»   » ದಿಢೀರ್ ಬೆಳವಣಿಗೆ: 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರಗೆ.?

ದಿಢೀರ್ ಬೆಳವಣಿಗೆ: 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರಗೆ.?

Posted By:
Subscribe to Filmibeat Kannada

ಮೂರು ವಾರಗಳಿಂದ ಸೇಫ್ ಆಗಿದ್ದ ನಟಿ ತೇಜಸ್ವಿನಿ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯುವ ಮುನ್ನವೇ 'ಬಿಗ್ ಬಾಸ್' ಮನೆಯಿಂದ ನಟಿ ತೇಜಸ್ವಿನಿ ಹೊರ ಬರುವ ಸಾಧ್ಯತೆ ಇದೆ. ಅದಕ್ಕೆ ಕಾರಣ ತೇಜಸ್ವಿನಿ ತಂದೆಯವರ ಅನಾರೋಗ್ಯ.

ತೇಜಸ್ವಿನಿ ತಂದೆಯವರಿಗೆ ಕಿಡ್ನಿ ಆಪರೇಷನ್ ನಡೆದಿದ್ದು, ತೇಜಸ್ವಿನಿ ರನ್ನ ನೋಡಬೇಕು ಎಂದು ಆಕೆಯ ತಂದೆ ಬಯಸುತ್ತಿದ್ದಾರೆ. ಹೀಗಾಗಿ, ''ಬಿಗ್ ಬಾಸ್' ಆಟವನ್ನು ಇಲ್ಲೇ ಮೊಟಕುಗೊಳಿಸಿ ಹೊರಗೆ ಬರುತ್ತೀರಾ.?'' ಎಂಬ ಪ್ರಶ್ನೆಯನ್ನ 'ಬಿಗ್ ಬಾಸ್' ತೇಜಸ್ವಿನಿ ಮುಂದಿಟ್ಟಿದ್ದಾರೆ. ಮುಂದೆ ಓದಿರಿ....

ಆಸ್ಪತ್ರೆಯಲ್ಲಿ ಇರುವ ತೇಜಸ್ವಿನಿ ತಂದೆ

ಅನಾರೋಗ್ಯದಿಂದ ಬಳಲುತ್ತಿರುವ ತೇಜಸ್ವಿನಿ ತಂದೆಯವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿಡ್ನಿ ಫೇಲ್ಯೂರ್ ಆಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸಮಯದಲ್ಲಿ ತೇಜಸ್ವಿನಿ ಇರುವಿಕೆಯನ್ನು ಆಕೆಯ ಕುಟುಂಬ ಬಯಸುತ್ತಿದೆ.

ವಿಷ್ಣುವರ್ಧನ್ ಮಗಳಾಗಿದ್ದ ತೇಜಸ್ವಿನಿ ಪ್ರಕಾಶ್ ಈಗ 'ಬಿಗ್ ಬಾಸ್' ಮೆಟ್ಟಿಲೇರಿದ್ದಾರೆ!

ಹೊರಗೆ ಬರುವಂತೆ ಅಮ್ಮ ಕೇಳಿಕೊಂಡರು

ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಲು ತಾಯಿ ಜೊತೆ ಮಾತನಾಡಬೇಕು ಎಂದು ತೇಜಸ್ವಿನಿ ಕೇಳಿಕೊಂಡಾಗ, ಅದಕ್ಕೆ 'ಬಿಗ್ ಬಾಸ್' ಸಮ್ಮತಿಸಿ, ಅವಕಾಶ ಕಲ್ಪಿಸಿದರು. ''ಆಪರೇಷನ್ ಆಗಿದೆ. ಅಪ್ಪ ನಿನ್ನನ್ನ ನೋಡಬೇಕು ಅಂತ ಕೇಳ್ತಿದ್ದಾರೆ. ನನಗೆ ಒಬ್ಬಳಿಗೆ ಇಲ್ಲಿ ಮ್ಯಾನೇಜ್ ಮಾಡಲು ಆಗುತ್ತಿಲ್ಲ. ನೀನು ಹೊರಗೆ ಬಂದರೆ ಒಳ್ಳೆಯದ್ದು ಮಗಳೇ..'' ಎಂದು ತೇಜಸ್ವಿನಿ ತಾಯಿ ಕೇಳಿಕೊಂಡರು.

''ಹೊರ ಬರುತ್ತೇನೆ'' ಎಂದ ತೇಜಸ್ವಿನಿ

ಅಮ್ಮನ ಬಳಿ ಮಾತನಾಡುತ್ತಿರುವಾಗ, ''ನಾನು ಬರುತ್ತೇನೆ'' ಎಂದು ತೇಜಸ್ವಿನಿ ಭರವಸೆ ನೀಡಿದರು. ಆದ್ರೆ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಲು ತೇಜಸ್ವಿನಿಗೆ 'ಬಿಗ್ ಬಾಸ್' ಕಾಲಾವಕಾಶ ನೀಡಿದ್ದಾರೆ. ಹೀಗಾಗಿ ತೇಜಸ್ವಿನಿ ತಮ್ಮ ನಿರ್ಧಾರವನ್ನು ಇನ್ನೂ 'ಬಿಗ್ ಬಾಸ್'ಗೆ ತಿಳಿಸಿಲ್ಲ.

ತೇಜಸ್ವಿನಿ ಹೊರ ಬಂದ್ರಾ.?

ಕಹಿ ಸುದ್ದಿ ಕೇಳಿ ಆಘಾತಗೊಂಡ ತೇಜಸ್ವಿನಿ ದುಃಖತಪ್ತರಾದರು. 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರ ಬಂದ್ರಾ ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ಪ್ರಸಾರ ಆಗುವವರೆಗೂ ಕಾಯಲೇಬೇಕು.

English summary
Bigg Boss Kannada 5: Week 4: Tejaswini to walk out of the show. ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯುವ ಮುನ್ನವೇ 'ಬಿಗ್ ಬಾಸ್' ಮನೆಯಿಂದ ನಟಿ ತೇಜಸ್ವಿನಿ ಹೊರ ಬರುವ ಸಾಧ್ಯತೆ ಇದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X