»   » ಆಟದಲ್ಲಿ ಸಮೀರಾಚಾರ್ಯ ಅಷ್ಟೊಂದು ರೊಚ್ಚಿಗೆದ್ದಿದ್ದು ಯಾಕೆ.?

ಆಟದಲ್ಲಿ ಸಮೀರಾಚಾರ್ಯ ಅಷ್ಟೊಂದು ರೊಚ್ಚಿಗೆದ್ದಿದ್ದು ಯಾಕೆ.?

Posted By:
Subscribe to Filmibeat Kannada
Bigg Boss Kannada Season 5 : ತಾಳ್ಮೆಯಿಂದ ಇರಲು ಸಮೀರ್ ಆಚಾರ್ಯಗೆ ಹೇಳಿದ ಸುದೀಪ್ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಾಳ್ಮೆ ಹಾಗೂ ಸಹನೆಯ ಪ್ರತೀಕವಾಗಿದ್ದ ಸಮೀರಾಚಾರ್ಯ, ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಆಕ್ರಮಣಕಾರಿ ಆದರು. ತಾಳ್ಮೆ ಕಳೆದುಕೊಂಡು ಕೂಗಾಡಿದರು.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಕ್ಯಾಪ್ಟನ್ ರಿಯಾಝ್ ಹೇಳಿದ ಮಾತುಗಳನ್ನೂ ಕೇಳದ ಮಟ್ಟಕ್ಕೆ ಸಮೀರಾಚಾರ್ಯ ರೊಚ್ಚಿಗೆದ್ದದ್ದು ಯಾಕೆ ಎಂಬ ಪ್ರಶ್ನೆಗೆ ಸ್ವತಃ ಸಮೀರಾಚಾರ್ಯ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿರಿ....

ಸುದೀಪ್ ಪ್ರಶ್ನೆಗೆ ಸಮೀರಾಚಾರ್ಯ ಉತ್ತರ

''ತಾವು ಇಷ್ಟು ಆಕ್ರಮಣಕಾರಿ ಆಗೋದು ಬೇಕಿತ್ತಾ.?'' ಅಂತ ಸುದೀಪ್ ಕೇಳಿದ್ದಕ್ಕೆ, ಸಮೀರಾಚಾರ್ಯ ಕೊಟ್ಟ ಉತ್ತರ ಇದು - ''ನನಗೆ ಟಾಸ್ಕ್ ಬಗ್ಗೆ ಲಕ್ಷ್ಯ ಇತ್ತು. ಯಾಕಂದ್ರೆ, ತಮ್ಮ ತಂಡದಲ್ಲಿ ಜೆಕೆ ಅವರಿಗೆ ಕಾಲು ನೋವಾಗಿತ್ತು. ತೆಂಗಿನಕಾಯಿಯನ್ನ ನಾನೊಬ್ಬನೇ ತೆಗೆದುಕೊಂಡು ಬರಬೇಕಾಗಿತ್ತು. ಇನ್ನೊಂದು ಕಡೆ ಬರೀ ಹೆಣ್ಮಕ್ಕಳೇ ಇದ್ದರು. ಹೀಗಾಗಿ ನನಗೆ ಬೇರೆ ವಿಧಿ ಇರಲಿಲ್ಲ. ಪರಿಸ್ಥಿತಿ ಹಾಗಿತ್ತು. ಅದಕ್ಕೆ ನಾನು ತೋರಿಸಬೇಕಾಯಿತು''

ಒಳ್ಳೆಯವರಿಗೆ ಕೋಪ ಬರಿಸುವುದು ದೊಡ್ಡ ಮುಠ್ಠಾಳತನ.!

ಸಮೀರಾಚಾರ್ಯಗೆ ಬುದ್ಧಿ ಮಾತು ಹೇಳಿದ ಸುದೀಪ್

''ಟಾಸ್ಕ್ ನಲ್ಲಿ ನಿಮ್ಮ ಪಾರ್ಟಿಸಿಪೇಷನ್ ಬಗ್ಗೆ ನಮಗೆ ಡೌಟ್ ಇಲ್ಲ. ಚೆನ್ನಾಗಿ ಆಡಿದ್ರಿ. ಗೆಲ್ಲುವ ಛಲ ಇಲ್ಲದೆ ಹೋದರೆ ಪಾಲ್ಗೊಳ್ಳುವುದೇ ವೇಸ್ಟ್. ಆದ್ರೆ, ಯಾವುದೋ ಒಂದು ಆಕ್ಷನ್ ಗೆ ನಾನು ಪ್ರತಿಕ್ರಿಯೆ ಕೊಟ್ಟೆ ಅಂತ ತಾವು ಹೇಳ್ತಿದ್ದೀರಿ. ಅದು ಸತ್ಯ ಅಲ್ಲ. ತಾವು ಆಕ್ಷನ್ ಆಗಿದ್ರಿ. ಅದಕ್ಕೆ ಪ್ರತಿಕ್ರಿಯೆ ಬರುತ್ತಿತ್ತು. ತಾಳ್ಮೆ ಅನ್ನೋದು ಒಂದು ಅಭ್ಯಾಸ'' ಎಂದು ಸುದೀಪ್ ಸಮೀರಾಚಾರ್ಯ ಅವರಿಗೆ ಹೇಳಿದರು.

ಬ್ರಾಹ್ಮಣ ಸಂಪ್ರದಾಯವನ್ನು ಸಮೀರಾಚಾರ್ಯ ಅವಮಾನ ಮಾಡಿಲ್ಲ.!

ಸುದೀಪ್ ಹೇಳಿದ್ದನ್ನ ಸಮೀರಾಚಾರ್ಯ ಪಾಲಿಸುತ್ತಾರಾ.?

ತಾಳ್ಮೆಯಿಂದ ಇರುವಂತೆ ಸಮೀರಾಚಾರ್ಯ ಅವರಿಗೆ ಸುದೀಪ್ ಸೂಚಿಸಿದ್ದಾರೆ. ಸುದೀಪ್ ಹೇಳಿದ್ದನ್ನ ಸಮೀರಾಚಾರ್ಯ ಪಾಲಿಸುತ್ತಾರಾ, ಕಾದು ನೋಡಬೇಕು.

'ಬಿಗ್ ಬಾಸ್' ಮನೆಯಲ್ಲಿ ಸಹನೆಯ ಕಟ್ಟೆ ಒಡೆದು ಸಿಟ್ಟಿಗೆದ್ದ ಸಮೀರಾಚಾರ್ಯ.!

ಈ ವಾರ ಕೂಡ ನಾಮಿನೇಟ್ ಆಗ್ತಾರಾ ಸಮೀರಾಚಾರ್ಯ.?

ಕಳೆದ ವಾರ ನಾಮಿನೇಟ್ ಆಗಿದ್ದರೂ, ಸೇಫ್ ಆಗುವಲ್ಲಿ ಸಮೀರಾಚಾರ್ಯ ಯಶಸ್ವಿ ಆದರು. ಆದ್ರೆ, ಕಳೆದ ವಾರದ ಗಲಾಟೆಗಳಿಂದ ಈ ವಾರ ಕೂಡ ಸಮೀರಾಚಾರ್ಯ ನಾಮಿನೇಟ್ ಆಗುವ ಸಾಧ್ಯತೆ ಇದೆ.

English summary
Bigg Boss Kannada 5: Week 4: Sudeep advices Sameer Acharya to have patience
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada