For Quick Alerts
  ALLOW NOTIFICATIONS  
  For Daily Alerts

  ತಂದೆ ಆಸೆಯನ್ನ ಈಡೇರಿಸಲು ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬೇಕು.!

  By Harshitha
  |
  ಚಂದನ್ ಶೆಟ್ಟಿ 'ಬಿಗ್ ಬಾಸ್' ಯಾವ ಕಾರಣಕ್ಕೆ ಗೆಲ್ಲಬೇಕಂತೆ ಗೊತ್ತಾ ! | Filmibeat Kannada

  'ಬಿಗ್ ಬಾಸ್' ಮೇಲೆ... ಸಹ ಸ್ಪರ್ಧಿಗಳ ಮೇಲೆ... ಕ್ಷಣಾರ್ಧದಲ್ಲೇ ಹಾಡುಗಳನ್ನ ಸಂಯೋಜಿಸಿ 'ದೊಡ್ಮನೆ'ಯೊಳಗೆ ಮಸ್ತ್ ಮನರಂಜನೆ ಕೊಡುತ್ತಿರುವವರು ಚಂದನ್ ಶೆಟ್ಟಿ. ಹೀಗಾಗಿ ಚಂದನ್ ಶೆಟ್ಟಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.

  ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಾಮಿನೇಟ್ ಆಗಿರುವುದು ಕೆಲವೇ ಕೆಲವು ಬಾರಿ. ಡೇಂಜರ್ ಝೋನ್ ಗೆ ಬಂದಾಗೆಲ್ಲ ಸುಲಭವಾಗಿ ಬಚಾವ್ ಆಗಿರುವ ಚಂದನ್ ಶೆಟ್ಟಿ ಇದೀಗ ಟಾಪ್ 7 ಹಂತದಲ್ಲಿದ್ದಾರೆ.

  ಕೆಲ ಸ್ಪರ್ಧಿಗಳು ಹೇಳುವಂತೆ ಹಾಗೂ ಹಲವು ವೀಕ್ಷಕರು ಅಭಿಪ್ರಾಯ ಪಟ್ಟಿರುವಂತೆ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲುತ್ತಾರೆ. 'ಬಿಗ್ ಬಾಸ್ ಕನ್ನಡ-5' ಟ್ರೋಫಿ ಚಂದನ್ ಶೆಟ್ಟಿ ಪಾಲಾಗುತ್ತಾ.? ಎಂಬ ಪ್ರಶ್ನೆಗೆ ಈಗಲೇ ಉತ್ತರ ಕೊಡುವುದು ಕಷ್ಟ. ಆದರೂ, ಒಂದ್ವೇಳೆ ಚಂದನ್ ಶೆಟ್ಟಿ ವಿನ್ನರ್ ಆದರೆ ತಮ್ಮ ತಂದೆಯ ಆಸೆಯನ್ನ ಈಡೇರಿಸುತ್ತಾರಂತೆ.! ಮುಂದೆ ಓದಿರಿ....

  'ಬಿಗ್ ಬಾಸ್' ಅವಕಾಶ ಕಲ್ಪಿಸಿದಾಗ...

  'ಬಿಗ್ ಬಾಸ್' ಅವಕಾಶ ಕಲ್ಪಿಸಿದಾಗ...

  ತಮ್ಮಲ್ಲಿರುವ ವೈಶಿಷ್ಟತೆ ಏನು ಹಾಗೂ ತಾವು ಈ ಸ್ಪರ್ಧೆಯನ್ನು ಏಕೆ ಗೆಲ್ಲಬೇಕು ಎಂದು ಎಲ್ಲರ ಮುಂದೆ ವಿವರಿಸುವ ಅವಕಾಶವನ್ನ ಎಲ್ಲ ಸ್ಪರ್ಧಿಗಳಿಗೂ 'ಬಿಗ್ ಬಾಸ್' ಕಲ್ಪಿಸಿದರು. ಇದರ ಅನುಸಾರ ತಮ್ಮ ಮನಸ್ಸಿನಲ್ಲಿ ಇರುವ ಆಸೆಯನ್ನ ಚಂದನ್ ಶೆಟ್ಟಿ ಹೊರ ಹಾಕಿದರು.

  'ಬಿಗ್ ಬಾಸ್' ಏನೇ ಮಾಡಿದರೂ, ಚಂದನ್ ಶೆಟ್ಟಿ ಲೆಕ್ಕ ಮಾತ್ರ ಪಕ್ಕಾ.!

  'ಬಿಗ್ ಬಾಸ್' ಗೆಲ್ಲಬೇಕು.! ಯಾಕೆ ಅಂದ್ರೆ...

  'ಬಿಗ್ ಬಾಸ್' ಗೆಲ್ಲಬೇಕು.! ಯಾಕೆ ಅಂದ್ರೆ...

  ''ಮನುಷ್ಯನ ವ್ಯಕ್ತಿತ್ವಕ್ಕೆ ಸರ್ಟಿಫಿಕೇಟ್ ಸಿಗುವುದು 'ಬಿಗ್ ಬಾಸ್' ಮನೆಯಲ್ಲಿ ಮಾತ್ರ. ಆ ಸರ್ಟಿಫಿಕೇಟ್ ಮೇಲೆ ಗೆಲುವಿನ ಸೀಲ್ ಬಿದ್ದರೆ, ಅದರ ವಾಲ್ಯು ಹೆಚ್ಚಾಗುತ್ತದೆ. ನನ್ನ ಸರ್ಟಿಫಿಕೇಟ್ ಮೇಲೆ ಆ ಸೀಲ್ ಬೇಕು ಎನ್ನುವುದು ನನ್ನ ಆಸೆ'' - ಚಂದನ್ ಶೆಟ್ಟಿ

  ದಿವಾಕರ್ ಗೆದ್ದರೆ ಚಂದನ್ ಶೆಟ್ಟಿಗೆ ತಾನು ಗೆದ್ದಷ್ಟೇ ಖುಷಿ.!

  ಆತ್ಮವಿಶ್ವಾಸ ಮೂಡಿದೆ

  ಆತ್ಮವಿಶ್ವಾಸ ಮೂಡಿದೆ

  ''ಪೆನ್ನು ಪೇಪರ್, ವಾದ್ಯ ಇಲ್ಲದೆ ಹಾಡನ್ನ ಕಂಪೋಸ್ ಮಾಡಬಹುದು ಎಂಬ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ಆದ್ರೆ, ಈ ಮನೆ ನನಗೆ ತಂದುಕೊಡ್ತು'' - ಚಂದನ್ ಶೆಟ್ಟಿ

  ಸತತ ಏಳು ವಾರ ಸೇಫ್ ಆದ ಚಂದನ್ ಶೆಟ್ಟಿ: ಇದು ದಾಖಲೆ ಅಲ್ಲದೇ ಮತ್ತೇನು.?

  'ಬಿಗ್ ಬಾಸ್' ವಿನ್ನರ್ ಪಟ್ಟ ಯಾಕೆ ಬೇಕು.?

  'ಬಿಗ್ ಬಾಸ್' ವಿನ್ನರ್ ಪಟ್ಟ ಯಾಕೆ ಬೇಕು.?

  ''ಒಬ್ಬ ವ್ಯಕ್ತಿಗೆ ಅವನ ಪ್ರೋಫೈಲ್ ತುಂಬಾ ಮುಖ್ಯ. ನಾನು ಎಲ್ಲೇ ಹೋದರೂ, 'ಬಿಗ್ ಬಾಸ್ ವಿನ್ನರ್' ಅಂತ ಹೇಳಿದಾಗ ನನ್ನ ಪ್ರೋಫೈಲ್ ಗೆ ಹೆಚ್ಚು ವಾಲ್ಯು ಸಿಗುತ್ತೆ. ಹೀಗಾಗಿ ನನಗೆ 'ವಿನ್ನರ್' ಅಂತ ಟೈಟಲ್ ಬೇಕು'' - ಚಂದನ್ ಶೆಟ್ಟಿ

  ಸ್ಪರ್ಧಿಗಳ ಪ್ರಕಾರ ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-5' ವಿಜೇತ.!

  ತಂದೆಯ ಆಸೆ ಈಡೇರಿಸುವೆ

  ತಂದೆಯ ಆಸೆ ಈಡೇರಿಸುವೆ

  ''ದುಡ್ಡಿನ ಬಗ್ಗೆ ನನಗೆ ವ್ಯಾಮೋಹ ಇಲ್ಲ. ಆದ್ರೆ, ನಮ್ಮ ಕುಟುಂಬಕ್ಕೆ ಈ ಭೂಮಿ ಮೇಲೆ ಸ್ವಂತ ಜಾಗ ಅಂತ ಇಲ್ಲ. ಇದ್ದ ಆಸ್ತಿಯನ್ನ ಅನಿವಾರ್ಯ ಕಾರಣಗಳಿಂದ ಮಾರಬೇಕಾಯಿತು. ಸ್ವಂತ ಮನೆ ಮಾಡಬೇಕು ಎಂಬುದು ನನ್ನ ತಂದೆ ಆಸೆ. ಬರುವ ಹಣದಲ್ಲಿ ನನ್ನ ತಂದೆ ಆಸೆಯನ್ನ ಈಡೇರಿಸುತ್ತೇನೆ. ನನಗಾಗಿ ವೋಟ್ ಮಾಡಿರುವ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ'' ಎಂದರು ಚಂದನ್ ಶೆಟ್ಟಿ

  ಚಂದನ್ ಶೆಟ್ಟಿ ರನ್ನ ಗೆಲ್ಲಿಸುವ ಇಚ್ಛೆ ಇದ್ಯಾ.?

  ಚಂದನ್ ಶೆಟ್ಟಿ ರನ್ನ ಗೆಲ್ಲಿಸುವ ಇಚ್ಛೆ ಇದ್ಯಾ.?

  'ಬಿಗ್ ಬಾಸ್' ಯಾಕೆ ಗೆಲ್ಲಬೇಕು ಎಂಬುದರ ಬಗ್ಗೆ ಚಂದನ್ ಶೆಟ್ಟಿ ಅಂತೂ ವಿವರಣೆ ಕೊಟ್ಟಾಯ್ತು. ಚಂದನ್ ಶೆಟ್ಟಿ ಅವರನ್ನ ಗೆಲ್ಲಿಸುವ ಇಚ್ಛೆ ನಿಮಗಿದ್ದರೆ, ಅವರ ಪರ ಮತ ಹಾಕಿ...

  English summary
  Bigg Boss Kannada 5: Week 14: Chandan Shetty is planning to fulfill his father's desire by purchasing a house in the prize money if he wins #BBK5 show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X