»   » ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?

ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಚಂದನ್ ಶೆಟ್ಟಿಗೆ ಶ್ರುತಿ ಪ್ರಕಾಶ್ ಮೇಲೆ ಲವ್ವಾಗಿದೆ

ಇತ್ತೀಚೆಗಷ್ಟೇ ''ನನಗೆ ಲವ್ ಆಗುವ ಹಾಗೆ ಕಾಣುತ್ತಿದೆ'' ಎಂದು ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. 'ದೊಡ್ಮನೆ'ಯಲ್ಲಿ ಲೈಟ್ ಆಫ್ ಮಾಡಿದ್ಮೇಲೆ ಆಶಿತಾ, ಜಗನ್ ಮತ್ತು ಕೃಷಿ ಜೊತೆ ಮಾತನಾಡುವಾಗ ಚಂದನ್ ಶೆಟ್ಟಿ ತಮಗೆ ಲವ್ ಆಗುತ್ತಿದೆ ಅಂತ ಬಾಯ್ಬಿಟ್ಟಿದ್ದರು.

ಚಂದನ್ ಶೆಟ್ಟಿ ಲವ್ ಮಾಡುತ್ತಿರುವ ಹುಡುಗಿ ಯಾರು ಅಂತ ಇದೀಗ ನಟಿ ಅನುಪಮಾ ಗೌಡ ಬಾಯ್ಬಿಟ್ಟಿದ್ದಾರೆ.

'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.!

'ಬಿಗ್ ಬಾಸ್' ಸ್ಪರ್ಧಿಯಾಗಿರುವ ಶ್ರುತಿ ಪ್ರಕಾಶ್ ಮೇಲೆ ಚಂದನ್ ಶೆಟ್ಟಿಗೆ ಲವ್ ಆಗಿದ್ಯಂತೆ. ಹಾಗಂತ ಅನುಪಮಾ ಗೌಡ ಏನೋ ಹೇಳಿಬಿಟ್ಟರು. ಅದಕ್ಕೆ ಶ್ರುತಿ ಪ್ರಕಾಶ್ ಪ್ರತಿಕ್ರಿಯೆ ಹೇಗಿತ್ತು ಅಂದ್ರೆ....

ಚಂದನ್ ಶೆಟ್ಟಿ ಲವ್ ಮ್ಯಾಟರ್

ಗಾರ್ಡನ್ ಏರಿಯಾದಲ್ಲಿ 'ಬೂಟಾಟಿಕೆ' ಟಾಸ್ಕ್ ನಡೆಯುತ್ತಿದ್ದರೆ, ಲಿವಿಂಗ್ ಏರಿಯಾದಲ್ಲಿ ಚಂದನ್ ಶೆಟ್ಟಿ ಲವ್ ಮ್ಯಾಟರ್ ಬಗ್ಗೆ ಮಾತುಕತೆ ನಡೆಯುತ್ತಿತ್ತು.

ಅನುಪಮಾ ಗೌಡ ಹೇಳಿದ್ದೇನು.?

''ಶ್ರುತಿ ಪ್ರಕಾಶ್ ರನ್ನ ಚಂದನ್ ಶೆಟ್ಟಿ ಲವ್ ಮಾಡ್ತಿದ್ದಾನಂತೆ'' ಅಂತ ಅನುಪಮಾ ಗೌಡ ದಿಢೀರ್ ಅಂತ ಹೇಳಿಬಿಟ್ಟರು.

'ಬಿಗ್ ಬಾಸ್' ಬೆಡಗಿ ಶ್ರುತಿ ಪ್ರಕಾಶ್ ಗೆ ಬಾಯ್ ಫ್ರೆಂಡ್ ಇದ್ದಾರಾ.?

ಶ್ರುತಿ ಪ್ರಕಾಶ್ ಪ್ರತಿಕ್ರಿಯೆ ಹೇಗಿತ್ತು.?

''ಚಂದನ್ ಶೆಟ್ಟಿ ನನ್ನನ್ನ ಇಷ್ಟ ಪಡುತ್ತಿದ್ದಾನೆ ಅಂತ ಹೇಳಿದ್ದ. ಇಷ್ಟ ಅಂದ್ರೆ ಅದಕ್ಕೆ ಬೇರೆ ಬೇರೆ ಅರ್ಥ ಇರುತ್ತೆ'' ಅಂತ ಶ್ರುತಿ ಪ್ರಕಾಶ್ ಹೇಳುವಷ್ಟರಲ್ಲಿ, ''ನಾನು ಶ್ರುತಿಯನ್ನ ಇಷ್ಟ ಪಡುತ್ತಿದ್ದೇನೆ. ಆದ್ರೆ, ಅವಳು (ಶ್ರುತಿ) ಜೆಕೆ ನ ಇಷ್ಟ ಪಡುತ್ತಿದ್ದಾಳೆ'' ಅಂತ ಚಂದನ್ ಶೆಟ್ಟಿ ಹೇಳಿಬಿಟ್ಟರು.

ಗರಂ ಆದ ಶ್ರುತಿ

ಚಂದನ್ ಶೆಟ್ಟಿ ಆಡಿದ ಮಾತಿಗೆ, ''ಹಲೋ... ಇದ್ಯಾವಾಗ ಆಯ್ತು.? ನಿಜವಾಗಲೂ ಹೊಡೆಯುತ್ತೇನೆ ನಿನಗೆ. ಆ ತರಹ ನಿಜವಾಗಲೂ ಏನೂ ಇಲ್ಲ. ಇಷ್ಟ ಅಂದ್ರೆ ಅದಕ್ಕೆ ಬೇರೆ ಬೇರೆ ಅರ್ಥ ಇರುತ್ತೆ. ಇಷ್ಟ ಅಂದ್ರೆ ಪ್ರೀತಿ ಅಂತಲೇ ಹೇಳಬೇಕಾಗಿಲ್ಲ'' ಅಂತ ಶ್ರುತಿ ಪ್ರಕಾಶ್ ಸ್ಪಷ್ಟನೆ ನೀಡಿದರು.

ಅಲ್ಲೇ, ಟಾಪಿಕ್ ಮುಕ್ತಾಯ

ಈ ವಿಚಾರದ ಬಗ್ಗೆ ಮಾತನಾಡಲು ಶ್ರುತಿಗೆ ಇಷ್ಟ ಇಲ್ಲ ಅಂತ ಮನೆಯ ಸದಸ್ಯರ ಅರಿವಿಗೆ ಬಂದ ಕೂಡಲೆ ಟಾಪಿಕ್ ಅಲ್ಲೇ ಕ್ಲೋಸ್ ಆಯ್ತು.

English summary
Bigg Boss Kannada 5: Week 3: Rapper Chandan Shetty likes Shruti Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X