»   » ಚಂದನ್ ಶೆಟ್ಟಿ ಮೇಲೆ ಬಿದ್ದಿತ್ತು ಟರ್ಕಿಶ್ ಹುಡುಗಿಯ ಕಣ್ಣು.!

ಚಂದನ್ ಶೆಟ್ಟಿ ಮೇಲೆ ಬಿದ್ದಿತ್ತು ಟರ್ಕಿಶ್ ಹುಡುಗಿಯ ಕಣ್ಣು.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಚಂದನ್ ಶೆಟ್ಟಿ ಮೇಲೆ ಟರ್ಕಿಶ್ ಹುಡುಗಿ ಕಣ್ಣು | FIlmibeat Kannada

ಪ್ರತಿಭಾವಂತ ಗಾಯಕ ಚಂದನ್ ಶೆಟ್ಟಿ ರನ್ನ ನೋಡಿ ಟರ್ಕಿಶ್ ಹುಡುಗಿ ಕ್ಲೀನ್ ಬೌಲ್ಡ್ ಆಗಿದ್ದಳಂತೆ. ಹಾಗಂತ 'ಬಿಗ್ ಬಾಸ್' ಮನೆಯಲ್ಲಿ ಚಂದನ್ ಶೆಟ್ಟಿ ಬಾಯ್ಬಿಟ್ಟಿದ್ದಾರೆ.

ಇನ್ಸ್ ಟಾಗ್ರಾಮ್ ನಲ್ಲಿ ಚಂದನ್ ಶೆಟ್ಟಿ ಹಾಗೂ ಟರ್ಕಿಶ್ ಹುಡುಗಿ ಫ್ರೆಂಡ್ಸ್ ಆಗಿದ್ದರಂತೆ. ಚಂದನ್ ಶೆಟ್ಟಿ ಜೊತೆ ಚಾಟಿಂಗ್ ಮಾಡುತ್ತಿದ್ದ ಆ ಹುಡುಗಿ ಇದ್ದಕ್ಕಿದ್ದಂತೆ 'ಮದುವೆ ಆಗೋಣ' ಎಂದು ಹೇಳಿದ್ದಳಂತೆ.

'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.!

Bigg Boss Kannada 5: Turkish girl had a crush on Rapper Chandan Shetty

''ಇನ್ಸ್ ಟಾಗ್ರಾಮ್ ನಲ್ಲಿ ಟರ್ಕಿಶ್ ಹುಡುಗಿ ಮೆಸೇಜ್ ಮಾಡಲು ಶುರು ಮಾಡಿದಳು. ಎರಡನೇ ದಿನ ಮದುವೆ ಆಗೋಣ ಎಂದಳು. ಅವಳಿಗೆ ಇಂಗ್ಲೀಷ್ ಬರಲ್ಲ. ನಾವು ಗೂಗಲ್ ಟ್ರಾನ್ಸ್ ಲೇಟರ್ ಬಳಸಿ ಚಾಟ್ ಮಾಡುತ್ತಿದ್ವಿ'' ಎಂದು ಲಿವಿಂಗ್ ಏರಿಯಾದಲ್ಲಿ ಕಸ ಗುಡಿಸುವಾಗ ಚಂದನ್ ಶೆಟ್ಟಿ, ಆಶಿತಾ ಬಳಿ ಹೇಳಿದರು.

ಟರ್ಕಿಶ್ ಹುಡುಗಿ ಜೊತೆ ಎರಡು ದಿನ ಚಾಟಿಂಗ್ ಮಾಡಿದ ಚಂದನ್ ಶೆಟ್ಟಿ ನಂತರ ಬೋರ್ ಆಯ್ತು ಅಂತ ಚಾಟಿಂಗ್ ನಿಲ್ಲಿಸಿಬಿಟ್ಟರಂತೆ.

ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?

ಆದ್ರೆ, ''ಹುಡುಗಿ ಸಖತ್ತಾಗಿದ್ದಳು'' ಎನ್ನುವುದನ್ನ ಮಾತ್ರ ಚಂದನ್ ಶೆಟ್ಟಿ ಮರೆಯಲಿಲ್ಲ. ಅಷ್ಟಕ್ಕೂ, ಆ ಹುಡುಗಿಯ ಫೋಟೋನ ಚಂದನ್ ಶೆಟ್ಟಿ ತಮ್ಮ ತಂದೆಗೆ ತೋರಿಸಿದರಂತೆ. ಫೋಟೋ ನೋಡಿ ಖುಷಿ ಪಟ್ಟು 'ಮದುವೆ ಆಗು' ಅಂತ ಚಂದನ್ ಶೆಟ್ಟಿ ತಂದೆ ಹೇಳಿದರಂತೆ. ಆದ್ರೆ, ಚಂದನ್ ಶೆಟ್ಟಿ ಮಾತ್ರ ಯಾಕೋ ಮನಸ್ಸು ಮಾಡಲಿಲ್ಲ.

English summary
Bigg Boss Kannada 5: Week 3: Rapper Chandan Shetty talks about a Turkish girl who had asked him to marry her on Instagram. ಇನ್ಸ್ ಟಾಗ್ರಾಮ್ ನಲ್ಲಿ ಚಂದನ್ ಶೆಟ್ಟಿಗೆ ಟರ್ಕಿಶ್ ಹುಡುಗಿಯೊಬ್ಬಳು ತಮ್ಮನ್ನ ಮದುವೆ ಆಗುವಂತೆ ಕೇಳಿದ್ದಳಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X