»   » ನಿಯಮದ ವಿರುದ್ಧ ಹೋದ ಸಿಹಿ ಕಹಿ ಚಂದ್ರು ಎಡವಿದ್ದು ಎಲ್ಲಿ.?

ನಿಯಮದ ವಿರುದ್ಧ ಹೋದ ಸಿಹಿ ಕಹಿ ಚಂದ್ರು ಎಡವಿದ್ದು ಎಲ್ಲಿ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರದ ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲಿ 'ಬೇಕು' ಅಂತಲೇ ತಪ್ಪು ಉತ್ತರಗಳನ್ನು ನೀಡಿ, ಕ್ಯಾಪ್ಟನ್ ರೇಸ್ ನಿಂದ ಸಿಹಿ ಕಹಿ ಚಂದ್ರು ಹೊರಬಿದ್ದರಂತೆ. ಸಿಹಿ ಕಹಿ ಚಂದ್ರು ಹೀಗೆ ಮಾಡಿದ್ರಿಂದಾಗಿ, ನಿವೇದಿತಾಗೆ ಕ್ಯಾಪ್ಟನ್ ಆಗುವ ಅವಕಾಶ ಸಿಕ್ತಂತೆ. ಹಾಗಂತ 'ಬಿಗ್ ಬಾಸ್' ಮನೆಯಲ್ಲಿ ಸ್ವತಃ ಸಿಹಿ ಕಹಿ ಚಂದ್ರು ಹೇಳಿಕೊಂಡಿದ್ದಾರೆ.

ಟಾಸ್ಕ್ ನಲ್ಲಿ 'ಬೇಕು' ಅಂತಲೇ ತಪ್ಪು ಉತ್ತರ ನೀಡಿದ್ದು ರೀತಿ-ನೀತಿ, ನಿಯಮದ ವಿರುದ್ದ ಎಂದಿದ್ದಾರೆ ಕಿಚ್ಚ ಸುದೀಪ್.

ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!

Bigg Boss Kannada 5: Sudeep advices Sihi Kahi Chandru

ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಸಿಹಿ ಕಹಿ ಚಂದ್ರು ಅವರ ನಡವಳಿಕೆ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ, ''ನಿವೇದಿತಾ ಅವರಿಗೆ ಕ್ಯಾಪ್ಟೆನ್ಸಿ ಬಿಟ್ಟುಕೊಡಲು ಬೇಕು ಅಂತ ತಪ್ಪು ಉತ್ತರಗಳನ್ನು ನೀಡಿದ್ರಾ.?'' ಎಂದು ಸುದೀಪ್ ಪ್ರಶ್ನಿಸಿದರು.

''ಎರಡು ತಪ್ಪು ಉತ್ತರ ಕೊಟ್ಟೆ'' ಎಂದು ಸಿಹಿ ಕಹಿ ಚಂದ್ರು ಹೇಳಿದಾಗ, ''ಇದು ನಿಯಮದ ವಿರುದ್ಧ ಅಲ್ವಾ.?'' ಅಂತ ಸುದೀಪ್ ಮರು ಪ್ರಶ್ನಿಸಿದರು. ''ನಿವೇದಿತಾ ಎಕ್ಸೈಟ್ ಮೆಂಟ್ ಗೆ ಕಲ್ಲು ಹಾಕುತ್ತೇನೆ ಅನಿಸ್ತು. ಹೀಗಾಗಿ ಬಿಟ್ಟುಕೊಟ್ಟೆ'' ಎಂದು ಸಿಹಿ ಕಹಿ ಚಂದ್ರು ಹೇಳಿದಕ್ಕೆ, ''ಆಟವನ್ನ ಆಟದ ತರಹ ಆಡಬೇಕು ಅಲ್ವೇ.?'' ಎಂದರು ಸುದೀಪ್.

Bigg Boss Kannada 5: Sudeep advices Sihi Kahi Chandru

ಜೊತೆಗೆ, ''ತಾವು ಅದನ್ನ ಹೇಳದೇ ಇದ್ದರೆ ಚೆನ್ನಾಗಿರುತ್ತಿತ್ತು. ತಾವು ಎಡವಿದ್ದು ಇಲ್ಲೇ.! ಒಂದು ಸಲ ಗಾರ್ಡನ್ ಏರಿಯಾದಲ್ಲಿ, ಇನ್ನೊಂದು ಸಲ ಅಡುಗೆ ಮನೆಯಲ್ಲಿ ಇದೇ ಟಾಪಿಕ್ ಬಗ್ಗೆ ನೀವು ಮಾತನಾಡುತ್ತೀರಿ. ಯಾರೇ ಆಗಲಿ, ಕ್ಯಾಪ್ಟೆನ್ಸಿನ ಗಳಿಸಿಕೊಳ್ಳಬೇಕೇ ಹೊರತು ದಾನ ಮಾಡಿದ ಹಾಗೆ ಆಗಬಾರದು'' ಎಂದರು ಸುದೀಪ್.

English summary
Bigg Boss Kannada 5: Week 6: Sudeep advices Sihi Kahi Chandru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada