ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ.!
Recommended Video

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ದಿವಾಕರ್ ಮೊದಲೆರಡು ವಾರ ಹೀಗಿರಲಿಲ್ಲ.
ಮೊದಲೆರಡು ವಾರ ದಿವಾಕರ್ ರವರಲ್ಲಿ ಮುಗ್ಧತೆ ಇತ್ತು. ಸ್ವಲ್ಪ ಒರಟು ಸ್ವಭಾವ ಇದ್ದರೂ, ಅನ್ಯಾಯದ ವಿರುದ್ಧ ದನಿ ಎತ್ತುತ್ತಿದ್ದರು. ತಮ್ಮ ಆಪ್ತ ಪರ ನಿಲ್ಲುತ್ತಿದ್ದರು. ಆದ್ರೀಗ, ದಿವಾಕರ್ ಹಾಗಿಲ್ಲ.!
ಮೊದಲಿನಿಂದಲೂ ತಮ್ಮ ಪರ ಇದ್ದ ರಿಯಾಝ್ ಜೊತೆ ದಿವಾಕರ್ ಜಗಳ ಮಾಡಿಕೊಂಡಿದ್ದಾರೆ. ತಮ್ಮ 'ಗಾರ್ಡನ್ ಏರಿಯಾ' ಗುಂಪಿನಲ್ಲಿ ಇರುವ ಜಯಶ್ರೀನಿವಾಸನ್ ಜೊತೆಗೂ ಕಿತ್ತಾಡಿಕೊಂಡಿದ್ದಾರೆ. ನಿವೇದಿತಾ ಮೇಲೆ ಸುಮ್ಮನೆ ಕೋಪಿಸಿಕೊಂಡಿದ್ದಾರೆ.
ದಿವಾಕರ್ ರವರ ಈ ವರ್ತನೆ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದು ಹೀಗೆ....

ದಿವಾಕರ್-ನಿವೇದಿತಾ ನಡುವೆ ಅಗಿದ್ದೇನು.?
ಕಳೆದ ವಾರ ನಿವೇದಿತಾ ಕ್ಯಾಪ್ಟನ್ ಆಗಿದ್ದಾಗ, ನಿವೇದಿತಾ ಹಾಗೂ ದಿವಾಕರ್ ನಡುವೆ ಜಟಾಪಟಿ ನಡೆಯಿತು. ನಿವೇದಿತಾ 'ನಾನ್ ಸೆನ್ಸ್' ಎಂದಿದ್ದನ್ನ ತಪ್ಪಾಗಿ ಅರ್ಥೈಸಿದ ದಿವಾಕರ್, ''ಸ್ಟುಪಿಡ್'' ಎಂದು ಬೈದರು ಅಂತ ನಿವೇದಿತಾ ಮೇಲೆ ಮುನಿಸಿಕೊಂಡಿದ್ದರು. ಪದೇ ಪದೇ ನಿವೇದಿತಾ ಕ್ಷಮೆ ಕೇಳಿದರೂ, ದಿವಾಕರ್ ಕೋಪ ಕಮ್ಮಿ ಆಗಲಿಲ್ಲ. ಈ ಬಗ್ಗೆ ಸುದೀಪ್ ಹೇಳಿದ್ದು ಹೀಗೆ....

ನಾನ್ ಸೆನ್ಸ್ ಅಂದರೆ ಏನು.?
''ಸ್ಟುಪಿಡ್' ಅಂದ್ರೆ ಮೂರ್ಖ ಅಂತ. 'ನಾನ್ ಸೆನ್ಸ್' ಅಂದ್ರೆ ಅರಿವಿಲ್ಲದೇ.... ಈ ಪದಗಳ ಅರ್ಥ ನಿಮಗೆ ಗೊತ್ತಿಲ್ಲದೇ ಇದ್ದರೂ, ಅಷ್ಟೊಂದು ರೇಗಾಡಿದರಲ್ಲಾ.?'' ಎಂದು ದಿವಾಕರ್ ಗೆ ಸುದೀಪ್ ಪ್ರಶ್ನಿಸಿದರು. ಜೊತೆಗೆ ''ನಿವೇದಿತಾ ನಿಮ್ಮನ್ನ ಸ್ಟುಪಿಡ್ ಅಂತ ಕರೆಯಲೇ ಇಲ್ಲ'' ಎಂದು ದಿವಾಕರ್ ಗೆ ಸುದೀಪ್ ಮನವರಿಕೆ ಮಾಡಿದರು.

ದಿವಾಕರ್ ಗೆ ಸುದೀಪ್ ಹೇಳಿದ್ದೇನು.?
''ಒಟ್ನಲ್ಲಿ, ಏನೋ ಒಂದು ಹೇಳಿದರು'' ಅಂತ ದಿವಾಕರ್ ಹೇಳಿದಕ್ಕೆ, ''ಏನು ಹೇಳಿದರು ಅಂತ ತಿಳಿದುಕೊಳ್ಳದೇ ರೇಗಾಡಿದ್ರಿ. ನಿಮ್ಮನ್ನ ಯಾರೂ ಬೈಯ್ಯಲಿಲ್ಲ'' ಎಂದು ಸುದೀಪ್ ಹೇಳಿದರು.

ಬುದ್ಧಿ ಮಾತು ಹೇಳಿದ ಸುದೀಪ್
''ಬೇರೆಲ್ಲೋ ನಿಮಗೆ ಕಿರಿಕಿರಿ ಆಗಿದ್ದಕ್ಕೆ, ಈ ಸನ್ನಿವೇಶದಲ್ಲಿ ಹೊರ ಹಾಕಿದ್ರಿ ಅಂತ ಭಾವನೆ ಮೂಡಿತು. ನಿವೇದಿತಾ ನಿಮ್ಮ ಬಳಿ ಬಂದು ಕ್ಷಮೆ ಕೇಳಿದರೂ, ನಿಮ್ಮ ಕೋಪ ಕಮ್ಮಿ ಆಗಲಿಲ್ಲ. ದಿವಾಕರ್ ಅವರ ಹೇರ್ ಸ್ಟೈಲ್ ಮಾತ್ರ ಅಲ್ಲ, ದಿವಾಕರ್ ಬುದ್ಧಿ ಕೂಡ ಬದಲಾಗಿದೆ ಅಂತ ನೋಡುತ್ತಿರುವ ಜನರ ಮನಸ್ಸಲ್ಲಿ ಅನ್ಸಲ್ವಾ.?'' ಎಂದು ದಿವಾಕರ್ ಗೆ ಸುದೀಪ್ ಬುದ್ಧಿ ಮಾತು ಹೇಳಿದರು


Click it and Unblock the Notifications











