»   » ಬರೆದು ಇಟ್ಕೊಳ್ಳಿ.. 'ಬಿಗ್ ಬಾಸ್'ನಲ್ಲಿ ಜಯಶ್ರೀನಿವಾಸನ್, ನಿವೇದಿತಾ 100 ದಿನ ಇರೋದು ಪಕ್ಕಾ.!

ಬರೆದು ಇಟ್ಕೊಳ್ಳಿ.. 'ಬಿಗ್ ಬಾಸ್'ನಲ್ಲಿ ಜಯಶ್ರೀನಿವಾಸನ್, ನಿವೇದಿತಾ 100 ದಿನ ಇರೋದು ಪಕ್ಕಾ.!

Posted By:
Subscribe to Filmibeat Kannada
Bigg Boss Kannada Season 5 : ನಾನು ನಿವೇದಿತಾ 100 ದಿನಗಳು ಇರೋದು ಪಕ್ಕಾ ಅಂದ್ರು ಜಯಶ್ರೀನಿವಾಸಾನ್

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹಾಗೂ 'ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡ ಹಂಡ್ರೆಡ್ ಡೇಸ್ ಇರುವುದು ಗ್ಯಾರೆಂಟಿ. ಹಾಗಂತ ಭವಿಷ್ಯ ನುಡಿದಿದ್ದಾರೆ ಜಯಶ್ರೀನಿವಾಸನ್.

ಸಂಖ್ಯಾಬಲದ ಮೇಲೆ ಲೆಕ್ಕ ಹಾಕಿದ ಜಯಶ್ರೀನಿವಾಸನ್, ತಾವು ಮತ್ತು ನಿವೇದಿತಾ 'ಬಿಗ್ ಬಾಸ್' ಮನೆಯಲ್ಲಿ ನೂರು ದಿನ ಇರುವುದು ಪಕ್ಕಾ ಎಂದಿದ್ದಾರೆ.

'ಬಿಗ್ ಬಾಸ್' ಲೆಕ್ಕಾಚಾರವನ್ನೇ ಉಲ್ಟಾ ಮಾಡ್ತಾರಾ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.?

ಅಷ್ಟು ದಿನ ಇರಲು ಗೇಮ್ ಪ್ಲಾನ್ ಕೂಡ ರೆಡಿ ಮಾಡಿಕೊಂಡಿರುವ ಜಯಶ್ರೀನಿವಾಸನ್, ದಿವಾಕರ್ ಜೊತೆ ಜಗಳ ಆಡದೆ 'ಸ್ಮಾರ್ಟ್' ಆಗಿರಲು ನಿರ್ಧರಿಸಿದ್ದಾರೆ. ಮುಂದೆ ಓದಿರಿ...

ಸ್ಮಾರ್ಟ್ ಆಗಿರಲು ನಿರ್ಧರಿಸಿದ ಜಯಶ್ರೀನಿವಾಸನ್

''ಇನ್ಮೇಲೆ ನಾನು ಕಿತ್ತಾಡದೆ, ಸ್ವಲ್ಪ ಸ್ಮಾರ್ಟ್ ಆಗಿರುತ್ತೇನೆ. ಯಾಕಂದ್ರೆ, ನನಗೆ ಕೋಪ ಬಂದು, ಏನಾದರೂ ಎತ್ತಿ ಹಾಕ್ಬಿಟ್ಟರೆ ನನ್ನನ್ನ ಹೊರಗೆ ಕಳುಹಿಸಿಬಿಡುತ್ತಾರೆ. ಅದಕ್ಕೆ ದಿವಾಕರ್ ಏನೇ ಕೆಣಕಿದರೂ, ಮಾತನಾಡಬಾರದು ಅಂತ ಡಿಸೈಡ್ ಮಾಡಿಬಿಟ್ಟಿದ್ದೇನೆ'' ಎಂದು ದಿವಾಕರ್ ಮುಂದೆಯೇ ಜಯಶ್ರೀನಿವಾಸನ್ ಹೇಳಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ.!

ನೂರು ದಿನ ಇರುವುದು ಪಕ್ಕಾ

''ದಿವಾಕರ್ ಸಹವಾಸವೇ ಬೇಡ. ಹಂಡ್ರೆಡ್ ಡೇಸ್ ಇರುತ್ತೇವೆ. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು.? ನೀನು ಬರೆದು ಇಟ್ಕೋ, ಇವತ್ತು ಲಕ್ಕಿ ಡೇಟ್. ನಾನು ಮತ್ತು ನಿವೇದಿತಾ ಈ ಮನೆಯಲ್ಲಿ ಹಂಡ್ರೆಡ್ ಡೇಸ್ ಇರುವುದು ಗ್ಯಾರೆಂಟಿ'' ಅಂತ ದಿವಾಕರ್ ಬಳಿ ಮಾತನಾಡುತ್ತಾ ಜಯಶ್ರೀನಿವಾಸನ್ ಹೇಳದರು

'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.!

ದೇವ್ರಾಣೆ ನೂರು ದಿನ ಇರಲ್ಲ.!

''ದೇವ್ರಾಣಿ ನೀವು ಹಂಡ್ರೆಡ್ ಡೇಸ್ ಇರಲ್ಲ. ನೀವೇ ಗೆಲ್ಲುವ ಹಾಗಿದ್ದರೆ, ಕಷ್ಟ ಪಟ್ಟಿರುವವರು ಎಷ್ಟು ಜನ ಇದ್ದಾರೆ ಈ ಮನೆಯಲ್ಲಿ... ಅವರ ಕಥೆ ಏನಾಗಬೇಕು.? ಸುಖವಾಗಿ ಬಂದವರೆಲ್ಲ ಗೆಲ್ಲಲು ಆಗಲ್ಲ. ಇದು ನನ್ನ ಅನಿಸಿಕೆ'' ಎಂದು ದಿವಾಕರ್ ಹೇಳಿದರು.

ಗೆಲ್ಲುತ್ತೇನೆ ಎಂಬ ಭರವಸೆ ಇದೆ

''ನಾವು ಗೆಲ್ತೀವಿ. ನೀನು ನೋಡುತ್ತಿರು....'' ಎಂದು ಭರವಸೆ ಇಂದಲೇ ಜಯಶ್ರೀನಿವಾಸನ್ ನುಡಿದರು.

English summary
Bigg Boss Kannada 5: Week 5: ''Niveditha and I will stay here for 100 days'' says Jayasreenivasan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada