»   » 'ಕಳಪೆ' ಕಿತ್ತಾಟ: ಶ್ರುತಿ ಪ್ರಕಾಶ್ ಮಾಡಿದ್ದು ತಪ್ಪು ಎಂದ ಕಿಚ್ಚ ಸುದೀಪ್.!

'ಕಳಪೆ' ಕಿತ್ತಾಟ: ಶ್ರುತಿ ಪ್ರಕಾಶ್ ಮಾಡಿದ್ದು ತಪ್ಪು ಎಂದ ಕಿಚ್ಚ ಸುದೀಪ್.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಶ್ರುತಿ ಪ್ರಕಾಶ್ ಅವರದ್ದೇ ತಪ್ಪು ಅಂದ್ರು ಸುದೀಪ್ | Filmibeat Kannada

'ಮೊಟ್ಟೆ' ಸುತ್ತ ನೀಡಲಾಗಿದ್ದ ಲಕ್ಷುರಿ ಬಜೆಟ್ ಟಾಸ್ಕ್ ಮುಗಿದ ಬಳಿಕ, ಅತ್ಯುತ್ತಮ ಆಟಗಾರ ಹಾಗೂ ಕಳಪೆ ಆಟಗಾರರನ್ನು ಗುರುತಿಸುವ ಜವಾಬ್ದಾರಿ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಮೇಲಿತ್ತು.

ಇಡೀ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಹಿ ಕಹಿ ಚಂದ್ರು 'ಬೆಸ್ಟ್ ಪರ್ಫಾಮರ್' ಅಂತ ಶ್ರುತಿ ಪ್ರಕಾಶ್ ಘೋಷಿಸಿದರು. ನಂತರ ಆಟದ ವೈಖರಿ ಹಾಗೂ ನಡವಳಿಕೆ ಎರಡನ್ನೂ ಗಮನದಲ್ಲಿ ಇಟ್ಟುಕೊಂಡು ದಿವಾಕರ್ 'ಕಳಪೆ ಪ್ರದರ್ಶನ' ನೀಡಿದ್ದಾರೆ ಅಂತ ಶ್ರುತಿ ಪ್ರಕಾಶ್ ಹೇಳಿದರು.

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.

''ಆಟದಲ್ಲಿ ನಾನು ಕಳಪೆ ಪ್ರದರ್ಶನ ನೀಡಿಲ್ಲ'' ಎಂದು ವಾದಿಸಿದ ದಿವಾಕರ್, 'ಕಳಪೆ' ಬೋರ್ಡ್ ಧರಿಸಲು ಒಲ್ಲೆ ಎಂದುಬಿಟ್ಟರು. 'ಕಳಪೆ' ಬೋರ್ಡ್ ನ 'ಆಟದ ವೈಖರಿ' ಮಾತ್ರ ನೋಡಿ ಕೊಡಬೇಕೇ ಹೊರತು ನಡವಳಿಕೆ ನೋಡಿ ನೀಡುವಂಥದ್ದು ಅಲ್ಲ ಎಂಬ ಅಭಿಪ್ರಾಯವೂ 'ಬಿಗ್ ಬಾಸ್' ಮನೆಯೊಳಗೆ ವ್ಯಕ್ತವಾಯಿತು.

'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

ಯಾರು ಏನೇ ಹೇಳಿದರೂ, ದಿವಾಕರ್ 'ಕಳಪೆ' ಬೋರ್ಡ್ ಧರಿಸಲಿಲ್ಲ. ಶ್ರುತಿ ಪ್ರಕಾಶ್ ಕೂಡ ಸರಿಯಾದ ಕಾರಣ ಕೊಡಲಿಲ್ಲ. ಈ ವಿವಾದದ ಬಗ್ಗೆ ಸುದೀಪ್ ಪಂಚಾಯತಿ ನಡೆಸಿದಾಗ, ಹೇಳಿದ್ದು ಇಷ್ಟು....

'ಕಳಪೆ' ಬೋರ್ಡ್ ಬಗ್ಗೆ ಶ್ರುತಿ ಪ್ರಕಾಶ್ ಮಾತು

''ಟಾಸ್ಕ್ ಹಾಗೂ ವರ್ತನೆ ಎಲ್ಲವನ್ನೂ ನೋಡಿ 'ಕಳಪೆ' ಬೋರ್ಡ್ ಕೊಟ್ಟೆ'' ಎಂದು ಸುದೀಪ್ ಮುಂದೆ ಶ್ರುತಿ ಪ್ರಕಾಶ್ ಹೇಳಿದರು.

ಶ್ರುತಿ ಪ್ರಕಾಶ್ ಮೇಲಿದ್ದ ಅಭಿಮಾನ ಇನ್ಮುಂದೆ ವೀಕ್ಷಕರಲ್ಲಿ ಕಮ್ಮಿಯಾದ್ರೆ ಅಚ್ಚರಿ ಇಲ್ಲ.!

ನಿರ್ಧಾರ ತಪ್ಪಾಯ್ತಾ.?

''ಬಿಗ್ ಬಾಸ್' ಹೇಳಿದ್ದು ಟಾಸ್ಕ್ ನ ನೋಡಿ ಕೊಡಿ ಅಂತ. ಇದು ತಪ್ಪಾಯ್ತಾ.?'' ಎಂದು ಶ್ರುತಿ ಪ್ರಕಾಶ್ ರವರನ್ನ ಸುದೀಪ್ ಪ್ರಶ್ನಿಸಿದರು.

'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡು ಆಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

ನಡವಳಿಕೆ ನೋಡಿ ಕೊಟ್ಟಿದ್ದು ತಪ್ಪು

''ನನಗೆ ಅನಿಸಿಲ್ಲ, ನಾನು ತಪ್ಪು ಮಾಡಿದೆ ಅಂತ. ಯಾಕಂದ್ರೆ, ನಾನು ಅಂದುಕೊಂಡೆ...'' ಎಂದು ಶ್ರುತಿ ಪ್ರಕಾಶ್ ಹೇಳುವಷ್ಟರಲ್ಲಿ, ''ನಾನು ಅಂದುಕೊಂಡೆ... ಇದು ನಿಮ್ಮ ಬಾಯಲ್ಲೇ ಈಗ ಬಂದಿದ್ದು. ನಿಯಮದಲ್ಲಿ ಅದು ಇರಲಿಲ್ಲ. ರೂಲ್ ಅರ್ಥ ಆಗಲಿಲ್ಲ ಅಂದ್ರೆ, ಕೇಳಿ. ನಡವಳಿಕೆ ನೋಡಿ 'ಕಳಪೆ' ಬೋರ್ಡ್ ಕೊಟ್ಟೆ ಅಂತ ಹೇಳಿದ್ದು ತಪ್ಪು'' ಎಂದು ಸುದೀಪ್ ಹೇಳಿದರು.

'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

ದಿವಾಕರ್ ಮಾಡಿದ್ದೂ ತಪ್ಪೇ.!

''ದಿವಾಕರ್ 'ಕಳಪೆ' ಬೋರ್ಡ್ ಹಾಕಿಕೊಳ್ಳುವುದಿಲ್ಲ ಅಂತ ಹೇಳಿದ್ದು ಕೂಡ ತಪ್ಪು'' ಎಂದು ಇದೇ ಸಮಯದಲ್ಲಿ ಸುದೀಪ್ ಹೇಳಿದರು.

English summary
Bigg Boss Kannada 5: Shruti Prakash's decision was wrong says Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X