»   » ಚಂದನ್ ಶೆಟ್ಟಿ ಹಣೆ ಚಚ್ಚಿಕೊಂಡರು: 'ಕೊಬ್ಬಿನ' ಬಗ್ಗೆ ಆಶಿತಾ ಕೂಗಾಡಿದರು.!

ಚಂದನ್ ಶೆಟ್ಟಿ ಹಣೆ ಚಚ್ಚಿಕೊಂಡರು: 'ಕೊಬ್ಬಿನ' ಬಗ್ಗೆ ಆಶಿತಾ ಕೂಗಾಡಿದರು.!

Posted By:
Subscribe to Filmibeat Kannada

ಸಿಹಿ ಕಹಿ ಚಂದ್ರು, ಆಶಿತಾ, ಕೃಷಿ ಕೈಯಲ್ಲಿ ಇದ್ದ ಅಡುಗೆ ಮನೆಯ ಡಿಪಾರ್ಟ್ಮೆಂಟ್ ನ ಕಳೆದ ವಾರ ಕ್ಯಾಪ್ಟನ್ ರಿಯಾಝ್... ಚಂದನ್ ಶೆಟ್ಟಿ, ಸಮೀರಾಚಾರ್ಯ ಗೆ ವಹಿಸಿದ್ದು 'ಬಿಗ್ ಬಾಸ್' ಮನೆಯ ಕೆಲ ಸ್ಪರ್ಧಿಗಳಿಗೆ ಸಹಿಸಲಸಾಧ್ಯವಾಗಿದೆ.

ಅಡುಗೆ ಮನೆಯ ವ್ಯವಸ್ಥೆ ಬಗ್ಗೆ ಅನುಪಮಾ ಗೌಡ, ಕೃಷಿ ಹಾಗೂ ಆಶಿತಾ ಆಗಾಗ ಕಂಪ್ಲೇಂಟ್ ಮಾಡುತ್ತಲೇ ಇದ್ದರು. ಅಡುಗೆ ಚೆನ್ನಾಗಿಲ್ಲ. ಸಾಂಬಾರು ನೀರಾಗಿದೆ ಅಂತ ತೇಜಸ್ವಿನಿ ಹತ್ತಿರ ಆಶಿತಾ ಮಾತನಾಡುತ್ತಿದ್ದಾಗ, ಅದನ್ನ ಕೇಳಿಸಿಕೊಂಡ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಹೆಡ್ ಚಂದನ್ ಶೆಟ್ಟಿ ತಲೆ ಚಚ್ಚಿಕೊಂಡರು. ಇದನ್ನ ನೋಡಿ ಆಶಿತಾ ಕೋಪಗೊಂಡರು. ಮುಂದೆ ಓದಿರಿ...

ಹಗ್ಗನ ಹಾವು ಎಂದುಕೊಳ್ಳುವ ಆಶಿತಾ.!

ಚಂದನ್ ಶೆಟ್ಟಿ ಕೊಟ್ಟ ಪ್ರತಿಕ್ರಿಯೆ ಬಗ್ಗೆ ಆಶಿತಾ ಪ್ರಶ್ನೆ ಮಾಡಿದಾಗ, ''ಏನು ಗೊತ್ತಾ.? ನೀನು ಎಲ್ಲದಕ್ಕೂ ತಪ್ಪು ತಿಳಿದುಕೊಳ್ತೀಯಾ. ಹಗ್ಗನೂ ಹಾವು ಅಂತ ಅಂದುಕೊಳ್ತೀಯಾ'' ಅಂತ ಚಂದನ್ ಶೆಟ್ಟಿ ಬಾಣ ಬಿಟ್ಟರು.

ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!

ಎದ್ದು ಹೊರ ನಡೆದ ಚಂದನ್ ಶೆಟ್ಟಿ

''ಹಲೋ, ನಾವೇನು ಅಂದುಕೊಂಡಿಲ್ಲ. ಸ್ವಲ್ಪ ಸುಮ್ನೆ ಇರು. ಸರಿಯಾಗಿ ಮಾತಾಡು'' ಅಂತ ಆಶಿತಾ ಜೋರು ಮಾಡುತ್ತಿದ್ದಂತೆಯೇ, ''ನನಗೆ ಇಲ್ಲಿ ತುಂಬಾ ಡಿಸ್ಟರ್ಬ್ ಆಗ್ತಿದೆ'' ಅಂತ ಚಂದನ್ ಶೆಟ್ಟಿ ಎದ್ದು ಹೊರಗೆ ಹೊರಟರು.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಕೊಬ್ಬು ತೋರಿಸಬೇಡ.!

ಚಂದನ್ ಶೆಟ್ಟಿ ಹೊರಗೆ ಹೋಗುತ್ತಿದ್ದಂತೆಯೇ, ''ನೀನು ನಿನ್ನ ಕೊಬ್ಬೆಲ್ಲ ನನಗೆ ತೋರಿಸಬೇಡ. ನಿನ್ನ ಮನೆಯಲ್ಲಿ ಇಟ್ಕೋ'' ಅಂತ ಆಶಿತಾ ಕೂಗಾಡಿದರು. ''ಇದೆಲ್ಲ ಇರಿಟೇಷನ್ ನನಗೆ'' ಅಂತ ಚಂದನ್ ಶೆಟ್ಟಿ ಗೊಣಗಿದರು.

ಚಂದನ್ ಶೆಟ್ಟಿಗೆ ಹುಚ್ಚು ಹಿಡಿದಿದ್ಯಾ.?

''ತಪ್ಪು ಮಾಡೋದು ಅವನು ಯಾವಾಗಲೂ, ಆದ್ರೆ ನನ್ನ ಮೇಲೆ ಹಾಕ್ತಾನೆ. ಹೀ ಹ್ಯಾಸ್ ಗಾನ್ ಮ್ಯಾಡ್ ಅನ್ಸತ್ತೆ ನನಗೆ (ಅವನಿಗೆ ಹುಚ್ಚು ಹಿಡಿದಿದೆ ಅನ್ಸುತ್ತೆ ನನಗೆ)'' ಎಂದುಬಿಟ್ಟರು ಆಶಿತಾ.

ಕಿರಿಕಿರಿ ಮಾಡುವವರ ಜೊತೆ ಮಾತನಾಡಲ್ಲ.!

''ಯಾವಾಗಲೂ ಕಿರುಚುತ್ತಾರೆ. ನಾನೂ ಕೂಡ ಮಾತನಾಡಬಹುದು. ಆದ್ರೆ, ಇರಿಟೇಷನ್ ಕ್ಯಾರೆಕ್ಟರ್ ಜೊತೆ ನಾನು ಮಾತನಾಡಲ್ಲ'' ಅಂತ ಕಡ್ಡಿತುಂಡು ಮಾಡಿದ ಹಾಗೆ ಚಂದನ್ ಶೆಟ್ಟಿ ಹೇಳಿದರು.

ರಿಯಾಝ್ ಕಡೆ ಮಾತು ತಿರುಗಿಸಿದ ಆಶಿತಾ

''ರಿಯಾಝ್... ನೀವು ತುಂಬಾ ದೊಡ್ಡ ತಪ್ಪು ಮಾಡಿದ್ದೀರಾ. ನಿಮ್ಮ ಕ್ಯಾಪ್ಟನ್ ಶಿಪ್ ನಲ್ಲಿ ಅಡುಗೆ ಮನೆ ಡಿಪಾರ್ಟ್ಮೆಂಟ್ ಅಂತೂ ಬಿಗೆಸ್ಟ್ ಬ್ಲಂಡರ್'' ಅಂತ ಹೇಳ್ತಾ ಅಡುಗೆ ಮನೆ ಡಿಪಾರ್ಟ್ಮೆಂಟ್ ಮೇಲೆ ಆಶಿತಾ ದೂರುಗಳ ಪಟ್ಟಿ ಸಲ್ಲಿಸಿದರು.

English summary
Bigg Boss Kannada 5: Week 4: Verbal fight between Ashita and Chandan Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X