For Quick Alerts
  ALLOW NOTIFICATIONS  
  For Daily Alerts

  ರನ್ನರ್ ಅಪ್ ಆದ ದಿವಾಕರ್ ಗೆ ಸಿಕ್ಕ ಬಹುಮಾನ ಇದೇ.!

  By Harshitha
  |
  ರನ್ನರ್ ಅಪ್ ಆದ ದಿವಾಕರ್ ಗೆ ಸಿಕ್ಕ ಬಹುಮಾನ ಇದೇ | Filmibeat Kannada

  ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿದು ಹೋಗಿದೆ. ಹದಿನೈದು ವಾರಗಳ 'ಬಿಗ್ ಬಾಸ್' ಶೋ ಸಮಾಪ್ತಿ ಆಗಿದೆ. ಕನ್ನಡ Rapper ಚಂದನ್ ಶೆಟ್ಟಿ ಈ ಬಾರಿ ವಿಜೇತರಾಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

  ಜನಸಾಮಾನ್ಯರಿಗೆ ಈ ಬಾರಿ ಅವಕಾಶ ಕಲ್ಪಿಸಿದ್ದರಿಂದ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ದಿವಾಕರ್ ಗೆಲ್ಲಬಹುದು ಎಂಬ ಊಹೆ ಕೆಲವರಿಗೆ ಇತ್ತು. ಆದ್ರೆ, ಸೆಲೆಬ್ರಿಟಿ ಕಂಟೆಸ್ಟೆಂಟ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಹೋಗಿ, ಜನಸಾಮಾನ್ಯನಂತೆ, ಜನಸಾಮಾನ್ಯರ ಜೊತೆ ಸ್ನೇಹ ಬೆಳೆಸಿದ್ದ ಚಂದನ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ.

  ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದಾರೆ. ಎರಡನೇ ಸ್ಥಾನ ಗಿಟ್ಟಿಸಿಕೊಂಡ ದಿವಾಕರ್ ಗೆ 'ಬಿಗ್ ಬಾಸ್' ಕಡೆಯಿಂದ ಸಿಕ್ಕ ಬಹುಮಾನ ಏನು.? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ...

  ವ್ಯಾಸಲೀನ್ ಕಡೆಯಿಂದ ಬಹುಮಾನ

  ವ್ಯಾಸಲೀನ್ ಕಡೆಯಿಂದ ಬಹುಮಾನ

  105 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಇದ್ದ ದಿವಾಕರ್ ಅವರಿಗೆ ವ್ಯಾಸಲೀನ್ ಕಡೆಯಿಂದ ಗಿಫ್ಟ್ ಹ್ಯಾಂಪರ್ ಲಭಿಸಿತು.

  ದಿವಾಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ ಲೀಕ್ ಆಗಿದೆ.! ಇದು ಸತ್ಯವೋ.? ಸುಳ್ಳೋ.?

  ರನ್ನರ್ ಅಪ್ ಟ್ರೋಫಿ

  ರನ್ನರ್ ಅಪ್ ಟ್ರೋಫಿ

  ಎರಡನೇ ಸ್ಥಾನ ಪಡೆದ ದಿವಾಕರ್ 'ರನ್ನರ್ ಅಪ್' ಟ್ರೋಫಿಯನ್ನ ಎತ್ತಿ ಹಿಡಿದರು.

  ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ

  ಒಂದು ಲಕ್ಷ ರೂಪಾಯಿ

  ಒಂದು ಲಕ್ಷ ರೂಪಾಯಿ

  'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಎರಡನೇ ಸ್ಥಾನ ಪಡೆದ ದಿವಾಕರ್ ಗೆ 'ಸೆರಾ' ಕಡೆಯಿಂದ ಬಹುಮಾನದ ರೂಪದಲ್ಲಿ ಒಂದು ಲಕ್ಷ ರೂಪಾಯಿ ನೀಡಲಾಯ್ತು.

  ದಿವಾಕರ್ ಗೆ ಸೂಟ್

  ದಿವಾಕರ್ ಗೆ ಸೂಟ್

  ''ಕೋಟು ಸೂಟು ಬೂಟು ಎಲ್ಲ ತೆಗೆದುಕೊಂಡು ಹೋಗಬಹುದಾ'' ಅಂತ 'ಬಿಗ್ ಬಾಸ್' ಗೆ ದಿವಾಕರ್ ಕೇಳಿಕೊಳ್ಳುತ್ತಿದ್ದರು. ಹೀಗಾಗಿ, ಫಿನಾಲೆ ದಿನ ದಿವಾಕರ್ ಧರಿಸಿದ್ದ ಸೂಟ್ ನ ತಮ್ಮ ಬಳಿಯೇ ಇಟ್ಟುಕೊಳ್ಳಲು ಸುದೀಪ್ ಅನುಮತಿ ನೀಡಿದರು.

  ದಿವಾಕರ್ ಏನಂದರು.?

  ದಿವಾಕರ್ ಏನಂದರು.?

  ''ಚಂದನ್ ಶೆಟ್ಟಿ ವಿನ್ ಆಗಿದ್ದಕ್ಕೆ ಹಾಗೂ 106 ದಿನಗಳ ಕಾಲ ಕನ್ನಡಿಗರು ನನ್ನ ಉಳಿಸಿದ್ದಕ್ಕೆ ನನಗೆ ತುಂಬಾ ಸಂತೋಷ ಆಗುತ್ತಿದೆ'' ಎಂದರು ದಿವಾಕರ್.

  English summary
  Bigg Boss Kannada 5 Runner Diwakar gets 1 lakh prize money and a Trophy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X