»   » ನಿವೇದಿತಾರನ್ನ ಹೊಗಳಿದ ಸುದೀಪ್: ಕಿಚ್ಚ ಕೊಟ್ಟ ಕಾಂಪ್ಲಿಮೆಂಟ್ ಏನು.?

ನಿವೇದಿತಾರನ್ನ ಹೊಗಳಿದ ಸುದೀಪ್: ಕಿಚ್ಚ ಕೊಟ್ಟ ಕಾಂಪ್ಲಿಮೆಂಟ್ ಏನು.?

Posted By:
Subscribe to Filmibeat Kannada
Bigg Boss Kannada Season 5 : ನಿವೇದಿತಾ ಗೌಡಗೆ ಕಿಚ್ಚನಿಂದ ಕಾಂಪ್ಲಿಮೆಂಟ್ | Filmibeat Kannada

'ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡ ರವರನ್ನ ಕಿಚ್ಚ ಸುದೀಪ್ ಹೊಗಳಿದ್ದಾರೆ. ಕಳೆದ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ನಿವೇದಿತಾ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

''ಒಂದು ಕಾಂಪ್ಲಿಮೆಂಟ್ ಕೊಡುತ್ತೇನೆ... ನಿಮ್ಮ ವಯಸ್ಸಿಗೆ ಮೀರಿದ ತಿಳುವಳಿಕೆ ನಿಮಗೆ ಇದೆ. ಬೆಸ್ಟ್ ಪರ್ಫಾಮರ್ ಹಾಗೂ ಕಳಪೆ ಬೋರ್ಡ್ ನಿರ್ಧಾರವನ್ನ ಚೆನ್ನಾಗಿ ನಿಭಾಯಿಸಿದ್ರಿ'' ಎನ್ನುತ್ತಾ ನಿವೇದಿತಾ ಗೌಡ ರವರಲ್ಲಿ ಇದ್ದ ಪ್ರಬುದ್ಧತೆಯನ್ನ ಸುದೀಪ್ ಶ್ಲಾಘಿಸಿದರು.

Bigg Boss Kannada 5: Sudeep praises Niveditha Gowda

ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಅತಿ ಕಿರಿಯ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ, ಇಡೀ ಮನೆಯನ್ನ ನಿವೇದಿತಾ ಬ್ಯಾಲೆನ್ಸ್ ಮಾಡಿದ ರೀತಿ ಅಚ್ಚುಕಟ್ಟಾಗಿತ್ತು.

ಅಂದ್ಹಾಗೆ, ಕ್ಯಾಪ್ಟೆನ್ಸಿ ಹಾಗೂ ಸ್ಕೂಲ್ ಟಾಸ್ಕ್... ಎರಡೂ ಒಟ್ಟೊಟ್ಟಿಗೆ ಸಿಕ್ಕ ಕಾರಣ ಕಳೆದ ವಾರ ನಿವೇದಿತಾ ಪಾಲಿಗೆ ಸಿಕ್ಕಾಪಟ್ಟೆ ಲಕ್ಕಿ ಅಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬೊಂಬೆ' ನಿವೇದಿತಾ ಗೌಡ.!

''ಈ ವಾರ ತುಂಬಾ ಚೆನ್ನಾಗಿತ್ತು. ನನಗೆ ತುಂಬಾ ಲಕ್ಕಿ ವಾರ ಅಂದ್ರೆ ಇದೇ. ಕ್ಯಾಪ್ಟನ್ ಆಗಬೇಕು ಅಂತ ತುಂಬಾ ಆಸೆ ಇತ್ತು. ಕ್ಯಾಪ್ಟನ್ ಆದೆ. ಜೊತೆಗೆ ನನ್ನ ಇಷ್ಟದ ಟಾಸ್ಕ್ ಕೂಡ ಸಿಕ್ತು'' ಎಂದರು ನಿವೇದಿತಾ ಗೌಡ.

English summary
Bigg Boss Kannada 5: Week 6: Sudeep praises Niveditha Gowda

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada