»   » 'ಗೊಂಬೆ' ನಿವೇದಿತಾ ಗೌಡಗೆ ಇರುವ ದೊಡ್ಡ ಕನವರಿಕೆ ಅಂದ್ರೆ ಇದೇ.!

'ಗೊಂಬೆ' ನಿವೇದಿತಾ ಗೌಡಗೆ ಇರುವ ದೊಡ್ಡ ಕನವರಿಕೆ ಅಂದ್ರೆ ಇದೇ.!

Posted By:
Subscribe to Filmibeat Kannada
Bigg Boss Kannada Season 5 : ನಿವೇದಿತಾ ಗೌಡಗೆ ಇರೋದು ಒಂದೇ ಆಸೆ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಕಾಲಿಟ್ಟ ಕ್ಷಣದಿಂದಲೇ, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ 'ಬಾರ್ಬಿ ಡಾಲ್' ನಿವೇದಿತಾ ಗೌಡಗೆ ಸಫೋರ್ಟ್ ಮಾಡೋಕೆ ಫೇಸ್ ಬುಕ್ ನಲ್ಲಿ ಅನೇಕ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ.

ಸದ್ಯ, ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ನಿವೇದಿತಾ ಗೌಡ ಬಚಾವ್ ಆಗ್ತಾರಾ ಇಲ್ವಾ ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ, 'ಗೊಂಬೆ' ನಿವೇದಿತಾ ಗೌಡಗೆ ಒಂದು ದೊಡ್ಡ ಕನವರಿಕೆ ಇದೆ. ಅದೇನಪ್ಪಾ ಅಂದ್ರೆ....

ಆರ್.ಜೆ ಆಗಬೇಕಂತೆ ನಿವೇದಿತಾ ಗೌಡ.!

ರೇಡಿಯೋ ಜಾಕಿ ಆಗಬೇಕು ಎಂಬ ಬಯಕೆ ನಿವೇದಿತಾ ಗೌಡಗಿದೆ. ರೇಡಿಯೋ ಕಾರ್ಯಕ್ರಮಗಳನ್ನು ಇಷ್ಟ ಪಡುವ ನಿವೇದಿತಾಗೆ ಆರ್.ಜೆ ಆಗಬೇಕು ಎಂಬ ಆಸೆ ಇದೆ.

'ಬಿಗ್ ಬಾಸ್' ಕನ್ಯಾಮಣಿ ನಿವೇದಿತಾ ಗೌಡ ಟ್ಯಾಲೆಂಟ್ ನ ನೀವು ಒಮ್ಮೆ ನೋಡಿ!

ವಾಯ್ಸ್ ಕಳುಹಿಸಿದ್ದರಂತೆ.!

ಆರ್.ಜೆ ಆಯ್ಕೆ ಪ್ರಕ್ರಿಯೆಗಾಗಿ ಎಫ್.ಎಂ ಒಂದಕ್ಕೆ, ನಿವೇದಿತಾ ಗೌಡ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸಿದ್ದರಂತೆ. ಆದ್ರೆ, ನಂತರ ರೇಡಿಯೋ ಕಡೆಯವರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಿವೇದಿತಾ ಕೂಡ ಗಮನಹರಿಸಲಿಲ್ಲವಂತೆ.

ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು!

ವಾಯ್ಸ್ ಚೆನ್ನಾಗಿದೆ ಎಂದ ರಿಯಾಝ್

ರೇಡಿಯೋ ಕ್ಷೇತ್ರದಲ್ಲಿಯೇ ಖ್ಯಾತಿ ಗಳಿಸಿರುವ ರಿಯಾಝ್ ಕೂಡ ನಿವೇದಿತಾ ದನಿ ಚೆನ್ನಾಗಿದೆ ಅಂತ ಹೇಳಿದರು.

ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

ಅಚ್ಚರಿ ಪಡಬೇಡಿ

''ರೇಡಿಯೋಗೆ ನಿನ್ನ ವಾಯ್ಸ್ ಸೂಕ್ತ ಇದೆ. ರೇಡಿಯೋ ಜಾಕಿಗಾಗಿ ಎಷ್ಟೋ ಜನರನ್ನ ನಾನು ಸೆಲೆಕ್ಟ್ ಮಾಡಿದ್ದೇನೆ. ನಿನ್ನ ವಾಯ್ಸ್ ಸೂಟ್ ಆಗುತ್ತೆ'' ಅಂತ ರಿಯಾಝ್ ಹೇಳಿದರು. ರಿಯಾಝ್ ಆಡಿದ ಮಾತನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಮುಂದೆ ನಿವೇದಿತಾ ಗೌಡ ಆರ್.ಜೆ ಆದರೆ ಅಚ್ಚರಿ ಪಡಬೇಡಿ.

'ಮಾತಿನ ಮಲ್ಲ' ರಿಯಾಜ್ ಬಾಷಾ ಬಿಗ್ ಬಾಸ್ ಗೆ ಬರೋದಕ್ಕೆ ಮುಂಚೆ ಏನ್ಮಾಡ್ತಿದ್ರು?

English summary
Bigg Boss Kannada 5: Niveditha Gowda wants to become Radio Jockey

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X