»   » ಚಿತ್ರಗಳು: 'ಬಿಗ್ ಬಾಸ್ ಸೀಸನ್ 5' ಪ್ರೋಮೋದಲ್ಲಿ ಸುದೀಪ್ ಸಖತ್ ಸಿಂಪಲ್

ಚಿತ್ರಗಳು: 'ಬಿಗ್ ಬಾಸ್ ಸೀಸನ್ 5' ಪ್ರೋಮೋದಲ್ಲಿ ಸುದೀಪ್ ಸಖತ್ ಸಿಂಪಲ್

Posted By:
Subscribe to Filmibeat Kannada
Bigg Boss Season 5 promo shoot making photos in the video | FIlmibeat Kannada

'ಬಿಗ್ ಬಾಸ್' ಸಮಯ ಮತ್ತೆ ಹತ್ತಿರಕ್ಕೆ ಬಂದಿದೆ. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಹೊಸ ಸೀಸನ್ ಸದ್ಯದಲ್ಲಿಯೇ ಶುರುವಾಗಲಿದೆ. ಅಂದಹಾಗೆ, ಸದ್ಯ ಈ ಕಾರ್ಯಕ್ರಮದ ಪ್ರೋಮೋ ಚಿತ್ರೀಕರಣ ನಡೆದಿದೆ.

ನಟ ಸುದೀಪ್ ಈ ಬಾರಿಯೂ 'ಬಿಗ್ ಬಾಸ್' ಕಾರ್ಯಕ್ರಮದ ಸಾರಥಿ ಆಗಿದ್ದು, ಅವರ ಪ್ರೋಮೋ ಶೂಟ್ ಕಂಪ್ಲೀಟ್ ಆಗಿದೆ. ಈ ಬಾರಿಯ ಸೀಸನ್ ತುಂಬ ನಿರೀಕ್ಷೆಯನ್ನು ಹುಟ್ಟಿಸಿದೆ. ಆ ಕಾರಣದಿಂದ ಪ್ರೋಮೋ ಶೂಟಿಂಗ್ ನಿಂದಲೇ ವಿಭಿನ್ನತೆಯನ್ನು ಕಾಯ್ದುಕೊಳ್ಳಲಾಗಿದೆ. ಸದ್ಯ 'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮ ಪ್ರೋಮೋ ಚಿತ್ರೀಕರಣದ ಕೆಲ ಮೇಕಿಂಗ್ ಪೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ಮುಂದೆ ಓದಿ...

ಪ್ರೋಮೋ ಚಿತ್ರೀಕರಣ

'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮದ ಪ್ರೋಮೋ ಶೂಟ್ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. 'ದಿ ವಿಲನ್' ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನಲ್ಲಿದ್ದ ಕಿಚ್ಚ ಸುದೀಪ್ ಅಲ್ಲಿಂದ ನೇರವಾಗಿ ಬಿಗ್ ಬಾಸ್ ಪ್ರೋಮೋ ಶೂಟ್ ನಲ್ಲಿ ಭಾಗವಹಿಸಿದ್ರು.

ಪರಮೇಶ್ವರ ಗುಂಡ್ಕಲ್ ನಿರ್ದೇಶನ

'ಬಿಗ್ ಬಾಸ್ ಕನ್ನಡ' ಸೀಸನ್ 5 ಪ್ರೋಮೋಗೆ 'ಕಲರ್ಸ್ ಕನ್ನಡ' ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡಿದ್ದಾರೆ.

ಸಿಂಪಲ್ ಕಿಚ್ಚ

ಪ್ರೋಮೋ ದಲ್ಲಿ ಸುದೀಪ್ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ 'ಬಿಗ್ ಬಾಸ್' ನಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿದ್ದು, ಅದೇ ಥೀಮ್ ಮೇಲೆ ಪ್ರೋಮೋ ಶೂಟ್ ಮಾಡಲಾಗಿದೆ.

ಮಾರ್ಕೆಟ್ ನಲ್ಲಿ ಕಿಚ್ಚ

ಪ್ರೋಮೋ ಚಿತ್ರೀಕರಣವನ್ನು ಮಾರ್ಕೆಟ್ ನಲ್ಲಿ ಮಾಡಿದ್ದು, ಸುದೀಪ್ ತಮ್ಮ ಸ್ಟೈಲ್ ಮೂಲಕ ಮಿಂಚಿದ್ದಾರೆ.

ವಿಡಿಯೋ: ಸದ್ದಿಲ್ಲದೇ ನಡೆದಿದೆ 'ಬಿಗ್ ಬಾಸ್ ಕನ್ನಡ-5' ಪ್ರೋಮೋ ಶೂಟ್

ಯಾವಾಗ ಶುರು..?

'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮ ಯಾವಾಗ ಶುರು ಎಂಬುದು ಇನ್ನೂ ಅಧಿಕೃತವಾಗಿ ತಿಳಿದಿಲ್ಲ. ಆದರೆ ಇದೇ ತಿಂಗಳು 23 ಅಥವಾ ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿದೆ ಎಂಬ ಸುದ್ದಿ ಇದೆ.

'ಬಿಗ್ ಬಾಸ್' ಪ್ರೋಮೋ ಶೂಟ್ ಗೆ ತಯಾರಿ, ಹೇಗಿರುತ್ತೆ 'ಸೀಸನ್-5' ಟೀಸರ್?

ಸ್ಪರ್ಧಿಗಳ ಆಯ್ಕೆ ಪ್ರಗತಿಯಲ್ಲಿದೆ

ಇನ್ನು 5ನೇ ಆವೃತ್ತಿಯಲ್ಲಿ ಭಾಗವಹಿಸುವ ಸ್ಫರ್ದಿಗಳ ಆಯ್ಕೆಯಲ್ಲಿ ತೊಡಗಿಕೊಂಡಿರುವ ಬಿಗ್ ಬಾಸ್ ತಂಡ, ಈಗಾಗಲೇ ಸ್ಪರ್ಧಿಗಳನ್ನ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಕೇವಲ ಒಂದು ತಿಂಗಳು ಮಾತ್ರ ಕಾಲಾವಕಾಶವಿದ್ದು, ಆಯ್ಕೆಯಾಗಿರುವ ಸೆಲೆಬ್ರಿಟಿ ಮತ್ತು ಕಾಮನ್ ಮ್ಯಾನ್ ಗಳ ವಿವರವನ್ನು ಗೌಪ್ಯವಾಗಿಡಲಾಗಿದೆ.

English summary
Check out pictures : 'Bigg Boss Kannada Season 5' Sudeep's promo shoot making photos.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada