»   » 'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!

'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಗೆ ಕಾಲಿಟ್ಟಾಗ, ಎಲ್ಲರೂ ''ಬಾರ್ಬಿ ಡಾಲ್'' ಅಂತ ಬಾಯ್ತುಂಬ ಕರೆದಿದ್ದು 'ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡಗೆ.

ನಿವೇದಿತಾ ಇನ್ನೂ ಚಿಕ್ಕವಳು, ಪುಟ್ಟ ಹುಡುಗಿ ಎಂಬ ಭಾವನೆ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರಲ್ಲಿದೆ. ಆದ್ರೆ, ''ನಿವೇದಿತಾ ಗೌಡ ಮಗು ಅಲ್ಲ. ಆಕೆ ಕನ್ನಿಂಗ್ (ಕುತಂತ್ರಿ). ನಯಾ ಪೈಸೆ ಕೆಲಸ ಮಾಡಲ್ಲ'' ಎಂದು ಆಶಿತಾ ಚಂದ್ರಪ್ಪ, ಕೃಷಿ ತಾಪಂಡ ಹಾಗೂ ತೇಜಸ್ವಿನಿ ಆರೋಪ ಮಾಡಿದ್ದಾರೆ.

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ನಿವೇದಿತಾ ಗೌಡ ಬಗ್ಗೆ ಆಶಿತಾ, ಕೃಷಿ ಹಾಗೂ ತೇಜಸ್ವಿನಿ ಕಾಮೆಂಟ್ ಮಾಡಿರುವುದು ಹೀಗೆ....

ಕನ್ನಿಂಗ್ಲಿ ಸ್ಮಾರ್ಟ್

''ನನ್ನನ್ನ ಮಗು ತರಹ ಟ್ರೀಟ್ ಮಾಡಬೇಡಿ ಅಂತ ಅವಳು ಕೂಡ ಹೇಳಲ್ಲ. ಅದೇ ಅವಳಿಗೆ ದೊಡ್ಡ ಉಪಯೋಗ. ಮೊದಲಿನಿಂದಲೂ ಅವಳು ಮಗು ಅಲ್ಲ ಅಂತ ನಾನು ಹೇಳುತ್ತಲೇ ಬಂದಿದ್ದೇನೆ. ಅವಳು ತುಂಬಾ ಕನ್ನಿಂಗ್. ಕನ್ನಿಂಗ್ಲಿ ಸ್ಮಾರ್ಟ್. ಅವಳು ಅಷ್ಟು ಸ್ಮಾರ್ಟ್ ಆಗಿ ಇರೋದಕ್ಕೆ ಇಲ್ಲಿಯವರೆಗೂ ಬಂದಿರೋದು'' ಅಂತ ಹೇಳಿದ್ದಾರೆ ಆಶಿತಾ.

'ಗೊಂಬೆ' ನಿವೇದಿತಾ ಗೌಡಗೆ ಇರುವ ದೊಡ್ಡ ಕನವರಿಕೆ ಅಂದ್ರೆ ಇದೇ.!

ನಿವೇದಿತಾ ಮಗು ಅಲ್ಲ

''ಅವಳು ಮಗು ಅಲ್ಲ. ನಮ್ಮ ಹಾಗೆ ಸ್ಪರ್ಧಿ. ಎಲ್ಲರ ಹಾಗೆ ಅವಳೂ ಕೆಲಸ ಮಾಡಬೇಕು. ಜನ ಅವಳನ್ನ ವೋಟ್ ಮಾಡಿ ಸುಮ್ಮನೆ ಸೇಫ್ ಮಾಡುತ್ತಿಲ್ಲ. ಅವಳು ತುಂಬಾ ಸ್ಮಾರ್ಟ್ ಆಗಿದ್ದಾರೆ'' ಎಂದಿದ್ದಾರೆ ಕೃಷಿ ತಾಪಂಡ.

ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು!

ನಿವೇದಿತಾ ಯಾವುದೇ ಕೆಲಸ ಮಾಡಲ್ಲ

''ಮುಂದೆ ಕ್ಯಾಪ್ಟನ್ ಯಾರು ಆಗ್ತೀರೋ, ನಿವೇದಿತಾಗೆ ಸ್ವಲ್ಪ ಕೆಲಸ ಕೊಡಿ. ಯಾವುದೇ ಕೆಲಸ ಮಾಡಲ್ಲ'' ಅಂತಾರೆ ತೇಜಸ್ವಿನಿ.

ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

ಟಾರ್ಗೆಟ್ ಆದ ನಿವೇದಿತಾ ಗೌಡ

ಮುಂಚೆ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಇದ್ದ ನಿವೇದಿತಾ ಗೌಡ ಇದೀಗ ಜನಸಾಮಾನ್ಯ ಸ್ಪರ್ಧಿಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದರಿಂದ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಕೋಪ ಬಂದಿದ್ಯಾ.? ನಮಗಂತೂ ಗೊತ್ತಿಲ್ಲ. ಒಟ್ನಿಲ್ಲಿ, ನಿವೇದಿತಾ ಗೌಡ ಕೂಡ ಈಗ ಟಾರ್ಗೆಟ್ ಆಗಿದ್ದಾರೆ.

English summary
Bigg Boss Kannada 5: Niveditha Gowda is cunningly smart says Ashita.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X