»   » ಈ ವಾರ ಎಲಿಮಿನೇಷನ್ ನಿಂದ ಬಚಾವ್ ಆದ ನಿವೇದಿತಾ ಗೌಡ.!

ಈ ವಾರ ಎಲಿಮಿನೇಷನ್ ನಿಂದ ಬಚಾವ್ ಆದ ನಿವೇದಿತಾ ಗೌಡ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಎರಡನೇ ವಾರದ ಎಲಿಮಿನೇಷನ್ ನಿಂದ ಬಚಾವಾದ ನಿವೇದಿತಾ ಗೌಡ | Filmibeat Kannada

ಅಚ್ಚ ಕನ್ನಡವನ್ನ ಇಂಗ್ಲೀಷ್ ನಲ್ಲಿ ಮಾತನಾಡುವ, ಮಾತು ಮಾತಿಗೂ ನುಲಿದಾಡುವ ನಿವೇದಿತಾ ಗೌಡ ಈ ವಾರ ಫುಲ್ ಸೇಫ್. ಯಾಕಂದ್ರೆ, ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ ಹೆಸರು ಯಾರ ಬಾಯಿಂದಲೂ ಬರಲೇ ಇಲ್ಲ.!

'ಬಿಗ್ ಬಾಸ್' ಮನೆಯಲ್ಲಿ ಬಾರ್ಬಿ ಡಾಲ್ ಅಂತಲೇ ಎಲ್ಲರಿಂದಲೂ ಕರೆಯಿಸಿಕೊಳ್ಳುವ ನಿವೇದಿತಾ ಗೌಡ ಮೊದಲ ವಾರ ಡೇಂಜರ್ ಝೋನ್ ನಲ್ಲಿದ್ದರು.

ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

Bigg Boss Kannada 5: Niveditha Gowda is safe from Week 2 nominations

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಇಷ್ಟ ಪಟ್ಟು ಬಂದಿರುವ ನಿವೇದಿತಾ ಗೌಡ, ''ನಾನು ತುಂಬಾ ಸಂತೋಷದಿಂದ ಇದ್ದೇನೆ. ನಾನು ನನ್ನ ತಂದೆ-ತಾಯಿಯನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ದಯವಿಟ್ಟು ನನ್ನನ್ನ ಆಚೆ ಕಳುಹಿಸಬೇಡಿ'' ಎಂದು ಸುದೀಪ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದ ನಿವೇದಿತಾ ಗೌಡ ಈ ವಾರ ಎಲಿಮಿನೇಷನ್ ನಿಂದ ಸುರಕ್ಷಿತವಾಗಿದ್ದಾರೆ.

ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು!

ಇಂಟ್ರೆಸ್ಟಿಂಗ್ ಅಂದ್ರೆ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ದಿವಾಕರ್, ಮೇಘ, ಸಮೀರಾಚಾರ್ಯ, ಕೃಷಿ ತಾಪಂಡ, ಜಗನ್ನಾಥ್, ಆಶಿತಾ ಚಂದ್ರಪ್ಪ, ದಯಾಳ್ ಪದ್ಮನಾಭನ್, ರಿಯಾಝ್ ಸೇರಿದಂತೆ ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ.

'ಬಿಗ್ ಬಾಸ್' ಕನ್ಯಾಮಣಿ ನಿವೇದಿತಾ ಗೌಡ ಟ್ಯಾಲೆಂಟ್ ನ ನೀವು ಒಮ್ಮೆ ನೋಡಿ!

ಅರ್ಧಕರ್ಧ ಮನೆ ನಾಮಿನೇಟ್ ಆಗಿದ್ದರೂ, ಅದರಲ್ಲಿ ನಿವೇದಿತಾ ಹೆಸರು ಬಾರದೆ ಇರುವುದು ಅಚ್ಚರಿ ಅನಿಸಿದರೂ ಅದೇ ಸತ್ಯ.

English summary
Bigg Boss Kannada 5: Niveditha Gowda is safe from Week 2 nominations.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X