»   » 'ಬಿಗ್ ಬಾಸ್' ಮನೆಯಲ್ಲಿ ಸಹನೆಯ ಕಟ್ಟೆ ಒಡೆದು ಸಿಟ್ಟಿಗೆದ್ದ ಸಮೀರಾಚಾರ್ಯ.!

'ಬಿಗ್ ಬಾಸ್' ಮನೆಯಲ್ಲಿ ಸಹನೆಯ ಕಟ್ಟೆ ಒಡೆದು ಸಿಟ್ಟಿಗೆದ್ದ ಸಮೀರಾಚಾರ್ಯ.!

Posted By:
Subscribe to Filmibeat Kannada

ಯಾರು ಏನೇ ಅಂದರೂ... ಇಷ್ಟು ದಿನ ತಾಳ್ಮೆಯಿಂದ ಇದ್ದ ಸಮೀರಾಚಾರ್ಯ ರವರ ಸಹನೆಯ ಕಟ್ಟೆ ನಿನ್ನೆ ಒಡೆಯಿತು.

'ಒಗ್ಗಟ್ಟಿನಲ್ಲಿ ಬಲವಿದೆ' ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರ ಶರ್ಟ್ ನ ಜಗನ್ ಹರಿದು ಹಾಕಿದಾಗ ಸಿಟ್ಟಿಗೆದ್ದ ಸಮೀರಾಚಾರ್ಯ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

'ತಾಂಬೂಲ ಬೇಕು' ಸವಾಲಿನಲ್ಲಿ, ಹೆಚ್ಚು ಹೆಚ್ಚು ತೆಂಗಿನಕಾಯಿಯನ್ನ ತಮ್ಮ ತಂಡಕ್ಕೆ ಒದಗಿಸಿ ಕೊಡುವ ಭರದಲ್ಲಿ ಸಮೀರಾಚಾರ್ಯ ತಾಳ್ಮೆ ಕಳೆದುಕೊಂಡರು. ಮುಂದೆ ಓದಿರಿ....

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಶುಭ ಸಂದರ್ಭಗಳಲ್ಲಿ ತಾಂಬೂಲ ಕೊಡುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಸಂಪ್ರದಾಯದ ಮಹತ್ವವನ್ನು ಸಾರುವ ಉದ್ದೇಶದಿಂದ 'ತಾಂಬೂಲ ಬೇಕು' ಎಂಬ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು.

ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಕ್ಯಾಪ್ಟನ್ ಸಮೀರಾಚಾರ್ಯ.!

ತೆಂಗಿನಕಾಯಿ ಹಿಡಿಯಬೇಕಿತ್ತು

ತೆಂಗಿನಕಾಯಿಯನ್ನು ಮೇಲಿಂದ ಜಾರು ಬಂಡೆ ಮಾದರಿಯಲ್ಲಿ ನೆಟ್ ಮೇಲೆ ಹಾಕುತ್ತಿದ್ದರಿಂದ, ಅದನ್ನ ತಮ್ಮ ತಮ್ಮ ತಂಡಗಳಿಗಾಗಿ ಸದಸ್ಯರು ಹಿಡಿಯಬೇಕಿತ್ತು.

ಅನುಪಮಾ, ಶ್ರುತಿ, ಸಮೀರಾಚಾರ್ಯ: ಮೂವರಲ್ಲಿ ಉತ್ತಮ ಯಾರು.? ಕಳಪೆ ಯಾರು.?

ಸಮೀರಾಚಾರ್ಯ ರವರ ಆಕ್ರಮಣಕಾರಿ ಆಟ

ತೆಂಗಿನಕಾಯಿ ಹಿಡಿಯುವ ಆತುರದಲ್ಲಿ ಜಾರು ಬಂಡೆ ಮಾದರಿಯ ನೆಟ್ ಮೇಲೆ ಆಗಾಗ ಸಮೀರಾಚಾರ್ಯ ಬೀಳುತ್ತಿದ್ದರು. ತೆಂಗಿನಕಾಯಿ ಹಿಡಿಯುವುದರಲ್ಲಿ ಸಮೀರಾಚಾರ್ಯ ಆಕ್ರಮಣಕಾರಿ ಆದರು. ನೆಟ್ ಮೇಲೆ ಕಾಲು ಇಡುವ ಹಾಗಿಲ್ಲ ಅಂತ ರಿಯಾಝ್ ಹೇಳುತ್ತಿದ್ದರೂ, ಅದನ್ನ ಸಮೀರಾಚಾರ್ಯ ಕೇಳಲಿಲ್ಲ.

ಬ್ರಾಹ್ಮಣ ಸಂಪ್ರದಾಯವನ್ನು ಸಮೀರಾಚಾರ್ಯ ಅವಮಾನ ಮಾಡಿಲ್ಲ.!

ಬೆಟ್ಟು ಮಾಡಿದ ರಿಯಾಝ್

ಸಮೀರಾಚಾರ್ಯ ಕಾಲು ಇಟ್ಟಿದ್ದಕ್ಕೆ, ಜಗನ್ ಜಾರು ಬಂಡೆಯನ್ನು ಅಲುಗಾಡಿಸಲು ಶುರು ಮಾಡಿದರು. ಚಂದನ್ ಶೆಟ್ಟಿ ಹಾಗೂ ದಿವಾಕರ್ ಕೂಡ ನೆಟ್ ಒಳಗೆ ಕಾಲಿಟ್ಟರು, ಬಿದ್ದರು. ಹೀಗಾಗಿ, ''ಎಲ್ಲವೂ ನಿಮ್ಮಿಂದಲೇ ಶುರು ಆಗಿದ್ದು'' ಅಂತ ಸಮೀರಾಚಾರ್ಯ ಕಡೆ ರಿಯಾಝ್ ಬೆಟ್ಟು ಮಾಡಿ ತೋರಿಸಿದರು.

ತಿರುಗೇಟು ನೀಡುತ್ತಿದ್ದ ಸಮೀರಾಚಾರ್ಯ

ತೆಂಗಿನಕಾಯಿ ಹಿಡಿಯುವ ಭರದಲ್ಲಿ ಗದ್ದಲ, ಗಲಾಟೆ ಆದರೂ.... ''ಯಾರ ಅಪ್ಪ ಬಂದರೂ ಕೇಳಂಗಿಲ್ಲ'' ಎಂದು ತಿರುಗೇಟು ನೀಡುತ್ತಲೇ ತೆಂಗಿನಕಾಯಿ ಹಿಡಿಯುವ ಕಡೆ ಸಮೀರಾಚಾರ್ಯ ಗಮನ ಹರಿಸಿದರು. ಇದೇ ಗ್ಯಾಪ್ ನಲ್ಲಿ ಜಗನ್ ಹಾಗೂ ಸಮೀರಾಚಾರ್ಯ ನಡುವೆ ಮಾತಿನ ಚಕಮಕಿ ನಡೆಯಿತು.

ಟಾಸ್ಕ್ ಇರೋದೇ ಸಿಟ್ಟು ಹೊರಗೆ ಹಾಕಲು

ಟಾಸ್ಕ್ ಮುಗಿದ ಬಳಿಕ, ''ಟಾಸ್ಕ್ ಕೊಟ್ಟಿರೋದೇ ನಮ್ಮ ಸಿಟ್ಟು ಹೊರಗೆ ಹಾಕೋಕೆ. ಅದನ್ನ ನಾನು ಎಂಜಾಯ್ ಮಾಡಿ ಆಡುತ್ತೇನೆ'' ಎಂದು ಸಮೀರಾಚಾರ್ಯ ಸಮರ್ಥಿಸಿಕೊಂಡರು.

ಕಳಪೆ ಬೋರ್ಡ್ ಕೊಡುತ್ತಾರಾ ರಿಯಾಝ್.?

''ಟೀಮ್ ಎಲ್ಲ ಒಂದು ಮಾಡುತ್ತಿದ್ದರೆ, ನೀವೇ ಇನ್ನೊಂದು ಮಾಡುತ್ತಿದ್ರಿ. ಅದರಿಂದಲೇ, ಎಡವಟ್ಟು ಆಗುತ್ತಿತ್ತು. ಟೀಮ್ ಬೇಡ ಅಂತ ಹೇಳಿದ್ಮೇಲೆ, ನೀವು ಮಾಡಬಾರದಿತ್ತು. ಸಿದ್ಧವಾಗಿರಿ, ಇನ್ನೂ ನಾಳೆ ಇದೆ. ಕಳಪೆ ಬೋರ್ಡ್ ಕೊಡುವ ಹಾಗಿದ್ದರೆ, ಕೊಡುವೆ'' ಎಂದು ರಿಯಾಝ್ ಎಚ್ಚರಿಸಿದರು.

English summary
Bigg Boss Kannada 5: Week 4: Sameer Acharya becomes aggressive.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada