»   » 'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

Posted By:
Subscribe to Filmibeat Kannada
Bigg Boss Kannada 5 To Have Few Common Man | Filmibeat Kannada

'ಬಿಗ್ ಬಾಸ್ ಕನ್ನಡ 5' ಈ ಬಾರಿ ಹೆಚ್ಚು ಸುದ್ದಿ ಮಾಡುತ್ತಿರುವುದೇ ಜನಸಮಾನ್ಯರಿಗೆ ಪ್ರವೇಶ ನೀಡಿರುವುದರಿಂದ. ಮೊಟ್ಟಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ನಲ್ಲಿ ಕಾಮನ್ ಮ್ಯಾನ್ ಗಳು ಕಾಲಿಡುತ್ತಿದ್ದಾರೆ.

ಆದ್ರೆ, ಎಷ್ಟು ಜನ ಬಿಗ್ ಮನೆಗೆ ಎಂಟ್ರಿ ಪಡೆಯಬಹುದು ಎಂಬ ಕುತೂಹಲ, ಚರ್ಚೆ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಈ ಪ್ರಶ್ನೆಗೆ ಸ್ವತಃ ಬಿಗ್ ಬಾಸ್ ಅಯೋಜಕರು, ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ವಾಹಿನಿಯ ಬಿಸಿನೆಸ್ ಹೆಡ್ ಆಗಿರುವ ಪರಮೇಶ್ವರ ಗುಂಡ್ಕಲ್ ಅವರೇ 'ಫಿಲ್ಮಿಬೀಟ್ ಕನ್ನಡ'ಕ್ಕೆ ಉತ್ತರಿಸಿದ್ದಾರೆ. ಹಾಗಿದ್ರೆ, ಎಷ್ಟು ಜನಸಾಮಾನ್ಯರು ಬಿಗ್ ಮನೆಗೆ ಟಿಕೆಟ್ ಪಡೆಯುತ್ತಾರೆ? ಮುಂದೆ ಓದಿ.....

ಒಟ್ಟು 16 ಜನರಿಗೆ ಪ್ರವೇಶ

''ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಸುಮಾರು 16 ಸ್ಪರ್ಧಿಗಳು ಪ್ರವೇಶಿಸುವ ಸಾಧ್ಯತೆ ಇದೆ. ಮೊದಲು 15 ಜನ ಎಂದುಕೊಂಡಿದ್ವಿ. ಆದ್ರೆ, ಕಾಮನ್ ಮ್ಯಾನ್ ಗಳ ಪ್ರೊಫೈಲ್ ನೋಡಿದ್ಮೇಲೆ ಇಂಟ್ರೆಸ್ಟಿಂಗ್ ಆಗಿತ್ತು. ಹಾಗಾಗಿ, ಒಟ್ಟು ಸಂಖ್ಯೆಯಲ್ಲೂ ಹೆಚ್ಚು ಮಾಡಬೇಕು ಎನಿಸಿತು'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್' ಶೋ ಕಲರ್ಸ್ ಸೂಪರ್ ಗೆ ಶಿಫ್ಟ್ ಆಗಲು 2 ಬಲವಾದ ಕಾರಣ

ಮೊದಲು ಅಂದುಕೊಂಡಿದ್ದು....

''ಮೊದಲು ಕಾಮನ್ ಮ್ಯಾನ್ ಗಳು ಅಂದಾಗ, 3 ರಿಂದ 4 ಜನ ಆಯ್ಕೆ ಮಾಡಬೇಕು ಅಂದುಕೊಂಡ್ವಿ. ಒಟ್ಟು 15 ಜನರನ್ನ ಬಿಗ್ ಬಾಸ್ ಮನೆಗೆ ಕಳುಹಿಸಬೇಕು. ಅದಕ್ಕಿಂತ ಹೆಚ್ಚು ಜನರು ಬೇಡ ಎಂದು ಯೋಚಿಸಿದ್ವಿ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಅಂತಿಮವಾಗಿ ಎಷ್ಟು ಜನಸಾಮನ್ಯರಿಗೆ ಟಿಕೆಟ್ ಸಿಕ್ತು

''ಜನ ಸಾಮಾನ್ಯರ ಪಟ್ಟಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಗಮನ ಸೆಳೆಯುತ್ತಿದ್ದರು. ಹಾಗಾಗಿ, ನಮ್ಮ ನಿಲುವನ್ನ ಬದಲಿಸಿಕೊಂಡು, ಮತ್ತಿಬ್ಬರಿಗೆ ಅವಕಾಶ ಕೊಡೋಣ ಅಂತ ಮನಸ್ಸು ಬದಲಾಯಿಸಿದ್ವಿ. ಅಂತಿಮ ಕ್ಷಣದಲ್ಲಿ 5 ರಿಂದ 6 ಜನ ಕಾಮನ್ ಮ್ಯಾನ್ ಪಟ್ಟಿಯಲ್ಲಿ ಎಂಟ್ರಿ ಕೊಡಬಹುದು'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್'ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ.?

ಕಾಮನ್ ಮ್ಯಾನ್ ಗಳ 'ಬಿಗ್ ಬಾಸ್' ಮಾಡಬಹುದು

''ಒಟ್ಟು 15 ಜನರು, ಕಾಮನ್ ಮ್ಯಾನ್ ಗಳನ್ನ ಒಳಗೊಂಡಿರುವ ಬಿಗ್ ಬಾಸ್ ಮಾಡಬೇಕೆಂಬುವುದು ನಮ್ಮ ಆಸೆಯೂ ಹೌದು. ಆದ್ರೆ, ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಯಾಕಂದ್ರೆ, ಈ ಹಿಂದೆ ಸೆಲೆಬ್ರಿಟಿಗಳ ಬಿಗ್ ಬಾಸ್ ನೋಡಿ ಖುಷಿ ಪಟ್ಟಿದ್ದ ಜನ, ಕಾಮನ್ ಮ್ಯಾನ್ ಗಳ ಬಿಗ್ ಬಾಸ್ ನಲ್ಲಿ ನಿರೀಕ್ಷೆಯ ಮನರಂಜನೆ ಸಿಗದೇ ಇದ್ದಾಗ ಅದು ಹಿನ್ನೆಡೆಯಾಗುತ್ತೆ ಎಂಬ ಆತಂಕ. ಆದ್ರೂ, ಮುಂದಿನ ದಿನಗಳಲ್ಲಿ ಇದು ಸಾಧ್ಯವಾದರೂ ಅಚ್ಚರಿಯಿಲ್ಲ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್ ಕನ್ನಡ-5': ಸ್ಪರ್ಧಿಗಳ ಪಟ್ಟಿಯಲ್ಲಿ 'ಇವರುಗಳ' ಹೆಸರು ಇದ್ಯಂತೆ.!

English summary
Bigg Boss Kannada 5 to have few common men says Bigg Boss reality show Director Parameshwar Gundkal in Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada