»   » 'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

Posted By:
Subscribe to Filmibeat Kannada
Bigg Boss Kannada Season 5 : ಜಯ ಶ್ರೀನಿವಾಸನ್ 420, ಅಂದ್ರು ದಿವಾಕರ್ | ಸುದೀಪ್ ಪ್ರತಿಕ್ರಿಯೆ?

'ಬಿಗ್ ಬಾಸ್' ಮನೆಯಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್ ಹಾಗೂ 'ಸಂಖ್ಯಾಶಾಸ್ತ್ರಜ್ಞ' ಜಯಶ್ರೀನಿವಾಸನ್ ಮಧ್ಯೆ ಎಲ್ಲವೂ ಸರಿಯಿಲ್ಲ. ಈಗಾಗಲೇ ಹಲವು ವಿಚಾರಗಳಿಗೆ ಜಯಶ್ರೀನಿವಾಸನ್ ಹಾಗೂ ದಿವಾಕರ್ ಮಧ್ಯೆ ಗಲಾಟೆ ನಡೆದಿದೆ.

ಸಲುಗೆಯಿಂದ ಮಾತನಾಡುವ ದಿವಾಕರ್ ಮೇಲೆ ಜಯಶ್ರೀನಿವಾಸನ್ ಗೆ ಬೇಸರ ಇದೆ. ಹೀಗಾಗಿ, ದಿವಾಕರ್ ರವರಿಂದ ಸ್ವಲ್ಪ ದೂರ ಸರಿದಿರುವ ಜಯಶ್ರೀನಿವಾಸನ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಬಗ್ಗೆ ಕಾಮೆಂಟ್ ಮಾಡಿದರು.

ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಸ್/ನೋ ಪ್ರಶ್ನೆಗಳ ಸುತ್ತಿನಲ್ಲಿ, ''ತಾವು ಯಾಕೆ ಎಲ್ಲರ ಜೊತೆ ಜಗಳ ಆಡುತ್ತಿದ್ದೇನೆ ಅಂತ ಸ್ವತಃ ದಿವಾಕರ್ ಅವರಿಗೇ ಗೊತ್ತಿಲ್ಲ.!'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು.

ಸುದೀಪ್ ಕೇಳಿದ ಪ್ರಶ್ನೆಗೆ 'ನೋ' ಎನ್ನುತ್ತಾ, ''ದಿವಾಕರ್ ಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ''ಕಳೆದ ಸೀಸನ್ ನಲ್ಲಿ ಎಲ್ಲದಕ್ಕೂ ಖಂಡಿಸುತ್ತೇನೆ ಅಂತ ಹೇಳುತ್ತಿದ್ದ ಸ್ಪರ್ಧಿಯನ್ನ ನೀವು ಫಾಲೋ ಮಾಡುತ್ತಿದ್ದೀರಾ'' ಅಂತ ಕೀರ್ತಿ ಹೇಳಿದಾಗ ದಿವಾಕರ್ ಅವರಲ್ಲಿ ಬದಲಾವಣೆ ಕಾಣ್ತು. ದಿವಾಕರ್ ಅವರಿಗೆ ಎಲ್ಲ ವಿಷಯ ಗೊತ್ತಿದೆ. ಸ್ಟ್ರಾಟೆಜಿ ಪ್ರಕಾರವೇ ಆಡುತ್ತಿದ್ದಾರೆ'' ಎಂದು ಜಯಶ್ರೀನಿವಾಸನ್ ಹೇಳಿದರು.

ಇದರಿಂದ ಸಿಟ್ಟಾದ ದಿವಾಕರ್, ಜಯಶ್ರೀನಿವಾಸನ್ ಮೋಸ ಮಾಡುತ್ತಾರೆ. ಅವರು 420 ಎಂದುಬಿಟ್ಟರು.! ಮುಂದೆ ಓದಿರಿ...

ದಿವಾಕರ್ ಹೇಳಿದ್ದೇನು.?

ಸ್ಟ್ರಾಟೆಜಿ ಪ್ರಕಾರ ದಿವಾಕರ್ ಆಡುತ್ತಿದ್ದಾರೆ ಅಂತ ಜಯಶ್ರೀನಿವಾಸನ್ ಹೇಳಿದ್ದಕ್ಕೆ, ಸಿಟ್ಟಾದ ದಿವಾಕರ್, ''ಇಲ್ಲಿಯವರೆಗೂ ನಾನು 'ಬಿಗ್ ಬಾಸ್' ಕಾರ್ಯಕ್ರಮದ ಮೂರ್ನಾಲ್ಕು ಸಂಚಿಕೆಗಳನ್ನು ಮಾತ್ರ ನೋಡಿರಬಹುದು. ಆದ್ರೆ, ಯಾರ ರೀತಿಯೂ ಪ್ಲಾನ್ ಮಾಡಿ ಆಡುತ್ತಿಲ್ಲ'' ಎಂದು ದಿವಾಕರ್ ಹೇಳಿದರು.

ಹೇರ್ ಸ್ಟೈಲ್ ಜೊತೆಗೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ.!

ಜಯಶ್ರೀನಿವಾಸನ್ ಮೋಸ ಮಾಡುತ್ತಿದ್ದಾರೆ

''ಇವರ (ಜಯಶ್ರೀನಿವಾಸನ್) ಹಾಗೆ ನಂಬರ್ ಹೇಳಿ, ಎಲ್ಲರನ್ನೂ ಸೆಳೆಯುವುದು. ನಂಬರ್ ಹೆಸರಿನಲ್ಲಿ ಮೋಸ ಮಾಡುವುದು ನನಗೆ ಗೊತ್ತಿಲ್ಲ. ಇವರ ಹಾಗೆ ಸೂಟ್ ಹಾಕೊಂಡು, ನಾಟಕ ಮಾಡಲು ನನಗೆ ಬರಲ್ಲ. ಜೀವನದಲ್ಲಿ ನಾನು ಭಿಕ್ಷೆ ಬೇಡಿ ಬಂದಿರುವವನು. ಇವತ್ತಿನವರೆಗೂ ನಾನು ಏನಾದರೂ ಹೇಳಿರುವುದು ತಪ್ಪಾಗಿದ್ದರೆ, ನನಗೆ ಏನು ಬೇಕಾದರೂ ಆಗಲಿ'' ಎಂದು ದಿವಾಕರ್ ಸಿಟ್ಟಿನಿಂದ ನುಡಿದರು.


ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಜಯಶ್ರೀನಿವಾಸನ್ 420

''ನಂಬರ್ ಮೂಲಕ ಜೀವನ ಚೇಂಜ್ ಆಗುತ್ತೆ ಅಂತ ಹೇಳುವ ಸಾವಿರಾರು ಜನರನ್ನು ನಾನು ನೋಡಿದ್ದೇನೆ. ಅಂಥವರನ್ನು ನಾನು ನಂಬಲ್ಲ. ಅವರು 420. ಅವರನ್ನ ಜಗತ್ತಿನಲ್ಲಿ ಯಾರೂ ನಂಬಬಾರದು'' ಎಂದು ಸುದೀಪ್ ಎದುರಿಗೆ ದಿವಾಕರ್ ಹೇಳಿದರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಯಾರನ್ನೂ ಕಾಪಿ ಮಾಡಿಲ್ಲ.!

''ನಾನು ಇರುವುದೇ ಹೀಗೆ. ನಾನು ಯಾರನ್ನೂ ಕಾಪಿ ಮಾಡಿಲ್ಲ. ಆಕ್ಟಿಂಗ್ ಒಂದು ದಿನ ಮಾಡಬಹುದು, ಎರಡು ದಿನ ಮಾಡಬಹುದು. ಆದ್ರೆ, ಇವರು 24 ಗಂಟೆ ಆಕ್ಟ್ ಮಾಡುವವರು. ಇಂಥವರನ್ನ ಯಾಕೆ ನಂಬಬೇಕು.?'' - ದಿವಾಕರ್

ವೀಕ್ಷಕರ ಬಗ್ಗೆ ದಿವಾಕರ್ ಹೇಳಿದ್ದೇನು.?

''ನಾನು ಯಾರಿಗೋಸ್ಕರವೂ ಚೇಂಜ್ ಆಗಲ್ಲ. ಜನರು ವೋಟ್ ಮಾಡದೆ ಹೊರಗೆ ಕಳುಹಿಸಿದರೂ ಪರ್ವಾಗಿಲ್ಲ. ನನ್ನದು ತಪ್ಪು ಅಂತ ಗೊತ್ತಾದರೆ, ನಾನು ಯಾವತ್ತೂ ಹೊರಗೆ ಹೋಗಲು ರೆಡಿ. ಇದು ನನ್ನ ಜೀವನ ಅಲ್ಲ'' - ದಿವಾಕರ್

ದಿವಾಕರ್ ಗೆ ಸುದೀಪ್ ಹೇಳಿದ್ದೇನು.?

ದಿವಾಕರ್ ಆಡಿದ ಮಾತುಗಳನ್ನು ಕೇಳಿದ ಬಳಿಕ ''ಅನಿಸಿಕೆ ವ್ಯಕ್ತಪಡಿಸಿ. ನೀವು ಪಟ್ಟಿರುವ ಕಷ್ಟದ ಬಗ್ಗೆ ಗೌರವ ಇದೆ. ನೀವು ಕಷ್ಟ ಪಟ್ಟಿಲ್ಲ ಅಂತ ಅಲ್ಲಿ ಕೂತಿರುವವರು ಯಾರೂ ಹೇಳಿಲ್ಲ. ಅವರವರ ವೃತ್ತಿ ಅವರವರದ್ದು. ಅದರ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ'' ಎಂದು ಸುದೀಪ್ ಹೇಳಿದರು.

ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್

''ಯಾರೂ ಹೇಳಿಲ್ಲ ನಿಮಗೆ 'ಬಿಗ್ ಬಾಸ್' ಮನೆಯೊಳಗೆ ಹೋಗಿ ಅಂತ. ಹೋದ್ಮೇಲೆ, ಇಷ್ಟು ವಾರ ಆದ್ಮೇಲೆ ಜನರ ಬಗ್ಗೆಯೂ ಕೇವಲವಾಗಿ ಮಾತನಾಡುತ್ತಿದ್ದೀರಾ. ವೋಟ್ ಹಾಕಿದರೆ ಹಾಕಿದರು ಇಲ್ಲ ಅಂದ್ರೆ ಇಲ್ಲ.. ಅಂತ ಹೇಳಿದ್ರೆ ಇಷ್ಟು ವಾರ ನಿಮಗೆ ವೋಟ್ ಹಾಕಿದವರು ಅಷ್ಟು ಕೇವಲ ಆಗಿಹೋದ್ರಾ.? ಇಷ್ಟು ವಾರ ಜನ ನಿಮಗೆ ಯಾಕೆ ವೋಟ್ ಹಾಕಬೇಕಿತ್ತು.? ಜನರ ನಿಮ್ಮನ್ನ ಪ್ರೀತಿ ಮಾಡಿದ್ದಾರೆ. ಅದನ್ನ ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಮಾರುವ ತೈಲವೇ ಮೋಸ ಅಂತ ಹೇಳಿದ್ರೆ ನಿಮಗೆ ಏನಾಗಬೇಕು.?'' ಎಂದು ಮಾತಲ್ಲೇ ದಿವಾಕರ್ ಗೆ ಪೆಟ್ಟು ಕೊಟ್ಟರು ಸುದೀಪ್.

English summary
Bigg Boss Kannada 5: Week 6: Sudeep slams Diwakar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada