ಧಿಗಳ ತಲೆಯಲ್ಲಿ ಹೆಬ್ಬಾವು ಹರಿದಾಟ

'ಬಿಗ್ ಬಾಸ್' ಚದುರಂಗದಾಟ: ಸ್ಪರ್ಧಿಗಳ ತಲೆಯಲ್ಲಿ ಹೆಬ್ಬಾವು ಹರಿದಾಟ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ ಶುರು ಆದಾಗಿನಿಂದಲೂ ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ, ಸ್ಪರ್ಧಿಗಳಿಗೆ ಶಾಕ್ ನೀಡುತ್ತಲೇ ಬರುತ್ತಿದ್ದಾರೆ 'ಬಿಗ್ ಬಾಸ್'.

ಹನ್ನೊಂದನೇ ವಾರದ ಕ್ಯಾಪ್ಟನ್ ಆಗಿ ರಿಯಾಝ್ ಆಯ್ಕೆ ಆಗಿದ್ರಿಂದ, ಎಲ್ಲ ತಿರುವುಗಳಲ್ಲಿಯೂ ರಿಯಾಝ್ ಸೇಫ್ ಆಗಿದ್ರು. ದಿವಾಕರ್ ಅವರನ್ನ ರಿಯಾಝ್ ನೇರವಾಗಿ ನಾಮಿನೇಟ್ ಮಾಡಿದ್ರಿಂದಾಗಿ, ದಿವಾಕರ್ ಒಬ್ಬರು ಡೇಂಜರ್ ಝೋನ್ ನಲ್ಲಿ ಇರುವುದು ಎಲ್ಲರಿಗೂ ಗೊತ್ತಿತ್ತು.

ಆದ್ರೆ, ದಿವಾಕರ್ ಜೊತೆಗೆ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತ 'ಬಿಗ್ ಬಾಸ್' ಘೋಷಿಸಲಿಲ್ಲ. ಹೀಗಾಗಿ, 'ಬಿಗ್ ಬಾಸ್' ಮನೆಯಿಂದ ಈ ವಾರ ಯಾರಿಗೆ ಗೇಟ್ ಪಾಸ್ ಎಂಬ ಲೆಕ್ಕಾಚಾರ ಯಾರ ತಲೆಯಲ್ಲಿಯೂ ಓಡಲಿಲ್ಲ.

ಚಟುವಟಿಕೆ ಚಾಲ್ತಿಯಲ್ಲಿ ಇದ್ದಾಗಲೇ, ಇದ್ದಕ್ಕಿದ್ದಂತೆ ಮನೆಯಿಂದ ಜಯಶ್ರೀನಿವಾಸನ್ ನಾಪತ್ತೆ ಆದರು. ಮಧ್ಯರಾತ್ರಿ ದಿಢೀರ್ ಅಂತ ಎಲ್ಲರನ್ನೂ ಎಬ್ಬಿಸಿ, ಎಲಿಮಿನೇಷನ್ ಪ್ರಕ್ರಿಯೆಗೆ ನಾಂದಿ ಹಾಡಿದ 'ಬಿಗ್ ಬಾಸ್' ಸಮೀರಾಚಾರ್ಯ ರವರನ್ನ ಹೊರಗೆ ಕರೆದರು.

ಸೀಕ್ರೆಟ್ ರೂಮ್ ನಲ್ಲಿ ಇದ್ದ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಅವರ ತೀರ್ಮಾನದಂತೆ 'ಪ್ರಜಾರಾಜ್ಯ' ಟಾಸ್ಕ್ ನೆರವೇರಿತು. ಏನಾಗುತ್ತಿದೆ, ಹೇಗಾಗುತ್ತಿದೆ ಎಂಬ ಕನ್ ಫ್ಯೂಶನ್ ನಲ್ಲಿ ಎಲ್ಲ ಸ್ಪರ್ಧಿಗಳು ಇರುವಾಗಲೇ ದಿವಾಕರ್ 'ಎಲಿಮಿನೇಟ್' ಆದರು. ಮುಂದೆ ಓದಿರಿ...

'ಬಿಗ್ ಬಾಸ್' ಚದುರಂಗದಾಟ...

ಸದ್ಯ 'ಬಿಗ್ ಬಾಸ್' ಹಾಗೂ ಸ್ಪರ್ಧಿಗಳ ನಡುವೆ ಚದುರಂಗದಾಟ ನಡೆಯುತ್ತಿದೆ. ಹೀಗಾಗಿ, ಯಾವ ಸ್ಪರ್ಧಿ, ಯಾವ ಸಮಯದಲ್ಲಿ ಔಟ್ ಆಗುತ್ತಾರೆ ಅಂತ ಹೇಳುವುದೇ ಕಷ್ಟ ಆಗಿದೆ.

'ಬಿಗ್ ಬಾಸ್' ಕೊಟ್ಟ ಚಮಕ್ ಗೆ ಸ್ಪರ್ಧಿಗಳು ಸುಸ್ತೋ ಸುಸ್ತು.!

ಸೀಕ್ರೆಟ್ ರೂಮ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 'ದೊಡ್ಮನೆ'ಯ ಸೀಕ್ರೆಟ್ ರೂಮ್ ಬಾಗಿಲು ತೆರೆದದ್ದೇ ಹನ್ನೊಂದನೇ ವಾರದಲ್ಲಿ. ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಸೀಕ್ರೆಟ್ ರೂಮ್ ನಲ್ಲಿ ಇದ್ದುಕೊಂಡು 'ಪ್ರಜಾರಾಜ್ಯ' ಚಟುವಟಿಕೆಯ ಕಿಂಗ್ ಮೇಕರ್ಸ್ ಆಗಿದ್ದರು.

ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!

ಮೊಟ್ಟ ಮೊದಲ ಬಾರಿಗೆ

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆ ಹಾಗೂ ಸೀಕ್ರೆಟ್ ರೂಮ್ ನಲ್ಲಿದ್ದ ಸದಸ್ಯರ ಜೊತೆ ಪ್ರತ್ಯೇಕವಾಗಿ ಪಂಚಾಯತಿ ನಡೆಸಿದರು ಕಿಚ್ಚ ಸುದೀಪ್.

ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

ಎರಡು ಎಲಿಮಿನೇಷನ್

ಜಯಶ್ರೀನಿವಾಸನ್ ನಾಪತ್ತೆ ಆಗಿದ್ದಾರೆ ಅಂತ ಗೊತ್ತಿತ್ತೇ ವಿನಃ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ ಎಂಬ ಸತ್ಯ ಸ್ಪರ್ಧಿಗಳ ಮುಂದೆ ಬಹಿರಂಗ ಆಗಿರಲಿಲ್ಲ. ಹೀಗಾಗಿ, ಸೀಕ್ರೆಟ್ ರೂಮ್ ನಿಂದ ಒಬ್ಬರು ಹಾಗೂ 'ಬಿಗ್ ಬಾಸ್' ಮನೆಯಿಂದ ಒಬ್ಬರನ್ನ ಔಟ್ ಮಾಡಲು ಸುದೀಪ್ ಮುಂದಾದರು.

ಇಂದು 'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರಬೀಳೋರು ಯಾರು.?

ಸೇಫ್ ಆದ ಸಮೀರಾಚಾರ್ಯ

ಮಧ್ಯರಾತ್ರಿ ಎಲಿಮಿನೇಟ್ ಆಗಿ ಮೂರ್ನಾಲ್ಕು ದಿನ ಸೀಕ್ರೆಟ್ ರೂಮ್ ನಲ್ಲಿ ಇದ್ದ ಸಮೀರಾಚಾರ್ಯ ವೀಕ್ಷಕರ ಬೆಂಬಲದಿಂದ ಸೇಫ್ ಆಗಿದ್ರಿಂದ 'ಬಿಗ್ ಬಾಸ್' ಮನೆಯೊಳಗೆ ವಾಪಸ್ ಬಂದರು.

'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!

ಜಯಶ್ರೀನಿವಾಸನ್ ಔಟ್

ವೀಕ್ಷಕರ ಬೆಂಬಲ ಇಲ್ಲದ ಕಾರಣ ಸೀಕ್ರೆಟ್ ರೂಮ್ ನಿಂದಲೇ ಜಯಶ್ರೀನಿವಾಸನ್ ಅವರನ್ನ ಔಟ್ ಮಾಡಲಾಗಿದೆ.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ಸ್ಪರ್ಧಿಗಳಿಗೆ ಗೊಂದಲ

ಕ್ಯಾಪ್ಟನ್ ರಿಯಾಝ್ ಅವರಿಂದ ನೇರವಾಗಿ ನಾಮಿನೇಟ್ ಆದ ದಿವಾಕರ್ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರ್ಯಾರು ನಾಮಿನೇಟ್ ಆಗಿದ್ದಾರೆ ಎಂಬ ಸತ್ಯ ಯಾರಿಗೂ ಗೊತ್ತಿರಲಿಲ್ಲ. 'ಎಲಿಮಿನೇಷನ್ ನಡೆಯುವುದಿಲ್ಲ' ಎಂದು ಲೆಕ್ಕಾಚಾರ ಹಾಕಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ಕೊಟ್ಟರು.

ಕನ್ನಡಿಗರಾಗಿ 'ಕಷ್ಟ' ಎಂದು ಬರೆಯಲು ಅಷ್ಟೊಂದು ಕಷ್ಟವೇ..?

ದಿವಾಕರ್ ಔಟ್.!

ದಿವಾಕರ್, ಕೃಷಿ ಹಾಗೂ ನಿವೇದಿತಾ ನಾಮಿನೇಟ್ ಆಗಿದ್ದಾರೆ ಎಂದು ಘೋಷಿಸಿದ ಸುದೀಪ್ ಬಳಿಕ ದಿವಾಕರ್ ಅವರನ್ನ ಹೊರಗೆ ಕರೆದರು.

ದಿವಾಕರ್ ಎಂಥ ರಾಜಕಾರಣಿ ಅಂತ ಸುದೀಪ್ ಗೂ ಗೊತ್ತಾಯ್ತು.!

ಎಲ್ಲರ ತಲೆಯಲ್ಲೂ ಹೆಬ್ಬಾವು ಹರಿದಾಡುತ್ತಿದೆ.!

''ದಿವಾಕರ್ ಔಟ್ ಆಗಲು ಚಾನ್ಸ್ ಇಲ್ಲ. ಜಯಶ್ರೀನಿವಾಸನ್ ಜೊತೆಗೆ ಇರುತ್ತಾರೆ'' ಅಂತ ದಿವಾಕರ್ ಎಲಿಮಿನೇಟ್ ಆದಾಗ ಚಂದನ್ ಶೆಟ್ಟಿ ಹಾಗೂ ರಿಯಾಝ್ ಮಾತನಾಡುತ್ತಿದ್ದರು. ಆದ್ರೆ, ಜಯಶ್ರೀನಿವಾಸನ್ ಔಟ್ ಆಗಿರುವ ಸಂಗತಿ ಅವರಿಗೆ ಗೊತ್ತೇ ಇಲ್ಲ.!

ಸೀಕ್ರೆಟ್ ರೂಮ್ ನಲ್ಲಿ ದಿವಾಕರ್

'ಬಿಗ್ ಬಾಸ್' ಮನೆಯಿಂದ ಹೊರ ಬಂದ ದಿವಾಕರ್ ಸದ್ಯ ನೇರವಾಗಿ ಸೀಕ್ರೆಟ್ ರೂಮ್ ಗೆ ತೆರಳಿದ್ದಾರೆ. ಸೀಕ್ರೆಟ್ ರೂಮ್ ನಲ್ಲಿ ಸದ್ಯ ದಿವಾಕರ್ ಏಕಾಂಗಿ.

English summary
Bigg Boss Kannada 5: Week 11: Jayasreenivasan gets evicted and Diwakar has been sent to secret room, while other contestants are confused as to what is happening in BBK house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X