For Quick Alerts
  ALLOW NOTIFICATIONS  
  For Daily Alerts

  ಟಾಪ್ 5 ಸ್ಪರ್ಧಿಗಳ ಕುಟುಂಬದವರ ಪ್ರಕಾರ 'ಇವರೇ' ಬಿಗ್ ಬಾಸ್ ಗೆಲ್ಲಬೇಕು.!

  By Harshitha
  |

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಟಾಪ್ 3 ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಮೂವರ ಪೈಕಿ ಯಾರು ವಿನ್ನರ್ ಆಗಿ 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿ ಅನೌನ್ಸ್ ಆಗಿಲ್ಲ.

  ವೀಕ್ಷಕರಂತೂ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದ್ರೆ, ಟಾಪ್ 5 ಹಂತ ತಲುಪಿದ್ದ ಶ್ರುತಿ ಪ್ರಕಾಶ್, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್ ಹಾಗೂ ದಿವಾಕರ್ ಕುಟುಂಬದವರ ಪ್ರಕಾರ 'ಬಿಗ್ ಬಾಸ್' ವಿನ್ನರ್ ಯಾರಾಗಬೇಕು ಗೊತ್ತಾ.?

  ಗ್ರ್ಯಾಂಡ್ ಫಿನಾಲೆಯ ಮೊದಲ ದಿನವಾದ ನಿನ್ನೆ (ಶನಿವಾರ ಜನವರಿ 27) ಫೈನಲ್ ತಲುಪಿದ್ದ ಸ್ಪರ್ಧಿಗಳ ಕುಟುಂಬದವರನ್ನು ವೇದಿಕೆ ಮೇಲೆ ಆಹ್ವಾನಿಸಲಾಗಿತ್ತು. ಅಗ ಸ್ಪರ್ಧಿಗಳ ಕುಟುಂಬದವರು ಸುದೀಪ್ ಮುಂದೆ ಹೇಳಿದಿಷ್ಟು....

  ಕಾರ್ತಿಕ್ ತಂದೆ ಹೇಳಿದ್ದೇನು.?

  ಕಾರ್ತಿಕ್ ತಂದೆ ಹೇಳಿದ್ದೇನು.?

  ''ಕೆಲವು ಬಾರಿ ಕೆಲಸದ ನಿಮಿತ್ತ ಹೊರದೇಶಕ್ಕೆ ಹೋದಾಗ ಆರು ತಿಂಗಳು ಅವನು (ಜೆಕೆ) ಬರ್ತಿರ್ಲಿಲ್ಲ. ಆದ್ರೆ, 'ಬಿಗ್ ಬಾಸ್' ನಲ್ಲಿ ಮೂರು ತಿಂಗಳು ಬೇಗ ಆಗ್ಹೋಯ್ತು. ಹೀಗಾಗಿ ಮಗನನ್ನ ನಾನು ಮಿಸ್ ಮಾಡಿಕೊಳ್ಳಲಿಲ್ಲ'' ಎಂದು ಜೆಕೆ ತಂದೆ ಜಯರಾಂ ಹೇಳಿದರು. ಜೊತೆಗೆ ಕನ್ನಡ ಜನತೆ ಕಾರ್ತಿಕ್ ನ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

  ಇಂದು 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿಯುವುದು ಕಾಮನ್ ಮ್ಯಾನ್ ನಾ.? ಸೆಲೆಬ್ರಿಟಿನಾ.?

  ಮಗನೇ ಗೆಲ್ಲಬೇಕು

  ಮಗನೇ ಗೆಲ್ಲಬೇಕು

  ''ಚಂದನ್ ತಂದೆಗೆ ಹುಷಾರಿಲಿಲ್ಲ. ಅವತ್ತು ನಾನು ಚಂದನ್ ನ ತುಂಬಾ ಮಿಸ್ ಮಾಡಿಕೊಂಡೆ'' ಎಂದು ಹೇಳಿದ ಚಂದನ್ ಶೆಟ್ಟಿ ತಾಯಿ ಪ್ರೇಮ ಅವರಿಗೆ ತಮ್ಮ ಮಗನೇ ಗೆಲ್ಲಬೇಕು ಎಂಬ ಆಸೆ ಇದೆ.

  ನಿವೇದಿತಾ ತಾಯಿ ಪ್ರಕಾರ ಯಾರು ಗೆಲ್ಲಬೇಕು.?

  ನಿವೇದಿತಾ ತಾಯಿ ಪ್ರಕಾರ ಯಾರು ಗೆಲ್ಲಬೇಕು.?

  ''ಯಾವತ್ತೂ ಅವಳನ್ನ ಬಿಟ್ಟು ಇದ್ದಿಲ್ಲ. ಹೀಗಾಗಿ ಮೊದಲ ದಿನದಿಂದಲೂ ಮಿಸ್ ಮಾಡಿಕೊಳ್ತಿದ್ದೀವಿ. ಹೋಗ್ತಾ ಹೋಗ್ತಾ ಟಿವಿಯಲ್ಲಿ ನೋಡಿ ಸಮಾಧಾನ ಮಾಡಿಕೊಳ್ತಿದ್ವಿ. ಅವಳು (ನಿವೇದಿತಾ) ಅತ್ತಾಗ ಮಾತ್ರ ತುಂಬಾ ಬೇಜಾರು ಆಗೋದು'' ಎಂದು ಹೇಳಿದ ನಿವೇದಿತಾ ತಾಯಿಗೆ ಚಂದನ್ ಶೆಟ್ಟಿ ಗೆಲ್ಲಬೇಕು ಎಂಬ ಇಚ್ಛೆ ಇದೆ.

  'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?

  ದಿವಾಕರ್ ಗೆಲ್ಲಬೇಕು

  ದಿವಾಕರ್ ಗೆಲ್ಲಬೇಕು

  ''ನನ್ನ ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದಾಗ ಅವರನ್ನ ತುಂಬಾ ಮಿಸ್ ಮಾಡಿಕೊಂಡೆ'' ಎನ್ನುವ ದಿವಾಕರ್ ಪತ್ನಿ ಮಮತಾಗೇ ತಮ್ಮ ಪತಿಯೇ ವಿನ್ನರ್ ಆಗಬೇಕು ಎಂಬ ಬಯಕೆ ಇದೆ.

  'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?

  ಶ್ರುತಿ ಸಹೋದರಿ ಪ್ರಕಾರ...

  ಶ್ರುತಿ ಸಹೋದರಿ ಪ್ರಕಾರ...

  ''ಪತ್ರ ಬರೆದಾಗ, ಅದನ್ನ ಓದಲು ಶ್ರುತಿಗೆ ಅವಕಾಶ ಸಿಗಲಿಲ್ಲ. ಆಗ ಬಹಳ ಬೇಜಾರು ಮಾಡಿಕೊಂಡ್ವಿ'' ಎಂದ ಶ್ರುತಿ ಸಹೋದರಿ ಪ್ರಕಾರ ದಿವಾಕರ್ ಗೆಲ್ಲಬೇಕು.

  English summary
  Bigg Boss Kannada 5: Grand Finale: Top 5 contestants family share their opinion about who will win #BBK5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X