»   » ಚಂದನ್ ಮಾಡ್ತಿರೋದು ಮನೆಹಾಳ ಕೆಲಸ: ಗುಂಡಿ ತೋಡಿ ಮಣ್ಣು ಹಾಕ್ತಿರೋದು ಇವರೇ.!

ಚಂದನ್ ಮಾಡ್ತಿರೋದು ಮನೆಹಾಳ ಕೆಲಸ: ಗುಂಡಿ ತೋಡಿ ಮಣ್ಣು ಹಾಕ್ತಿರೋದು ಇವರೇ.!

Posted By:
Subscribe to Filmibeat Kannada
ಚಂದನ್ ಮಾಡ್ತಿರೋದು ಮನೆಹಾಳ ಕೆಲಸ: ಗುಂಡಿ ತೋಡಿ ಮಣ್ಣು ಹಾಕ್ತಿರೋದು ಇವರೇ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಕಾಮನ್ ಮ್ಯಾನ್ ಸ್ಪರ್ಧಿಗಳು ಎಂಬ ಎರಡು ಗುಂಪುಗಳಿದ್ದವು. ಆದ್ರೀಗ, ಈ ಲೆಕ್ಕಾಚಾರ ಬದಲಾಗಿದೆ.

ಕಾಮನ್ ಮ್ಯಾನ್ ಸ್ಪರ್ಧಿಗಳ ಪೈಕಿ ಸದ್ಯ ಭಿನ್ನರಾಗ ಕೇಳಿ ಬರುತ್ತಿದೆ. ಒಂದ್ಕಡೆ ಚಂದನ್ ಶೆಟ್ಟಿ ಹಾಗೂ ದಿವಾಕರ್ ಆತ್ಮೀಯವಾಗಿದ್ದರೆ, ಇನ್ನೊಂದ್ಕಡೆ ರಿಯಾಝ್ ಮತ್ತು ಸಮೀರಾಚಾರ್ಯ ಸ್ನೇಹಿತರಂತಿದ್ದಾರೆ. ಅತ್ತ ಜಯಶ್ರೀನಿವಾಸನ್ ಹಾಗೂ ರಿಯಾಝ್ ಜೊತೆ ದಿವಾಕರ್ ಕಿತ್ತಾಟ ಮಾಡಿಕೊಂಡಿದ್ದರೆ, ಇತ್ತ ರಿಯಾಝ್ ಮೇಲೆ ಚಂದನ್ ಶೆಟ್ಟಿ ಮುನಿಸಿಕೊಂಡಿದ್ದಾರೆ.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಇವೆಲ್ಲವನ್ನೂ ನೋಡಿದ್ಮೇಲೆ, ರಿಯಾಝ್ ಮತ್ತು ಜಯಶ್ರೀನಿವಾಸನ್ ಇನ್ನಷ್ಟು ಹತ್ತಿರವಾಗಿದ್ದಾರೆ. ಚಂದನ್ ಶೆಟ್ಟಿ ಹಾಗೂ ದಿವಾಕರ್ ತಮಗೆ 'ಗುಂಡಿ ತೋಡಿ ಮಣ್ಣು ಹಾಕುತ್ತಿದ್ದಾರೆ' ಎಂಬ ಹೇಳಿಕೆಯನ್ನ ಜಯಶ್ರೀನಿವಾಸನ್ ನೀಡಿದ್ದಾರೆ. ಮುಂದೆ ಓದಿರಿ...

ಮನೆಹಾಳ ಕೆಲಸ

''ರಿಯಾಝ್ ಗೇಮ್ ಆಡುತ್ತಿದ್ದಾರೆ. ಸ್ಟ್ರಾಟೆಜಿ ಮಾಡುತ್ತಿದ್ದಾರೆ. ನೀವು ಅವರ ಪ್ರಭಾವಕ್ಕೆ ಒಳಗಾಗಬೇಡಿ'' ಎಂದು ಜಯಶ್ರೀನಿವಾಸನ್ ಗೆ ಚಂದನ್ ಶೆಟ್ಟಿ ಹೇಳಿದ್ರಂತೆ. ಆ ಮಾತನ್ನ ರಿಯಾಝ್ ಮುಂದೆ ಜಯಶ್ರೀನಿವಾಸನ್ ಹೇಳಿದಾಗ, ''ಇದು ಎಷ್ಟು ಮನೆಹಾಳ ಕೆಲಸ. ನನಗೆ ರೂಲ್ಸ್ ಅಂದ್ರೆ ರೂಲ್ಸ್. ನಾನು ಯಾರನ್ನೂ ಬಿಡುವುದಿಲ್ಲ'' ಎಂದು ರಿಯಾಝ್ ಗುಡುಗಿದರು.

'ಗೋಮುಖ ವ್ಯಾಘ್ರ' ರಿಯಾಝ್ ಔಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ.!

ಚಂದನ್ ಗೆ ಉರಿ

''ನೀವು (ಜಯಶ್ರೀನಿವಾಸನ್) ಚೇಂಜ್ ಆಗಿರುವುದಕ್ಕೆ ಅವನಿಗೆ ಉರಿದು ಹೋಗಿದೆ'' ಎಂದು ರಿಯಾಝ್ ಹೇಳಿದ್ದಕ್ಕೆ, ''ಇಷ್ಟು ದಿನ ಇದ್ದ ಜಯಶ್ರೀನಿವಾಸನ್ ಈಗ ಇಲ್ಲ ಅಂತ ನಾನು ಹೇಳ್ಬಿಟ್ಟಿದ್ದೀನಿ'' ಎಂದು ಜಯಶ್ರೀನಿವಾಸನ್ ಹೇಳಿದರು.

ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

ಗುಂಡಿ ತೋಡುತ್ತಿರುವುದು ಯಾರು.?

''ಶನಿವಾರ ಐಕ್ಯತೆ ಬಗ್ಗೆ ಮಾತನಾಡಿದರು. ಅಂಥವರ (ಚಂದನ್ ಶೆಟ್ಟಿ, ದಿವಾಕರ್) ಬಳಿ ನಾವು ಗುಂಡಿ ತೋಡಿಸಿಕೊಂಡಿದ್ದೇವೆ. ಅವರೇ ನಮಗೆ ಗುಂಡಿ ತೋಡಿರುವುದು. ಗುಂಡಿ ತೋಡಿ, ನಮ್ಮ ಮೇಲೆ ಮಣ್ಣು ಹಾಕುತ್ತಿದ್ದಾರೆ. ಅದರ ಬದಲು ನಾಮಿನೇಟ್ ಮಾಡಿ, ಮನೆಗೆ ಕಳುಹಿಸಿದರೆ ವಾಸಿ'' ಎಂದರು ಜಯಶ್ರೀನಿವಾಸನ್.

ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ.!

ಯಾರ ತಪ್ಪು.?

''ಪ್ರತಿ ವಾರ ನಾನು ನಾಮಿನೇಟ್ ಆಗುತ್ತಿದ್ದೇನೆ, ಖುಷಿ ನನಗೆ. ಪ್ರತಿಯೊಂದಕ್ಕೂ ಪ್ರೋತ್ಸಾಹ ಮಾಡಿ, ನಮ್ಮ ಫ್ರೆಂಡ್ಸ್ ಅಂತ ಪರ ವಹಿಸುವುದು ನಮ್ಮ ತಪ್ಪು. ಇನ್ಮೇಲೆ ಏನನ್ನೂ ಮಾಡಲ್ಲ'' ಅಂತ ರಿಯಾಝ್ ಹೇಳಿದ್ದಾರೆ.

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ಯಾರು ಸರಿ, ಯಾರು ತಪ್ಪು.?

ಜಯಶ್ರೀನಿವಾಸನ್ ಹಾಗೂ ರಿಯಾಝ್ ಆಡಿದ ಮಾತುಗಳು ಸರಿ ಅಂತ ನಿಮಗೆ ಅನ್ಸುತ್ತಾ.? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 7: Riyaz and Jayasreenivasan speaks about Chandan and Diwakar's strategy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada