»   » ದಿವಾಕರ್ ಗೆ ಕ್ಲಾಸ್ ಲೆಸ್ ಈಡಿಯೆಟ್ ಎಂದ ರಿಯಾಝ್.!

ದಿವಾಕರ್ ಗೆ ಕ್ಲಾಸ್ ಲೆಸ್ ಈಡಿಯೆಟ್ ಎಂದ ರಿಯಾಝ್.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲೆರಡು ವಾರ ಅಣ್ಣ-ತಮ್ಮನಂತೆ ಇದ್ದ ರಿಯಾಝ್ ಹಾಗೂ ದಿವಾಕರ್ ಈಗ ವಿರೋಧಿಗಳಾಗಿಬಿಟ್ಟಿದ್ದಾರೆ. ರಿಯಾಝ್ ಕಂಡ್ರೆ ದಿವಾಕರ್ ಗೆ ಆಗಲ್ಲ. ದಿವಾಕರ್ ಮುಖ ನೋಡಿದ್ರೆ ರಿಯಾಝ್ ಗೆ ಆಗ್ಬರಲ್ಲ.

ಕಳೆದ ಮೂರ್ನಾಲ್ಕು ವಾರಗಳಲ್ಲಿ ದಿವಾಕರ್ ಹಾಗೂ ರಿಯಾಝ್ ಮಧ್ಯೆ ಅನೇಕ ಬಾರಿ ವಾಕ್ಸಮರ ನಡೆದಿದೆ. ಈ ವಾರ ಕೂಡ ನಾಮಿನೇಷನ್ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಅದೇ ಆಯ್ತು.!

ಕ್ಯಾಪ್ಟನ್ ಆಗಿದ್ದ ರಿಯಾಝ್, ದಿವಾಕರ್ ರವರನ್ನ ನೇರವಾಗಿ ನಾಮಿನೇಟ್ ಮಾಡಿದರು. ದಿವಾಕರ್ ರವರನ್ನ ನಾಮಿನೇಟ್ ಮಾಡುವಾಗ, ''ನನಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಡಲು ಎಲ್ಲರೂ ಒಪ್ಪಿಕೊಂಡರು. ಆದ್ರೆ, ಸಮೀರಾಚಾರ್ಯ ಅವರಿಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಡಬೇಕು ಅಂತ ದಿವಾಕರ್ ಹೇಳಿದರು. ಆಮೇಲೆ ಯಾರೂ ಇಲ್ಲದ ಸಮಯದಲ್ಲಿ ಬಂದು ನನ್ನನ್ನ ತಬ್ಬಿಕೊಂಡು, ಕ್ಷಮಿಸಿ, ಬೇಜಾರು ಮಾಡಿಕೊಳ್ಳಬೇಡಿ, ತಪ್ಪು ತಿಳಿದುಕೊಳ್ಳಬೇಡಿ ಅಂತ ಹೇಳಿದರು. ಅದು ಯಾರಿಗೂ ಗೊತ್ತಾಗಲಿಲ್ಲ. ಇಂತಹ ಆಟ ಬೇಡ. ಏನಿದ್ದರೂ ನೇರವಾಗಿ ಆಡಿ'' ಎಂಬ ಕಾರಣ ಕೊಟ್ಟರು ರಿಯಾಝ್. ಮುಂದೆ ಓದಿರಿ...

ರಿಯಾಝ್ ಕೊಟ್ಟ ಕಾರಣ ದಿವಾಕರ್ ಗೆ ಇಷ್ಟ ಆಗಲಿಲ್ಲ.!

ದಿವಾಕರ್ ಹಿಂದೆ ಒಂಥರಾ, ಮುಂದೆ ಒಂಥರಾ ಇರುತ್ತಾರೆ ಎಂದು ರಿಯಾಝ್ ಹೇಳಿದ ಮಾತು ದಿವಾಕರ್ ಗೆ ಇಷ್ಟ ಆಗಲಿಲ್ಲ. ಹೀಗಾಗಿ ರಿಯಾಝ್ ವಿರುದ್ದ ದಿವಾಕರ್ ಸಿಡಿದೆದ್ದರು.

ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?

ದಿವಾಕರ್ ಹೇಳಿದ್ದೇನು.?

''ಏನೇ ಇದ್ದರೂ ಎದುರುಗಡೆ ಮಾತನಾಡುತ್ತೇನೆ. ಆ ತರಹ ಬುದ್ಧಿ ನಿಮಗೆ ಇದೆ. ನನಗೆ ಇಲ್ಲ. ಕೊಟ್ಟ ಕಾರಣ ಸರಿಯಿಲ್ಲ. ಡಬ್ಬ ತರಹ ಇದೆ. ನಾಮಿನೇಷನ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದ್ರೆ, ಕೆಲಸಕ್ಕೆ ಬಾರದ ಕಾರಣ ಕೊಟ್ಟರು. ಬರೀ ತಲೆಗೆ ಹುಳ ಬಿಡುತ್ತಾರೆ. ಅವರಿವರ ತಲೆ ಕೆಡಿಸುತ್ತಾರೆ. ಬರೀ ಡವ್ ಮಾಡ್ತಾರೆ. ಅವರ ಮಾತನ್ನ ನಂಬಬಾರದು'' ಎನ್ನುವ ಬೆಂಕಿ ಉಂಡೆಗಳನ್ನುಗುಳಿದರು ದಿವಾಕರ್.

'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

ಕ್ಲಾಸ್ ಲೆಸ್ ಈಡಿಯೆಟ್ ಎಂದ ರಿಯಾಝ್

ದಿವಾಕರ್ ಮಾತುಗಳಿಗೆ ಮೊದಮೊದಲು ಪ್ರತಿಕ್ರಿಯೆ ಕೊಡದ ರಿಯಾಝ್ ಬಳಿಕ, ''ಕ್ಲಾಸ್ ಲೆಸ್ ಈಡಿಯೆಟ್ ಅಂತಾರಲ್ಲ ಅದು ಇವರೇ.! ಸ್ಟುಪಿಡ್ ಫೆಲೋ...'' ಎಂದು ದಿವಾಕರ್ ಗೆ ಬೈಯ್ದರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಸ್ಕೌಂಡ್ರೆಲ್ ಎಂದ ದಿವಾಕರ್

ಅದಕ್ಕೆ ದಿವಾಕರ್ ಕೂಡ, ''ಸ್ಕೌಂಡ್ರೆಲ್ ತಾವೇ... ಯಾಮಾರಿಸುವುದು, ತಲೆಗೆ ಹುಳ ಬಿಡುವುದು, ತಂದಿಡುವುದು, ದೂರ ಮಾಡುವುದು ಎಲ್ಲ ನೀವೇ'' ಎಂದು ತಿರುಗಿಬಿದ್ದರು. ಇಬ್ಬರ ಜಗಳ ಎಲ್ಲಿಯವರೆಗೂ ಹೋಗಿ ತಲುಪುತ್ತೋ, ದೇವರೇ ಬಲ್ಲ.

English summary
Bigg Boss Kannada 5: Week 11: Riyaz Basha calls Diwakar as Classless Idiot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X