»   » 'ಬಿಗ್ ಬಾಸ್' ಮನೆಯಿಂದ ಹೊರಬಂದ ಚಂದ್ರು ಬಗ್ಗೆ ಪ್ರಥಮ್ ಹೇಳಿದ್ದೇನು.?

'ಬಿಗ್ ಬಾಸ್' ಮನೆಯಿಂದ ಹೊರಬಂದ ಚಂದ್ರು ಬಗ್ಗೆ ಪ್ರಥಮ್ ಹೇಳಿದ್ದೇನು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಸಿಹಿ ಕಹಿ ಚಂದ್ರು ಔಟ್ ಆಗಿದ್ದಾರೆ. ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿರುವುದು ಯಾರಿಗೆ ಬೇಸರ ಆಗಿದ್ಯೋ, ಇಲ್ವೋ... ಆದ್ರೆ, 'ಬಿಗ್ ಬಾಸ್ ಕನ್ನಡ-4' ವಿಜೇತ 'ಒಳ್ಳೆ ಹುಡುಗ' ಪ್ರಥಮ್ ಗೆ ಮಾತ್ರ ಸಿಕ್ಕಾಪಟ್ಟೆ ಬೇಜಾರು ಆಗಿದೆ.

''ಇವತ್ತು ನಮ್ಮ ಚಿತ್ರರಂಗವನ್ನ ಆಳುತ್ತ ಇರುವ ಎಷ್ಟೋ ಸ್ಟಾರ್ ಗಳು ನಿಮ್ಮ ಗರಡಿಯಲ್ಲಿ ಬೆಳೆದಿದ್ದು ಅಂತ ಗೊತ್ತಿದ್ರೂ, ಯಾವತ್ತೂ ಎಲ್ಲಿಯೂ ಹೇಳಿಕೊಂಡಿಲ್ಲ ನೀವು... ಇದೊಂದು ಕಾರಣಕ್ಕೆ ನನಗೆ ಬಹಳ ನೋವಿದೆ ನಿಮ್ಮ ಎಲಿಮಿನೇಷನ್. ಫೋಟೋಗೆ ಪೋಸ್ ಕೊಡಬೇಕಾದರೆ, ನಗುತಾ ಇರಬಹುದು ನಾನು. ವೈಯುಕ್ತಿಕವಾಗಿ ನೋವಿದೆ. ನಿಮ್ಮ ಮೇಲೆ ಹೆಮ್ಮೆ ಇದೆ ಸರ್'' ಎಂದು ಸಿಹಿ ಕಹಿ ಚಂದ್ರು ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.

Bigg Boss Kannada 5: Sihi Kahi Chandru eliminated, Pratham reaction

'ಬಿಗ್' ಶಾಕ್: 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್.!

ಜೊತೆಗೆ ಸಿಹಿ ಕಹಿ ಚಂದ್ರು ಜೊತೆಗೆ ಕ್ಲಿಕ್ ಮಾಡಿಕೊಂಡ ಸೆಲ್ಫಿಯನ್ನೂ ಪೋಸ್ಟ್ ಮಾಡಿದ್ದಾರೆ.

ಇಬ್ಬರು ಘಟಾನುಘಟಿಗಳು ಹೊರಬಿದ್ದಾಯ್ತು.! ಮುಂದಿನ ಟಾರ್ಗೆಟ್ ಯಾರು.?

ಅಂದ್ಹಾಗೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐವತ್ತನೇ ದಿನ ಸಂಭ್ರಮಾಚರಣೆಯಲ್ಲಿ ಪ್ರಥಮ್ ಕೂಡ ಪಾಲ್ಗೊಂಡಿದ್ದಾರೆ. ಪ್ರಥಮ್ ಜೊತೆಗೆ 'ಬಿಗ್ ಬಾಸ್ ಕನ್ನಡ-2' ವಿನ್ನರ್ ಅಕುಲ್ ಬಾಲಾಜಿ, 'ಬಿಗ್ ಬಾಸ್ ಕನ್ನಡ-3' ವಿನ್ನರ್ ಶ್ರುತಿ ಕೂಡ ಭಾಗವಹಿಸಿದ್ದಾರೆ. ಅದರ ಸಂಚಿಕೆ ಇಂದು ರಾತ್ರಿ ಪ್ರಸಾರ ಆಗಲಿದೆ.

English summary
Bigg Boss Kannada 4 Winner Pratham has taken his facebook account to express his displeasure on Sihi Kahi Chandru's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada